ಐಪಿಎಲ್‌-2021: ಸಿಎಸ್‌ಕೆ – ಕೆಕೆಆರ್‌ ನಡುವೆ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ; ಯಾರಾಗ್ತಾರೆ ಚಾಂಪಿಯನ್!

ಐಪಿಎಲ್‌-2021ರ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಿಎಸ್‌ಕೆ ಮತ್ತು ಕೆಕೆಆರ್‌ ನಡುವಿನ ಅಂತಿಮ ಕಾದಾಟಕ್ಕೆ ದುಬೈನ ಕ್ರೀಡಾಂಗಣ ಸಜ್ಜಾಗಿದೆ. ಶುಕ್ರವಾರ (ಇಂದು) ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.

ಇದೂವರೆಗೂ ನಡೆದಿರುವ ಐಪಿಎಲ್‌ ಟೂರ್ನಿಗಳಲ್ಲಿ ಚೆನ್ನೈ ಸೂಪರ್​ಕಿಂಗ್ಸ್ 3 ಬಾರಿ ಚಾಂಪಿಯನ್ ​ಆಗಿದೆ ಮತ್ತು ಕೆಕೆಆರ್ ತಂಡ 2 ಬಾರಿ ಚಾಂಪಿಯನ್ ಆಗಿದ್ದು, ಇದೀಗ ಎರಡೂ ತಂಡಗಳು ಮತ್ತೊಂದು ಟ್ರೋಪಿ ಗೆಲ್ಲಲು ಫೈನಲ್‌ನಲ್ಲಿ ಸೆಣೆಸಾಡುತ್ತಿವೆ.

ಪ್ರಸ್ತುತ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಚೆನ್ನೈ, 4ನೇ ಟ್ರೋಫಿಯ ಆಸೆಯಲ್ಲಿದೆ. ಇದಕ್ಕಾಗಿ ತಂಡದಲ್ಲಿ ಕೆಲ ಬದವಾಣೆಗಳನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಕೆಕೆಆರ್​ ಎದುರಿಸುವಲ್ಲಿ ಹಲವು ಬಾರಿ ಧೋನಿ ಪಡೆ ವಿಫಲವಾಗಿದ್ದು, ಇದು ಸಿಎಸ್‌ಕೆ ನಾಯಕ ಧೋನಿಗೆ ತಲೆನೋವಾಗಿ ಪರಿಣಮಿಸಿದೆ.

ಇತ್ತ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುತ್ತಿರುವ ಕೊಲ್ಕತ್ತಾ ತಂಡ, ಬಲಿಷ್ಠ ತಂಡಗಳಿಗೆ ಟಕ್ಕರ್ ನೀಡಿದೆ. ಕಳೆದ ನಾಲ್ಕು ಪಂದ್ಯಗಳಿಂದ ಸೋಲನ್ನೇ ಕಾಣದ ಮಾರ್ಗನ್ ಪಡೆ, ತಾನೆಷ್ಟು ಅಪಾಯಕಾರಿ ಅನ್ನೋದನ್ನ ಸಾಭೀತು ಪಡಿಸುತ್ತಿದೆ. ಅದೇನೆ ಇರಲಿ ಇಂದು ನಡೆಯುವ ಐಪಿಎಲ್ ಪಂದ್ಯದಲ್ಲಿ ಯಾವ ತಂಡ ಟ್ರೋಫಿಗೆ ಮುತ್ತಿಡುತ್ತೆ ಕಾದು ನೋಡಬೇಕಿದೆ.

ಇದನ್ನೂ ಓದಿ: Ind v/s Eng: ಗೆಲುವಿನ ಅಂಚಿನಲ್ಲಿ ನಿರಾಸೆಗೊಂಡ ಟೀಂ ಇಂಡಿಯಾ; ಕೊಹ್ಲಿ ಪಡೆ ಮಿಂಚಿದ್ದು ಹೀಗೆ!

Spread the love

Leave a Reply

Your email address will not be published. Required fields are marked *