ಬಿಜೆಪಿ ಗೆಲುವಿಗಾಗಿ ಫೇಸ್‌ಬುಕ್ ಚುನಾವಣಾ ಪ್ರಚಾರ: ತನಿಖೆಗೆ ಕಾಂಗ್ರೆಸ್ ಆಗ್ರಹ
ಬಿಜೆಪಿ ನಾಯಕರ ದ್ವೇಷಭಾಷಣದ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಪಕ್ಷಪಾತ ಮಾಡಿದ್ದರು ಎಂಬ ಆರೋಪಗಳನ್ನು ಎದುರಿಸುತ್ತಿರುವ ಫೇಸ್‌ಬುಕ್ ಕಾರ್ಯನಿರ್ವಾಹಕ ಅಧಿಕಾರಿ ಅಂಖಿದಾಸ್ ಮೇಲೆ ಅಮೇರಿಕಾದ ವಾಲ್ ಸ್ಟ್ರೀಟ್ ಜರ್ನಲ್ ಮತ್ತೊಂದು ಗಂಭೀರ ಆರೋಪದ ವರದಿ ಮಾಡಿದ್ದು, ತನಿಖೆಗೆ ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಆಗ್ರಹಿಸಿದ್ದಾರೆ.
“ಫೇಸ್‌ಬುಕ್ ಉದ್ಯೋಗಿಗಳನ್ನು ಮಾತ್ರ ಒಳಗೊಂಡಿರುವ ಕಂಪನಿಯ ಆಂತರಿಕ ಗುಂಪಿನಲ್ಲಿ ಅಂಖಿ ದಾಸ್ ಹಲವು ವರ್ಷಗಳಿಂದ ಸತತವಾಗಿ ಬಿಜೆಪಿ ಪರವಾದ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧದ ಪೂರ್ವಗ್ರಹದ ಪೋಸ್ಟ್‌ಗಳನ್ನು ಹಾಕುತ್ತಿದ್ದರು. 2014ರ ಚುನಾವಣೆ ಸಂದರ್ಭದಲ್ಲಿ ಈ ಕೆಲಸವನ್ನು ವ್ಯಾಪಕವಾಗಿ ಮಾಡಿದ್ದಾರೆ” ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ವಾಲ್ ಸ್ಟ್ರೀಟ್ ಜರ್ನಲ್ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇದು ಪ್ರಜಾಪ್ರಭುತ್ವದ ಮತ್ತು ಸಾಮಾಜಿಕ ಸೌಹಾರ್ದದ ಮೇಲೆ ಫೇಸ್‌ಬುಕ್- ವಾಟ್ಸಾಪ್ ನಡೆಸುತ್ತಿರುವ ದಾಳಿ. ಇದನ್ನು ಅಂತಾರಾಷ್ಟ್ರೀಯ ಮಾಧ್ಯಮವೊಂದು ಬಯಲಿಗೆಳೆದಿದೆ ಎಂದು ಟ್ವೀಟ್ ಮಾಡಿದ್ದಾರೆ.
International media have fully exposed Facebook’s & WhatsApp's brazen assault on India's democracy & social harmony.
No one, let alone a foreign company, can be allowed to interfere in our nation's affairs.
They must be investigated immediately & when found guilty, punished. pic.twitter.com/5tRw797L2y
— Rahul Gandhi (@RahulGandhi) September 1, 2020
ಅಂತಾರಾಷ್ಟ್ರೀಯ ಕಂಪನಿಯೊಂದು ನಮ್ಮ ದೇಶದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ಯಾರು ಸಹಿಸುವುದಿಲ್ಲ. ಈ ಕುರಿತು ತಕ್ಷಣ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.
ವಾಲ್ ಸ್ಟ್ರೀಟ್ ಜರ್ನಲ್ ವರದಿಯಲ್ಲಿ, ನರೇಂದ್ರ ಮೋದಿಯವರು 2014ರ ಚುನಾವಣೆಯಲ್ಲಿ ಗೆಲುವನು ಪಡೆದ ಹಿಂದಿನ ದಿನ, ದೇಶದ ಫೇಸ್‌ಬುಕ್‌ನ ಸಾರ್ವಜನಿಕ ನೀತಿಯ ಮುಖ್ಯಸ್ಥರಾದ ಅಂಖಿ ದಾಸ್ ಅವರು “ನಾವು ಅವರ (ಮೋದಿಯವರ) ಸೋಷಿಯಲ್ ಮೀಡಿಯಾ ಕ್ಯಾಂಪೇನ್‌ಗೆ ಅಗತ್ಯವಿದ್ದ ಕಾವನ್ನು ಹೊತ್ತಿಸಿದೆವು. ಅಲ್ಲಿಂದಾಚೆಗಿನದ್ದು ಇತಿಹಾಸ” ಎಂದು ಸಂದೇಶ ಕಳಿಸಿದ್ದರು ಎನ್ನಲಾಗಿದೆ.
“ಅಂತಿಮವಾಗಿ ಭಾರತವನ್ನು ಸಮಾಜವಾದದಿಂದ ಮುಕ್ತಗೊಳಿಸಲು ಮೂವತ್ತು ವರ್ಷಗಳ ತಳಮಟ್ಟದ ಕೆಲಸವನ್ನು ತೆಗೆದುಕೊಂಡಿದೆ” ಎಂದು ಕಾಂಗ್ರೆಸ್ ಸೋಲಿನ ಬಗ್ಗೆ ಅಂಖಿ ದಾಸ್ ಮತ್ತೊಂದು ಪೋಸ್ಟ್ ಮಾಡಿದ್ದರು ಎನ್ನಲಾಗಿದೆ.
ನರೇಂದ್ರ ಮೋದಿಯವರು ಶಕ್ತಿಯುತ ಮನುಷ್ಯ ಎಂದು ಹೊಗಳಿದ್ದ ಅವರು ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದರು. ಅಂಖಿ ದಾಸ್ ಅವರು ಫೇಸ್‌ಬುಕ್‌ನ ಉನ್ನತ ಜಾಗತಿಕ ಚುನಾವಣಾ ಅಧಿಕಾರಿ ಕಾಟೀ ಹರ್ಬಾತ್ ಅವರನ್ನು ಈ ಬಿಜೆಪಿ ಪರವಾಗಿನ ಅಭಿಯಾನದಲ್ಲಿ ಒಳಗೊಂಡಿದ್ದಲ್ಲೇ ಮೋದಿಯವರು ವಿಜಯ ಸಾಧಿಸಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿ ಮತ್ತು ಹರ್ಬಾತ್ ನಡುವೆ ನಗುತ್ತಾ ಫೋಟೊ ತೆಗೆಸಿಕೊಂಡಿದ್ದರು.
ಇನ್ನು ಫೇಸ್‌ಬುಕ್‌ಗೆ ಬರುವ ಜಾಹೀರಾತುಗಳಲ್ಲಿ ಕಾರ್ಪೋರೇಟ್ ಕಂಪನಿಗಳಿಗಿಂತ ಬಿಜೆಪಿಯ ಪಾಲು ಶೇ.70ರಷ್ಟು ಎಂಬುದನ್ನು ಡೇಟಾ ಟ್ರ್ಯಾಕಿಂಗ್ ಮಾಹಿತಿ ನೀಡಿತ್ತು.
ಇದನ್ನೂ ಓದಿ: ಅಸಂಘಟಿತ ವಲಯವನ್ನು ನಾಶಮಾಡಿ; ಜನರನ್ನು ಗುಲಾಮರನ್ನಾಗಿಸುತ್ತಿದೆ ಮೋದಿ ಸರ್ಕಾರ: ರಾಹುಲ್

