ನಟ ರಜನಿಕಾಂತ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ!

ಭಾರತದ ಅತ್ಯುನ್ನತ ಚಲನಚಿತ್ರ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸೂಪರ್ ಸ್ಟಾರ್‌ ನಟ ರಜನಿಕಾಂತ್‌ ಪಡೆದುಕೊಂಡಿದ್ದಾರೆ. ಇಂದು ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ರಜನಿಕಾಂತ್‌ ಅವರು ತಮಗೆ ಸಂದ ಪ್ರಶಸ್ತಿಯನ್ನು ತಮ್ಮ “ನಿರ್ಮಾಪಕರು, ನಿರ್ದೇಶಕರು, ಚಲನಚಿತ್ರ ಬಂಧುಗಳು ಮತ್ತು ಅಭಿಮಾನಿಗಳಿಗೆ” ಅರ್ಪಿಸಿದ್ದಾರೆ.

ರಜನಿಕಾಂತ್‌ ಅವರ ಅಳಿಯ, ಸ್ಟಾರ್‌ ನಟ ಧನುಷ್‌ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು. ಅವರು ಅಸುರನ್‌ ಸಿನಿಮಾದಲ್ಲಿನ ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದುಕೊಂಡು ಮಾತನಾಡಿದ ರಜನಿಕಾಂತ್, “ಬಸ್ ಕಂಡಕ್ಟರ್‌ನಿಂದ ಸ್ಟಾರ್‌ ನಟನವರೆಗೆ ತಮ್ಮ ಜೀವನದ ಪ್ರಯಾಣವನ್ನು ನೆನಪಿಸಿಕೊಂಡರು ಮತ್ತು ಚಲನಚಿತ್ರಗಳಿಗೆ ಸೇರುವಂತೆ ಸೂಚಿಸಿದ ತಮ್ಮ ಹಳೆಯ ಸ್ನೇಹಿತರಿಗೆ ಧನ್ಯವಾದವನ್ನು ಅರ್ಪಿಸಿದರು.”

ಹಾಡುಗಾರರಾದ ಆಶಾ ಭೋಂಸ್ಲೆ ಮತ್ತು ಶಂಕರ್ ಮಹಾದೇವನ್, ನಟರಾದ ಮೋಹನ್ ಲಾಲ್ ಮತ್ತು ಬಿಸ್ವಜೀತ್ ಚಟರ್ಜಿ ಮತ್ತು ಚಲನಚಿತ್ರ ನಿರ್ಮಾಪಕ ಸುಭಾಷ್ ಘಾಯ್ ಅವರಿದ್ದ ಆಯ್ಕಾ ಸಮಿತಿಯು ಈ ವರ್ಷದ ಆರಂಭದಲ್ಲಿ ರಜನಿಕಾಂತ್ ಅವರನ್ನು ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಿತ್ತು.

ರಜನಿಕಾಂತ್ ಅವರು “ಪ್ರತಿಭಾವಂತ” ವ್ಯಕ್ತಿ ಮತ್ತು ಅವರು “ಡೌನ್ ಟು ಅರ್ಥ್” ಎಂಬ ಕಾರಣಕ್ಕಾಗಿ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ನಟ ಬಿಸ್ವಜಿತ್ ಚಟರ್ಜಿ ಅವರು ಸಮಾರಂಭದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: “ನಾನು ಹಿಂದೂವಾಗಿ ನಾಚಿಕೆಪಡುತ್ತೇನೆ”: ಮುಸ್ಲಿಮರ ಮೇಲಿನ ದಾಳಿಗೆ ನಟಿ ಸ್ವರಾ ಭಾಸ್ಕರ್ ಖಂಡನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights