ಫ್ಯಾಕ್ಟ್‌ಚೆಕ್: ಸೈಕಲ್ ಸವಾರನ ಮೇಲೆ ನಮೀಬಿಯಾದಿಂದ ತಂದಿರುವ ಚೀತಾಗಳು ದಾಳಿ ಮಾಡಿವೆಯೆ?

ಸೆಪ್ಟೆಂಬರ್ 17 ರಂದು, ನಮೀಬಿಯಾದಿಂದ ಕರೆತಂದ ಎಂಟು ಚೀತಾಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿದೆ. ಆದರೆ ಈ ಚೀತಾಗಳು ಮನುಷ್ಯರ ಮೇಲು ದಾಳಿ ಮಾಡುತ್ತಿವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ವ್ಯಕ್ತಿಯೊಬ್ಬರು ಅರಣ್ಯ ಪ್ರದೇಶದ ನಡುವೆ ಇರುವ ಮುಖ್ಯ ರಸ್ತೆಯೊಂದರಲ್ಲಿ ಸೈಕಲ್‌ನಲ್ಲಿ ಹೋಗುವಾಗ, ಚೀತಾ ಅವನ ಮೇಲೆ ದಾಳಿ ಮಾಡಿದಾಗ, ಸೈಕಲ್‌ನಿಂದ ಬಿದ್ದ ವ್ಯಕ್ತಿ ತಕ್ಷಣ ತನ್ನ ಸೈಕಲ್ ತೆಗೆದುಕೊಂಡು ಎದ್ದು ಬಿದ್ದು ಓಡಿ ತನ್ನ ಜೀವ ಉಳಿಸಿಕೊಂಡಿದ್ದಾನೆ ಎಂದು ವಿಡಿಯೋವನ್ನು ಹಂಚಿಕೊಂಡಿದ್ದಾನೆ.

ನಮೀಬಿಯಾದಿಂದ ತರಲಾದ ಚೀತಾಗಳಿಂದ ಈ ದಾಳಿ ನಡೆದಿರುವುದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್  :

ಸಾಮಾಜಿಕ ಮಾಧ್ಯಮದಲ್ಲಿ ಸೈಕಲ್ ಸವಾರನ ಮೇಲೆ ಚೀತಾ ದಾಳಿ ಮಾಡಿದೆ ಎಂದು ಹೇಳಲಾಗುತ್ತಿರುವ ವಿಡಿಯೋವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ  ಸರ್ಚ್ ಮಾಡಿದಾಗ, ಈ ವರ್ಷದ ಜುಲೈ 15 ರಂದು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರವೀಣ್ ಕೇಸ್ವಾನ್ ಅವರು ಹಂಚಿಕೊಂಡ ಕ್ಲಿಪ್ ಒಂದು ಲಭ್ಯವಾಗಿದ್ದು, ವೈರಲ್ ವಿಡಿಯೋವನ್ನ ಹೋಲುತ್ತಿರುವುದು ಸ್ಪಷ್ಟವಾಗಿದೆ.

ಕೇಸ್ವಾನ್ ಅವರು ತಮ್ಮ ಟ್ವೀಟ್ ಥ್ರೆಡ್‌ನಲ್ಲಿ, ಈ ವೀಡಿಯೊ ಅಸ್ಸಾಂನ ಕಾಜಿರಂಗ ಅರಣ್ಯದ್ದು ಎಂದು ಹೇಳಿದ್ದಾರೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಪ್ರಾಣಿ ಚಿರತೆ ಎಂದು ಕೂಡ ತಿಳಿಸಿದ್ದಾರೆ. “ಚಿರತೆಗಳು ಬಹಳ ಹೊಂದಿಕೊಳ್ಳುವ ಜಾತಿಗಳು. ಅವು ಬೆಟ್ಟ, ಕಾಡು, ಕೃಷಿಭೂಮಿಗಳು, ಕಬ್ಬಿನ ಬೆಳೆಗಳು, ಚಹಾ ತೋಟಗಳು ಮತ್ತು ನಗರ ಪ್ರದೇಶಗಳಲ್ಲೂ ವಾಸಿಸುತ್ತವೆ. ಕೆಲವೊಮ್ಮ ಹೊಂಚು ಹಾಕಿ ದಾಳಿ ಮಾಡುತ್ತವೆ” ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ಮಾಹಿತಿಗಾಗಿ ಸರ್ಚ್ ಮಾಡಿದಾಗಾ ಜೂನ್ 16 ರಂದು ಮನಿ ಕಂಟ್ರೋಲ್ ನಲ್ಲಿ ಪ್ರಕಟವಾದ ವರದಿಯೊಂದು ಲಭ್ಯವಾಗಿದ್ದು,  ಈ ಘಟನೆಯು ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಹೇಳಲಾಗಿದೆ.

ಜನವರಿ 19 ರಂದು ಹಲ್ದಿಬರಿ ಅನಿಮಲ್ ಕಾರಿಡಾರ್‌ನಲ್ಲಿ ಈ ಘಟನೆ ನಡೆದಿದೆ ಎಂದು ANI ವಿಡಿಯೋ ವರದಿ ಮಾಡಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಪ್ರಾಧಿಕಾರವು ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಇದನ್ನು ಸೆರೆಹಿಡಿಯಲಾಗಿದೆ. ಸೈಕಲ್ ಸವಾರನಿಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ ಎಂದು ವರದಿ ತಿಳಿಸಿದೆ.

ರಿಷಿಕೇಶ-ಡೆಹ್ರಾಡೂನ್ ರಸ್ತೆಯಲ್ಲಿ ಇತ್ತೀಚೆಗೆ ಚೀತಾಗಳು ದಾಳಿ ಮಾಡಿರುವ ವರದಿಗಳಾಗಲೀ. ಆದರೆ, ಘಟನೆಗಳಾಗಲಿ ಲಭ್ಯವಾಗಿಲ್ಲ. ಹೀಗಾಗಿ, ಅಸ್ಸಾಂನ ಹಳೆಯ ವೀಡಿಯೊವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ನಾನು ಪಾಕಿಸ್ತಾನಿ ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದು ಶಾರುಖ್ ಖಾನ್ ಹೇಳಿದ್ದು ನಿಜವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights