ಶಾಸಕರ ದುರುದ್ದೇಶ, ಸರಕಾರ ಬೀಳಿಸಿದ ಷಡ್ಯಂತ್ರ ಸಾಬೀತು – ದಿನೇಶ್ ಗುಂಡುರಾವ್

ಆನರ್ಹ ಶಾಸಕರ ಕುರಿತ ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್, ಶಾಸಕರ ದುರುದ್ದೇಶದಿಂದ ಸರಕಾರ ಬೀಳಿಸಲು ಷಡ್ಯಂತ್ರ ರೂಪಿಸಿದ್ದರು ಎಂಬುವುದು ಸಾಬೀತಾಗಿದೆ ಎಂದಿದ್ದಾರೆ.

ಅನರ್ಹರ ಅರ್ಜಿ ತೀರ್ಪು ನೀಡಿದ ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗತಿಸಿ ರಾಯಚೂರಿನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಅತೃಪ್ತ ಶಾಸಕರು ಅನರ್ಹರಾಗಿದ್ದಾರೆ. ಕೋರ್ಟ್ ಶಾಸಕರು ಸ್ಪರ್ಧಿಸಲು ಅವಕಾಶ ನೀಡಿದ್ದು ಸ್ಪರ್ಧಿಸಲಿ. ರಮೇಶಕುಮಾರ ಮಾತ್ರ ಅವರು ಮರುಚುನಾವಣೆ ಸ್ಪರ್ಧಿಸದಂತೆ ಹೇಳಿದ್ದರು. ಸುಪ್ರೀಂ ಕೋರ್ಟು ಹೇಳಿದ್ದು ಸರಿಯಾಗಿದೆ. ಸುಪ್ರೀಂ ಕೋರ್ಟು ತೀರ್ಪು ನಮಗೆ ದುಃಖವಿಲ್ಲ ಎಂದರು.

ತಮ್ಮ ಸ್ಥಾನವನ್ನು ಮಾರಿಕೊಳ್ಳುವವರ ವಿರುದ್ದ ಕಠಿಣ ಕ್ರಮಕ್ಕೆ ಕೇಂದ್ರ ಸರಕಾರ ಕಾನೂನು ರೂಪಿಸಬೇಕಾಗಿದೆ. ಇಂದಿನ ತೀರ್ಪಿನಿಂದ ಬಿಜೆಪಿಯ ನೈತಿಕತೆ ಇದ್ದರೆ ಅನರ್ಹರಿಗೆ ಯಾವುದೇ ಕಾರಣಕ್ಕೆ ಟಿಕೆಟ್ ನೀಡಬಾರದು. ಟಿಕೆಟ್ ನೀಡಿದರೆ ಸಂವಿದಾನ ಬಾಹಿರವಾಗಿ ಕೆಲಸ ಮಾಡಿದಂತಾಗುತ್ತದೆ. ಯಡಿಯೂರಪ್ಪ ಹಾಗು ಅಮಿತ್ ಷಾ ಸಂವಿದಾನ ಬಾಹಿರ ಕೆಲಸ ಮಾಡಿದಂತಾಗುತ್ತದೆ.

ಬಿಜೆಪಿಯವರಿಗೆ ನೈತಿಕ ಅಧಃಪತನವಾಗಿದೆ ಅದಕ್ಕಾಗಿ ನೈತಿಕವಾಗಿ ಯಡಿಯೂರಪ್ಪ ರಾಜಿನಾಮೆ ನೀಡಬೇಕು. ಅವರಿಗೆ ನೈತಿಕತೆ ಇದೆಯೂ ಇಲ್ಲವೊ ಗೊತ್ತಿಲ್ಲ. ಈ ಸರಕಾರ ರಚನೆಯಾಗಿದ್ದೆ ಇಲ್ ಲೀಗಲ್ ಸರಕಾರ ಭ್ರಷ್ಟಾಚಾರ ದಿಂದ. ಕಾನೂನು ಬಾಹಿರ ಸರಕಾರವೆಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights