ರಾಜಸ್ಥಾನ: ಅಶ್ಲೀಲ ವಿಡಿಯೋ ವೈರಲ್; ಡಿಎಸ್‌ಪಿ, ಮಹಿಳಾ ಕಾನ್ಸ್‌ಟೇಬಲ್‌ ಸೇವೆಯಿಂದ ವಜಾ; ಬಂಧನ

ಅಪ್ರಾಪ್ರ ಬಾಲಕ ಎದುರೇ ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ವಿಡಿಯೋ ವೈರಲ್‌ಆದ ಬಳಿಕ ರಾಜಸ್ಥಾನದ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮಹಿಳಾ ಕಾನ್ಸ್ಟೇಬಲ್‌ ಅವರನ್ನು ರಾಜಸ್ಥಾನ ಸರ್ಕಾರ ಸೇವೆಯಿಂದ ವಜಾಗೊಳಿಸಿದೆ. ಅಲ್ಲದೆ, ಇಬ್ಬರನ್ನೂ ಬಂಧಿಸಲಾಗಿದೆ.

ರಾಜಸ್ಥಾನ ನಾಗರಿಕ ಸೇವೆಗಳ ನಿಯಮಗಳ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಕಚೇರಿಯಿಂದ ಅಧಿಕೃತ ಅನುಮೋದನೆ ದೊರೆತಿದ್ದು, ಇಬ್ಬರನ್ನೂ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಎಂ ಎಲ್ ಲಾಥರ್ ಖಚಿತಪಡಿಸಿದ್ದಾರೆ.

ವಿಡಿಯೋ ವೈರಲ್ ಆದ ನಂತರ, ಪೊಲೀಸ್ ಇಲಾಖೆಯು ಸೆಪ್ಟೆಂಬರ್ 8 ರಂದು ಇಬ್ಬರನ್ನೂ ಸೇವೆಯಿಂದ ಅಮಾನತುಗೊಳಿಸಿತ್ತು. ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ)ಗೆ ರಾಜಸ್ಥಾನ ಪೊಲೀಸ್ ಸೇವೆ (ಆರ್‌ಪಿಎಸ್) ಅಧಿಕಾರಿ ಹೀರಾ ಲಾಲ್ ಸೈನಿ (ಡಿಸಿಪಿ) ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಸೆಪ್ಟೆಂಬರ್‌ 9ರಂದು ಬಂಧಿಸಿತ್ತು. ಮಹಿಳಾ ಕಾನ್ಸ್ಟೇಬಲ್ ಅನ್ನು ಸೆಪ್ಟೆಂಬರ್ 12 ರಂದು ಬಂಧಿಸಿದೆ.

ಪೊಲೀಸರ ಪ್ರಕಾರ, ವೀಡಿಯೊ ಕ್ಲಿಪ್‌ಗಳನ್ನು ಮೊಬೈಲ್ ಫೋನ್‌ನಲ್ಲಿ ಕಾನ್‌ಸ್ಟೇಬಲ್ ಜುಲೈ 10 ರಂದು ಪುಷ್ಕರ್ ಪಟ್ಟಣದ ರೆಸಾರ್ಟ್‌ನಲ್ಲಿ ಸೆರೆಹಿಡಿದ್ದಾರೆ. ವಿಡಿಯೋದಲ್ಲಿ, ಸೈನಿ ಅವರು ಮಹಿಳಾ ಕಾನ್ಸ್‌ಟೇಬಲ್‌ ಜೊತೆಗೆ ವಿವಸ್ತ್ರವಾಗಿ ಈಜುಕೊಳದಲ್ಲಿರುವುದು ಕಂಡುಬಂದಿದೆ. ಆ ವೇಳೆ, ಮಹಿಳಾ ಕಾನ್ಸ್‌ಟೇಬಲ್‌ ಅವರ ಆರು ವರ್ಷದ ಮಗ ಈಜುಕೊಳದ ಬಳಿ ಇರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಿದ್ದನ್ನು ಗಮನಿಸಿದ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಅಪ್ರಾಪ್ತ ಮಕ್ಕಳ ಎದರು ಲೈಂಗಿಕ ಚಟುವಟಿಕೆ ನಡೆಸಿದ್ದಕ್ಕಾಗಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ.

ಸೈನಿ ಮತ್ತು ಕಾನ್‌ಸ್ಟೇಬಲ್ ಹೊರತುಪಡಿಸಿ, ಜೈಪುರ್ ಮತ್ತು ನಾಗೌರ್‌ನ ಎರಡು ಪೊಲೀಸ್ ಠಾಣೆಗಳ ಇಬ್ಬರು ಆರ್‌ಪಿಎಸ್ ಅಧಿಕಾರಿಗಳು ಮತ್ತು ಎಸ್‌ಎಚ್‌ಒಗಳನ್ನು ಸಹ ಕರ್ತವ್ಯ ಲೋಪದ ಆರೋಪದಲ್ಲಿ ಅಮಾನತುಗೊಳಿಸಲಾಗಿದೆ.

ಪೋಕ್ಸೋ ಕಾಯ್ದೆಯಡಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕಾನ್‌ಸ್ಟೆಬಲ್ ಪತಿ ನಾಗೂರಿನ ಎಸ್‌ಪಿ ಕಚೇರಿಗೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಬೆಳಗಾವಿ ಯುವಕನ ಬರ್ಬರ ಹತ್ಯೆ; 7 ಹಿಂದೂತ್ವವಾದಿ ಕಾರ್ಯಕರ್ತರ ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights