ರೈತರ ಹತ್ಯೆ ಪ್ರಕರಣ: ಬಿಗಿ ಭದ್ರತೆಯ ನಡುವೆ ಇಂದು ಸಚಿವರ ಮಗನ ವಿಚಾರಣೆ!
ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರ ಮೇಲೆ ಹಲ್ಲೆ ನಡೆಸಿರುವ ಆರೋಪಿತ ಆಶಿಶ್ ಮಿಶ್ರಾ ಇಂದು ಪೊಲೀಸರ ಮುಂದೆ ಹಾಜರಾಗಲಿದ್ದಾರೆ ಎಂದು ಅವರ ತಂದೆ ಮತ್ತು ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾ ತಿಳಿಸಿದ್ದಾರೆ. ಆರೋಗ್ಯದ ಕಾರಣಗಳಿಂದ ಅವರು ನಿನ್ನೆ ಸಮನ್ಸ್ ಅನ್ನು ಬಿಟ್ಟುಬಿಟ್ಟರು ಎಂದು ಅವರ ತಂದೆ ಹೇಳಿದರು.
ಆಶಿಶ್ ಮಿಶ್ರಾ ವಿರುದ್ಧ ಯುಪಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಇದುವರೆಗೂ ಆತನನ್ನು ಬಂಧಿಸಿಲ್ಲ. ಕೇಂದ್ರ ಸಚಿವರು ರೈತರ ಮೇಲೆ ಚಲಾಯಿಸಿದ ಎಸ್‌ಯುವಿ ತನಗೆ ಸೇರಿದ್ದು ಎಂದು ಒಪ್ಪಿಕೊಂಡರೂ, ಆದರೆ ಅವರ ಮಗ ಅದರಲ್ಲಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಆದರೆ ಪ್ರಕರಣದ ಮುಖ್ಯ ಆರೋಪಿ ಬಂಧನವಾಗದ ಬಗ್ಗೆ ದೇಶಾದ್ಯಂತ ರೈತರು ಪ್ರತಿಭಟನೆ ಮಾಡಿದ್ದರು. ಜೊತೆಗೆ ವಿರೋಧ ಪಕ್ಷಗಳ ಒತ್ತಡ ಹೆಚ್ಚಾಗುತ್ತಿದ್ದಂತೆ ಇಂದು ವಿಚಾರಣೆ ಮಾಡಲು ಖಾಕಿ ಮುಂದಾಗಿದೆ. ನೋಟೀಸ್ ಪ್ರಕಾರ ನಿನ್ನೆ ಬೆಳಿಗ್ಗೆ ಆಶಿಶ್ ಮಿಶ್ರಾ ವಿಚಾರಣೆಗೆ ಹಾಜರಾಗಿದ್ದರು. ಆದರೆ ಇಂದು ಕೊನೆಗೂ ಆಶಿಶ್ ಮಿಶ್ರಾ ಲಖಿಂಪುರ್ ಕ್ರೈಂ ಬ್ರಾಂಚ್ ಗೆ ವಿಚಾರಣೆಗೆ ಹಾಜರಾಗಿದ್ದಾರೆ.