12.9k ಬಿಟ್‌ಕಾಯಿನ್‌ಗಳನ್ನು ಕರ್ನಾಟಕದ ರಾಜಕಾರಣಿಗಳು, ಪೊಲೀಸರು ಎನ್‌ಕ್ಯಾಶ್ ಮಾಡಿದ್ದಾರೆ: ಕಾರ್ಯಕರ್ತ

ರಾಜಕೀಯ ವಿವಾದಕ್ಕೆ ಸಿಲುಕಿರುವ ಹ್ಯಾಕರ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿಯ ಬಹುಕೋಟಿ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳು ಹೊರಬೀಳುತ್ತಲೇ ಇವೆ. “ಪೊಲೀಸ್ ಅಧಿಕಾರಿಗಳು ಮತ್ತು ಪ್ರಭಾವಿ ರಾಜಕಾರಣಿಗಳಿಂದ ಡ್ರಗ್ ಪ್ರಕರಣದಲ್ಲಿ ಭ್ರಷ್ಟಾಚಾರದ ವಿರುದ್ಧದ ದೂರನ್ನು”  ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಮತ್ತು ಪೊಲೀಸ್ ಕಮಿಷನರ್ ಕಮಲ್ ಪಂತ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು  ನಿರ್ಲಕ್ಷಿಸಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಎಆರ್ ಅಶೋಕ್ ಕುಮಾರ್ ಅಡಿಗ ಆರೋಪಿಸಿದ್ದಾರೆ.

ದೂರಿನ ಸಂಪೂರ್ಣ ವಿವರವನ್ನು ಪ್ರಧಾನಿ ಕಚೇರಿ, ಕೇಂದ್ರ ಗೃಹ ಸಚಿವರು ಮತ್ತು ಕೇಂದ್ರ ಗೃಹ ಕಾರ್ಯದರ್ಶಿಗಳಿಗೆ ಕಳುಹಿಸಲಾಗಿದೆ ಎಂದು ಅಶೋಕ್ ಹೇಳಿದ್ದಾರೆ.

ಏಪ್ರಿಲ್ 22, 2021ರಂದು ಅವರು ನೀಡಿರುವ ದೂರಿನ ಪ್ರತಿಯನ್ನು ಸಂದೀಪ್ ಪಾಟೀಲ್ ಮತ್ತು ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್, ಸೆಂಟ್ರಲ್ ಕ್ರೈಂ ಬ್ರಾಂಚ್, ಬಿಎಸ್ ಅಂಗಡಿ ಅವರಿಗೆ ಕಳುಹಿಸಲಾಗಿದೆ ಎಂದು ಹೇಳಿಕೊಳ್ಳುವ ವಾಟ್ಸಾಪ್ ಚಾಟ್‌ಗಳ ಚಿತ್ರಗಳನ್ನು ಅಶೋಕ್‌ ಹಂಚಿಕೊಂಡಿದ್ದಾರೆ. ಹಗರಣದ ಬಗ್ಗೆ ಅವರು ಏಪ್ರಿಲ್‌ನಲ್ಲಿಯೇ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಶ್ರೀಕಿಯಿಂದ ನಗದೀಕರಿಸಲಾದ ಸುಮಾರು 12,900 ಬಿಟ್‌ಕಾಯಿನ್‌ಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಅಶೋಕ್ ಹೇಳಿದ್ದಾರೆ. “ಡಿಸೆಂಬರ್ 2020 ರಲ್ಲಿ ಡ್ರಗ್ ಪ್ರಕರಣದಲ್ಲಿ ಶ್ರೀಕಿಯನ್ನು ಬಂಧಿಸಲಾಗಿತ್ತು. ಜನವರಿ 2021 ರಲ್ಲಿ, ಕೆಲವು ಉನ್ನತ ಮಟ್ಟದ CCB ಅಧಿಕಾರಿಗಳು ಶ್ರೀಕಿಯಿಂದ 9,600 ಬಿಟ್‌ಕಾಯಿನ್‌ಗಳನ್ನು ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ನನಗೆ ಬಂದಿತು. ಈ ಮಾಹಿತಿಯನ್ನು ನಾನು ಜನವರಿ 3 ರಂದು ಐಪಿಎಸ್ ಅಧಿಕಾರಿಯೊಂದಿಗೆ ವಾಟ್ಸಾಪ್‌ನಲ್ಲಿ ಹಂಚಿಕೊಂಡಿದ್ದೇನೆ. ಆದರೆ ಏನೂ ಕ್ರಮ ಕೈಗೊಳ್ಳಲಾಗಿಲ್ಲ” ಎಂದು ಅವರು ಹೇಳಿದ್ದಾರೆ.

“ನಾನು ಏಪ್ರಿಲ್ 20 ರಂದು ಕಮಲ್ ಪಂತ್ ಅವರಿಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದೇನೆ. ಈ ಹಗರಣವನ್ನು ವಿವರಿಸಲು ನಾನು ಅವರನ್ನು ಭೇಟಿಯಾಗಲು ಬಯಸುತ್ತೇನೆ ಎಂದೂ ಕೂಡ ತಿಳಿಸಿದ್ದೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.” ತನ್ನ ದೂರಿನಲ್ಲಿ, “ಶ್ರೀಕಿ ಬಿಟ್‌ಕಾಯಿನ್‌ನ ಅಧಿಕೃತ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿದ್ದು, ಸಾವಿರಾರು ಬಿಟ್‌ಕಾಯಿನ್‌ಗಳನ್ನು ಅಕ್ರಮವಾಗಿ ತನ್ನ ವ್ಯಾಲೆಟ್‌ಗೆ ವರ್ಗಾಯಿಸಿದ್ದಾನೆ ಎಂದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

ಈತನ ವಿರುದ್ಧ ನೆದರ್ ಲ್ಯಾಂಡ್ ನ ಮ್‌ಸ್ಟರ್‌ಡ್ಯಾಮ್‌ನಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಬಗ್ಗೆ ಆಮ್‌ಸ್ಟರ್‌ಡ್ಯಾಮ್‌ನ ರಾಷ್ಟ್ರೀಯ ಪೊಲೀಸ್ ಕಾರ್ಪ್ಸ್ ತನಿಖೆ ನಡೆಸುತ್ತಿದೆ. ಶ್ರೀಕಿ ವರ್ಗಾಯಿಸಿದ ಬಿಟ್‌ಕಾಯಿನ್‌ಗಳನ್ನು ಟ್ರ್ಯಾಕ್ ಮಾಡುತ್ತಿದೆ. ನಾನು ಈ ಎಲ್ಲಾ ದಾಖಲೆಗಳ ಪ್ರತಿಯನ್ನು ಸಂಗ್ರಹಿಸಿದ್ದೇನೆ ಮತ್ತು ಎಫ್‌ಬಿಐ ಅನ್ನು ಸಂಪರ್ಕಿಸಿದ್ದೇನೆ. ಬೆಂಗಳೂರಿನ ಇಂಟರ್‌ಪೋಲ್‌ಗೆ ದಾಖಲೆಗಳನ್ನು ನೀಡುವಂತೆ ಎಫ್‌ಬಿಐ ಮನವಿ ಮಾಡಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನ ಇಂಟರ್‌ಪೋಲ್‌ನ ಸಂಪರ್ಕ ಅಧಿಕಾರಿ ಉಮೇಶ್ ಕುಮಾರ್, ಎಡಿಜಿಪಿ, ಸಿಐಡಿ ಸೇರಿದಂತೆ ಭಾರತೀಯ ಏಜೆನ್ಸಿಗಳ ಮೇಲೆ ನಂಬಿಕೆಯಿಲ್ಲದ ಕಾರಣ, ನಾನು ಫ್ರಾನ್ಸ್‌ನಲ್ಲಿರುವ ಇಂಟರ್‌ಪೋಲ್‌ಗೆ ಪತ್ರ ಬರೆದಿದ್ದೇನೆ ಎಂದು ಅವರು ಹೇಳಿದ್ದಾರೆ.

ಫೈಲ್ ಸುಮಾರು 1,017 ಸ್ಕ್ರೀನ್‌ಶಾಟ್‌ಗಳನ್ನು ಒಳಗೊಂಡಿದೆ. ಪ್ರತಿ ಬಾರಿ ಬಿಟ್‌ಕಾಯಿನ್ ಅನ್ನು ನಗದೀಕರಿಸಿದಾಗ ಎಫ್‌ಬಿಐ ಸಂದೇಶವನ್ನು ಸ್ವೀಕರಿಸಿದೆ. ಶ್ರೀಕಿ ಪೊಲೀಸರ ವಶದಲ್ಲಿದ್ದಾಗಲೇ 12,900 ಬಿಟ್‌ಕಾಯಿನ್‌ಗಳನ್ನು ನಗದೀಕರಿಸಲಾಗಿದೆ ಎಂದು ತಿಳಿದಿದ್ದರೂ ಹಿರಿಯ ಪೊಲೀಸ್ ಅಧಿಕಾರಿಗಳು ಕ್ರಮ ಜರುಗಿಸಲು ವಿಫಲರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಿಎಂ ಬಲಿ ಪಡೆಯುತ್ತೆ ಬಿಟ್ ಕಾಯಿನ್ ಪ್ರಕರಣ; ಬಿಜೆಪಿಯಲ್ಲಿ ಈ ಬಾರಿಯೂ ಮೂವರು ಸಿಎಂ: ಪ್ರಿಯಾಂಕ್ ಖರ್ಗೆ

ಈ “ಡೀಲ್” ನಲ್ಲಿ 17 ಜನರು ಭಾಗಿಯಾಗಿರುವ ಬಗ್ಗೆ ತಮ್ಮ ಬಳಿ ದಾಖಲೆಗಳಿವೆ ಎಂದು ಅಶೋಕ್‌ ಹೇಳಿದ್ದಾರೆ. “ರಾಜ್ಯದ ಪೊಲೀಸ್‌ ಇಲಾಖೆ ಅಥವಾ ಇತರರು ನನ್ನನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಅಥವಾ ನನಗೆ ಹಾನಿ ಮಾಡಲು ಪ್ರಯತ್ನಿಸಿದರೆ” ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ದಾಖಲೆಗಳನ್ನು ಕಳುಹಿಸಲು ತಾವು ಯೋಜಿಸುತ್ತಿರುವುದಾಗಿ ಅಶೋಕ್‌ ಅವರು ಪೊಲೀಸ್ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಏಪ್ರಿಲ್ 26 ರಂದು ಸಂದೀಪ್ ಪಾಟೀಲ್ ಅವರ ಕಚೇರಿಗೆ ಲಿಖಿತ ದೂರನ್ನು ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ. ಏಪ್ರಿಲ್ 27 ರಂದು ತಮ್ಮನ್ನು ಸಿಸಿಬಿ ಕಚೇರಿಗೆ ಕರೆಸಿ ಡಿಸಿಪಿ  ಎಲ್ಲಾ ವಿವರಗಳನ್ನು ತೆಗೆದುಕೊಂಡು, ತಮ್ಮ ಹಿರಿಯ ಅಧಿಕಾರಿ ಸಂದೀಪ್ ಪಾಟೀಲ್ ಅವರಿಗೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ಅಶೋಕ್ ಹೇಳಿದ್ದಾರೆ.

ಅಶೋಕ್‌ ಅವರು ತಮ್ಮ ಬಳಿ ಹೆಚ್ಚಿನ ದಾಖಲೆಗಳಿವೆ, ಆದರೆ ಅವುಗಳನ್ನು ಈಗ ಬಿಡುಗಡೆ ಮಾಡುವುದಿಲ್ಲ ಎಂದೂ ಹೇಳಿದ್ದಾರೆ.

ತಮ್ಮ ಜೀವಕ್ಕೆ ಅಪಾಯವಿದೆ ಮತ್ತು ಹಗರಣದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳ ಬಗ್ಗೆ ತಮ್ಮ ಬಳಿ ಮಾಹಿತಿ ಇರುವುದರಿಂದ ಮಾಧ್ಯಮಗಳನ್ನು ಸಂಪರ್ಕಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ದೂರನ್ನು ನಿರ್ಲಕ್ಷಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬಿಟ್‌ ಕಾಯಿನ್ ಹಗರಣ: ದೊಡ್ಡ ದೊಡ್ಡವರೇ ಇದ್ದಾರೆ; ಮುಖ್ಯಪೇದೆ – ನಿವೃತ್ತಿ ಪಿಎಸ್‌ಐ ಆಡಿಯೋ ವೈರಲ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights