ಪಿಯುಸಿ ವಿದ್ಯಾರ್ಥಿನಿಯ ಅರೆನಗ್ನ ಪೋಟೋ, ವಿಡಿಯೋ ಹರಿಬಿಟ್ಟ ಸ್ನೇಹಿತ; ದೂರು ದಾಖಲು
ಪಿಯುಸಿ ವಿದ್ಯಾರ್ಥಿಯೊಂದಿಗೆ ಸ್ನೇಹ ಮಾಡಿಕೊಂಡು, ಆಕೆಯೊಂದಿಗೆ ಸಲುಗೆ ಬೆಳೆಸಿ ಆಕೆಯ ಅರೆನಗ್ನ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸಿ ಆಕೆಯ ಸ್ನೇಹಿತನೇ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಜಕ್ಕೂರಿನಲ್ಲಿ ವಾಸಿಸುತ್ತಿದ್ದ 21 ವರ್ಷದ ಯುವತಿಯೊಂದಿಗೆ ರಾಯಚೂರು ಮೂಲದ ಆರೋಪಿ ಯುವಕ ಸ್ನೇಹ ಬೆಳಿಸಿದ್ದ, ಆಕೆಯೊಂದಿಗೆ ಆಗಾಗ ಮಾತನಾಡುತ್ತಿದ್ದ, ಸಲುಗೆ ಬೆಳೆಸಿಕೊಂಡಿದ್ದ. ಆಕೆಯನ್ನು ಭೇಟಿ ಮಾಡಲು ಆತ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ, ಈ ವೇಳೆ ಆಕೆಯ ಅರನಗ್ನ ಫೋಟೋ ಮತ್ತು ವಿಡಿಯೋವನ್ನು ಆತ ಚಿತ್ರೀಕಸಿದ್ದಾನೆ ಎಂದು ಆಗ್ನೇಯ ವಿಭಾಗ ಸೈಬರ್ ಕ್ರೈಂ ಠಾಣೆಯ ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ಉದಯ್ ಕಿರಣ್ ಯುವತಿಯನ್ನು ಜಕ್ಕೂರು ಬಳಿಯ ವಸತಿಗೃಹವೊಂದಕ್ಕೆ ಕರೆದೊಯ್ದಿದ್ದಾನೆ. ಅಲ್ಲಿಯೇ ಒಂದು ದಿನ ಕಳೆದಿದ್ದಾನೆ. ಆಗ ಯುವತಿಯ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸಿಕೊಂಡಿದ್ದಾನೆ. ಇದಾದ ಕೆಲ ತಿಂಗಳ ನಂತರ, ಯುವತಿಗೆ ವಿಷಯ ಗೊತ್ತಾಗಿದೆ.
ಆರೋಪಿಯ ವರ್ತನೆಯಿಂದ ಬೇಸತ್ತ ಯುವತಿ, ಆರೋಪಿಯಿಂದ ದೂರ ಉಳಿದ್ದರು. ಹೀಗಾಗಿ, ಆರೋಪಿ ಯುವಕ ಆಕೆಯ ಹೆಸರಿನಲ್ಲಿ ಇನ್ಸ್ಟಾಗ್ರಾಮ್ ಖಾತೆ ತೆರೆದು ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾನೆ. ಈ ಬಗ್ಗೆ ತಿಳಿದು ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: 100 ಕೋಟಿ ಡೋಸ್ ವ್ಯಾಕ್ಸಿನೇಷನ್ ಎಂಬುದು ಸುಳ್ಳು; ಪುರಾವೆ ನೀಡುತ್ತೇನೆ: ಸಂಸದ ಸಂಜಯ್ ರಾವತ್

