ಉಪಚುನಾವಣೆ: ದೇಶದ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು; ಎರಡನೇ ಸ್ಥಾನದಲ್ಲಿ ಬಿಜೆಪಿ!
ದೇಶದ 13 ರಾಜ್ಯಗಳ ಮೂರು ಲೋಕಸಭೆ ಹಾಗೂ 29 ವಿಧಾನಸಭಾ ಕ್ಷೇತ್ರಗಳಿಗೆ ಕಳೆದ ವಾರ ನಡೆದಿದ್ದ ಚುನಾವಣೆಯ ಫಲಿತಾಂಶ ನಿನ್ನೆ (ಮಂಗಳವಾರ) ಪ್ರಕಟವಾಗಿದೆ. ಈ ಪೈಕಿ ಕಾಂಗ್ರೆಸ್ ಪಕ್ಷವು ಅತಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದ್ದು, ಮತ್ತೆ ತನ್ನ ಪ್ರಭಾವನ್ನು ಹಿಗ್ಗಿಸಿಕೊರ್ಳಳಲು ಯತ್ನಿಸುತ್ತಿದೆ.
ಉಪಚುನಾವಣೆ ನಡೆದ ಒಟ್ಟು 29 ವಿಧಾನಸಭಾ ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ಬಿಜೆಪಿ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಉಳಿದಂತೆ ಟಿಎಂಸಿ 4, ಆರ್ಜೆಡಿ 2, ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ 1, ಯುಡಿಪಿ 1, ಮಿಜೋ ನ್ಯಾಷನಲ್ ಫ್ರೆಂಟ್ 1, ಎನ್ ಡಿಪಿಪಿ 1, ಭಾರತದ ರಾಷ್ಟ್ರೀಯ ಲೋಕದಳ ಪಕ್ಷ 1 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.
ಇನ್ನು, ಮೂರು ಲೋಕಸಭಾ ಕ್ಷೇತ್ರಗಳ ಪೈಕಿ, ಒಂದು ಕ್ಷೇತ್ರದಲ್ಲಿ ಬಿಜೆಪಿ, ಒಂದು ಕ್ಷೇತ್ರದಲ್ಲಿ ಶಿವಸೇನಾ ಮತ್ತು ಒಂದು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ರಾಜ್ಯವಾರು ಫಲಿತಾಂಶ ಪಟ್ಟಿ:
ಅಸ್ಸಾಂ: ಎಲ್ಲಾ ಐದು ವಿಧಾನಸಭೆ ಕ್ಷೇತ್ರಗಳಲ್ಲಿ ಎನ್ ಡಿಎ ಮೈತ್ರಿಕೂಟ ಗೆಲುವು ಸಾಧಿಸಿದೆ. ಈ ಪೈಕಿ ಬಿಜೆಪಿ 3 ಮತ್ತು ಯುಪಿಪಿಎಲ್ ಪಕ್ಷ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಪಶ್ಚಿಮ ಬಂಗಾಳ: ಚುನಾವಣೆ ನಡೆದ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿಯೂ ಟಿಎಂಸಿ ಗೆಲುವು ಸಾಧಿಸಿದೆ… ಟಿಎಂಸಿ ವಿರುದ್ದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಗಳು ಮೂರು ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದ್ದಾರೆ.
ಆಂಧ್ರ ಪ್ರದೇಶ: ಚುನಾವಣೆ ನಡೆದ ಒಂದು ವಿಧಾನಸಭೆ ಕ್ಷೇತ್ರದಲ್ಲಿ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ.
ಬಿಹಾರ: 2 ಕ್ಷೇತ್ರಗಳಲ್ಲಿ ಆರ್ಜೆಡಿ ಅಭ್ಯರ್ಥಿಗಳು ಗೆಲುವು ಸಾಧಿಸಿದೆ.
ಹರಿಯಾಣ: ಚುನಾವಣೆ ನಡೆದ ಒಂದು ಕ್ಷೇತ್ರದಲ್ಲಿ ರಾಷ್ಟ್ರೀಯ ಲೋಕದಳ ಪಕ್ಷ ಗೆಲುವು ಸಾಧಿಸಿದೆ.
ಹಿಮಾಚಲ ಪ್ರದೇಶ: ಚುನಾವಣೆ ನಡೆದ ಕಾಂಗ್ರೆಸ್ ಮೂರೂ ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಆಡಳಿತಾರೂಢ ಬಿಜೆಪಿ ಮುಖಭಂಗ ಅನುಭವಿಸಿದೆ.
ಕರ್ನಾಟಕ: ಒಂದು ಕಾಂಗ್ರೆಸ್, ಮತ್ತೊಂದರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಎರಡೂ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಠೇವಣಿ ಕಳೆದುಕೊಂಡಿದೆ.
ಮಧ್ಯಪ್ರದೇಶ: ಬಿಜೆಪಿ ಎರಡು ಹಾಗೂ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಗೆಲುವು.
ಮಹಾರಾಷ್ಟ್ರ: ಚುನಾವಣೆ ನಡೆದ ಒಂದು ಕಾಂಗ್ರೆಸ್ ಅಭ್ಯರ್ಥಿ ಗೆಲುವು.
ಮೇಘಾಲಯ: ಮೂರು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಎರಡು ಹಾಗೂ ಯುನೈಟೆಡ್ ಡೆಮಾಕ್ರೆಟಿಕ್ ಪಕ್ಷ ಒಂದು ಕ್ಷೇತ್ರದಲ್ಲಿ ಗೆಲುವು.
ಮಿಜೋರಾಂ: ಒಂದು ಕ್ಷೇತ್ರದಲ್ಲಿ ಮಿಜೋ ನ್ಯಾಷನಲ್ ಫ್ರೆಂಟ್ ಗೆಲುವು ಸಾಧಿಸಿದೆ.
ನಾಗಾಲ್ಯಾಂಡ್: ಚುನಾವಣೆ ನಡೆದ ಒಂದು ಕ್ಷೇತ್ರದಲ್ಲಿ ಎನ್ ಡಿಪಿಪಿ ಅಭ್ಯರ್ಥಿ ಗೆಲುವು.
ರಾಜಸ್ಥಾನ: ಕಾಂಗ್ರೆಸ್ ಎರಡೂ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ.
ಮೂರು ಲೋಕಸಭೆ ಫಲಿತಾಂಶ:
ಹಿಮಾಚಲ ಪ್ರದೇಶ: ಮಂಡಿ ಲೋಕಸಭಾ ಕ್ಷೇತ್ರದಲ್ಲಿ ದಿವಂಗತ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಅವರು ಗೆಲುವು ಸಾಧಿಸಿದ್ದಾರೆ. ಆಡಳಿತಾಢ ಬಿಜೆಪಿ ಸೋಲುಂಡಿದೆ.
ಮಧ್ಯಪ್ರದೇಶ: ಖಾಂಡ್ವಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜ್ಞಾನೇಶ್ವರ್ ಪಾಟೀಲ್ ಗೆಲುವು ಸಾಧಿಸಿದ್ದಾರೆ.
ದಾದ್ರಾ ಮತ್ತು ಹವೇಲಿ: ಶಿವಸೇನೆ ಗೆದ್ದುಕೊಂಡಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ಲಕ್ಷಕ್ಕೂ ಅಧಿಕ ಮತಗಳ ಅಂತರ; ಬಿಜೆಪಿಗೆ ಹೀನಾಯ ಸೋಲು!

