ಪಶ್ಚಿಮ ಬಂಗಾಳ: ಲಕ್ಷಕ್ಕೂ ಅಧಿಕ ಮತಗಳ ಅಂತರ; ಬಿಜೆಪಿಗೆ ಹೀನಾಯ ಸೋಲು!

ಇತ್ತೀಚೆಗೆ ದೇಶದಾದ್ಯಂತ ನಡೆದ 30 ವಿಧಾನಸಭೆ ಮತ್ತು ಮೂರು ಲೋಕಸಭಾ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಈ ಪೈಕಿ ಪಶ್ಚಿಮ ಬಂಗಾಳದ 4 ವಿಧಾನಸಭೆಗಳ ಉಪಚುನಾವಣೆಯಲ್ಲಿ ಟಿಎಂಸಿ ಭರ್ಜರಿ ಗೆಲುವು ದಾಖಲಿಸಿದ್ದು, ಎಲ್ಲಾ ಸ್ಥಾನಗಳನ್ನೂ ಗೆದ್ದುಕೊಂಡಿದೆ. ಎಲ್ಲಾ ಸ್ಥಾನಗಳಲ್ಲಿಯೂ ಬಿಜೆಪಿ ಹೀನಾಯ ಸೋಲನ್ನು ಅನುಭವಿಸಿದೆ.

ಆರು ತಿಂಗಳ ಮುಂಚೆ ಚುನಾವಣೆ ನಡೆದ ಸಂದರ್ಭದಲ್ಲಿ ಈ ನಾಲ್ಕು ಕ್ಷೇತ್ರಗಳ ಪೈಕಿ ಎರಡರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಕೇವಲ ಆರು ತಿಂಗಳಲ್ಲಿ ಅಲ್ಲಿನ ಜನರು ತಮ್ಮ ತೀರ್ಮಾನವನ್ನು ಬದಲಿಸಿ ಟಿಎಂಸಿಯನ್ನು ಗೆಲ್ಲಿಸಿದ್ದಾರೆ. ದೀನ್‌ಹಟಾ, ಶಾಂತಿಪುರ್‌, ಖಾರ್ದಹೊ ಮತ್ತು ಗೋಸಬಾದ ನಾಲ್ಕು ಕ್ಷೇತ್ರಗಳಲ್ಲೂ ಟಿಎಂಸಿ ಭರ್ಜರಿ ಗೆಲುವು ಸಾಧಿಸಿದೆ.

ದೀನ್‌ಹಟಾ ಕ್ಷೇತ್ರದಲ್ಲಿ ಬಿಜೆಪಿಯ ನಿಸಿತ್ ಪ್ರಮಾಣಿಕ್ ಒಕ್ಕೂಟ ಸರ್ಕಾರದ ಕಿರಿಯ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ತಾನು ಗೆದ್ದದ್ದ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಈ ಕ್ಷೇತ್ರದಲ್ಲಿ ಟಿಎಂಸಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದು, 1.89 ಲಕ್ಷ ಮತಗಳನ್ನು ಪಡೆದಿದೆ. ಬಿಜೆಪಿ ಇಲ್ಲಿ ಕೇವಲ 25 ಸಾವಿರ ಮತಗಳನ್ನಷ್ಟೇ ಪಡೆದಿದೆ. ಇಲ್ಲಿ ಟಿಎಂಸಿಯಲ್ಲಿ ಉದ್ಯಾನ್‌ ಗುಹಾ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಅಶೋಕ್ ಮಂಡಲ್‌ ಸ್ಪರ್ಧಿಸಿದ್ದರು.

ಇದನ್ನೂ ಓದಿ: ಚುನಾವಣಾ ಲೆಕ್ಕಾಚಾರ: ತಾಲಿಬಾನ್‌ ವಿರುದ್ದ ಯುದ್ದಕ್ಕೆ ಕರೆಕೊಟ್ಟ ಆದಿತ್ಯಾನಾಥ್‌!

ಶಾಂತಿಪುರ್‌ ಕ್ಷೇತ್ರದಲ್ಲಿ ಬಿಜೆಪಿ ಸಂಸದ ಜಗನ್ನಾಥ್ ಸರ್ಕಾರ್ ಅವರು ತಾನು ಗೆದ್ದ ವಿಧಾನಸಭೆಗೆ ರಾಜೀನಾಮೆ ನೀಡಿದ್ದರಿಂದ ಕ್ಷೇತ್ರವು ತೆರವಾಗಿತ್ತು. ಟಿಎಂಸಿಯ ಬ್ರಜಾ ಕಿಶೋರ್‌ ಗೋಸ್ವಾಮಿ 11.1 ಲಕ್ಷ ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯ ನಿರಂಜನ್ ಬಿಸ್ವಾಸ್‌ ಕೇವಲ 47 ಸಾವಿರ ಮತಗಳನ್ನು ಪಡೆದಿದ್ದಾರೆ.

ಖಾರ್ದಹೊ ಕ್ಷೇತ್ರವು ಕೋಲ್ಕತ್ತಾದ ಮಾಜಿ ಮೇಯರ್ ಸೋವಂದೇಬ್ ಚಟ್ಟೋಪಾಧ್ಯಾಯ ಸ್ಪರ್ಧಿಸುತ್ತಿರುವ ಕ್ಷೇತ್ರವಾಗಿದೆ. ಅವರು ಮಮತಾ ಬ್ಯಾನರ್ಜಿಗಾಗಿ ಕೋಲ್ಕತ್ತಾದ ಭವಾನಿಪುರ್‌ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ಇಲ್ಲಿ ಅವರು 1.14 ಲಕ್ಷ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯಲ್ಲಿ ಸ್ಪರ್ಧಿಸಿದ್ದ ಜೋತ್‌ ಶಾ 20 ಸಾವಿರ ಮತಗಳನ್ನಷ್ಟೇ ಪಡೆದಿದ್ದಾರೆ.

ಗೋಸಬಾ ಕ್ಷೇತ್ರದಲ್ಲಿ ಟಿಎಂಸಿಯಿಂದ ಸ್ಪರ್ಧಿಸಿದ್ದ ಸುಬ್ರತಾ ಮಂಡಲ್‌ 1.60 ಲಕ್ಷ ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಪಲಾಶಾ ರಾಣಾ 18 ಸಾವಿರ ಮತ ಪಡೆದು ಹೀನಾಯವಾಗಿ ಸೋಲುಂಡಿದ್ದಾರೆ.

ಇದನ್ನೂ ಓದಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಬೆಲೆ ಏಕಾಏಕಿ 266 ರೂ. ಹೆಚ್ಚಳ; ಸಿಲಿಂಡರ್‌ಗೆ 2000 ರೂ.!

ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆಯ ಚುನಾವಣೆಯ ನಂತರ ಬಿಜೆಪಿ ಹಲವರು ಟಿಎಂಸಿಗೆ ಸೇರಿಕೊಂಡಿದ್ದರು. ಬಿಜೆಪಿಗೆ ಈ ಮುಖಭಂಗ ಉಪಚುನಾವಣೆಯಲ್ಲೂ ಮುಂದುವರೆದಿದೆ. ಜೊತೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಗೆಲುವಿನ ಸರಣಿಯು ಮುಂದುವರಿದಿದೆ.

ಚುನಾವಣಾ ಗೆಲುವನ್ನು ಸಂಭ್ರಮಿಸಿರುವ ಮಮತಾ ಬ್ಯಾನರ್ಜಿ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದ್ದಾರೆ. “ಎಲ್ಲಾ ನಾಲ್ಕು ವಿಜೇತ ಅಭ್ಯರ್ಥಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು! ಈ ವಿಜಯವು ಜನರ ವಿಜಯವಾಗಿದೆ. ಇದು ಬಂಗಾಳ ಯಾವಾಗಲೂ ಪ್ರೊಪಾಗಾಂಡ ಮತ್ತು ದ್ವೇಷದ ರಾಜಕೀಯಕ್ಕಿಂತ ಅಭಿವೃದ್ಧಿ ಮತ್ತು ಏಕತೆಯನ್ನು ಹೇಗೆ ಆರಿಸಿಕೊಳ್ಳುತ್ತದೆ ತೋರಿಸಿದೆ. ಜನರ ಆಶೀರ್ವಾದದೊಂದಿಗೆ, ಬಂಗಾಳವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುದಾಗಿ ನಾವು ಭರವಸೆ ನೀಡುತ್ತೇವೆ!” ಎಂದು ಅವರು ಹೇಳಿದ್ದಾರೆ.

ಈ ನಾಲ್ಕು ಕ್ಷೇತ್ರಗಳೊಂದಿಗೆ ರಾಜ್ಯದ ವಿಧಾನಸಭೆಯಲ್ಲಿ ಟಿಎಂಸಿಯ ಸೀಟು 213 ಕ್ಕೆ ಏರಿದೆ.

ಇದನ್ನೂ ಓದಿ: ಗೋವಾ ಚುನಾವಣೆ: ಎಎಪಿ ಗೆದ್ದರೆ ಅಯೋಧ್ಯೆ ಮತ್ತು ಇತರ ಕ್ಷೇತ್ರಗಳಿಗೆ ಉಚಿತ ಯಾತ್ರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights