ಕೊರೊನಾ ಹೊಸ ರೂಪಾಂತರಿ ಪತ್ತೆ: 3 ದೇಶಗಳಿಂದ ರಾಜ್ಯಕ್ಕೆ ಬರುವವರಿಗೆ RTPCR ಟೆಸ್ಟ್‌ ಕಡ್ಡಾಯ!

ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ಹೊಸ ತಳಿಯ ಕೊರೊನಾ ರೂಪಾಂತರಿ ವೈರಸ್‌ ಒಮಿಕ್ರೋನ್‌ (Omicron) ಪತ್ತೆಯಾಗಿದೆ. ಈ ವೈರಸ್‌ ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ ಎಂದು WHO ಹೇಳಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ, ಹಾಂಕಾಂಗ್‌ ಮತ್ತು ಬೋಟ್ಸ್‌ವಾನಾದಿಂದ ಕರ್ನಾಟಕಕ್ಕೆ ಬರುವವರಿಗೆ RTPCR ಟೆಸ್ಟ್‌ ಕಡ್ಡಾಯ ಎಂದು ರಾಜ್ಯ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಈ ಮೂರು ದೇಶಗಳಿಂದ ರಾಜ್ಯ ಬರುವವರಿಗೆ RTPCR ಟೆಸ್ಟ್‌ ಕಡ್ಡಾಯವಾಗಿದೆ. ಅಲ್ಲದೆ, ಕಳೆದ 15 ದಿನಗಳಿಂದ ಈ ದೇಶಗಳಿಂದ ರಾಜ್ಯಕ್ಕೆ ಬಂದಿರುವವರನ್ನು ಗುರುತಿಸಿ, ಅವರಿಗೂ ಟೆಸ್ಟ್‌ ಮಾಡಬೇಕು. ಕೊರೊನಾ ಪಾಸಿಟಿವ್‌ ಬಂದವರನ್ನು ಚಿಕಿತ್ಸೆಗೆ ಕಳಿಸಬೇಕು. ನೆಗೆಟಿವ್ ರಿಪೋರ್ಟ್‌ ಬಂದವರನ್ನೂ ಕೂಡ ಕಡ್ಡಾಯವಾಗಿ 10 ದಿನಗಳ ಕಾಲ ಐಸೋಲೇಷನ್‌ನಲ್ಲಿ ಇರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ.

ಕೆಲವು ದೇಶಗಳಲ್ಲಿ ಕೊರೊನಾ 3ನೇ ಅಲೆ ಆಕ್ರಮಿಸಿಕೊಂಡಿದ್ದು, ರಾಜ್ಯದಲ್ಲೂ ಈಗಿನಿಂದ ಎಚ್ಚರಿಕೆ ವಹಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಶನಿವಾರ ಸಭೆ ನಡೆದಿದ್ದು, ಸಭೆಯಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಅದರಂತೆ, ದಿನನಿತ್ಯದ ಕೊರೊನಾ ಟೆಸ್ಟ್‌ ಸಂಖ್ಯೆಯನ್ನು 60,000 ದಿಂದ 80,000ಕ್ಕೆ ಹೆಚ್ಚಿಸಲಾಗಿದೆ. ಪ್ರತಿ ಜಿಲ್ಲೆಗಳಿಗೂ ಟಾರ್ಗೆಟ್‌ ನೀಡಲಾಗಿದೆ.

ಸಭೆಯಲ್ಲಿ ಕೈಗೊಳ್ಳಲಾದ ಪ್ರಮುಖ ನಿರ್ಧಾರಗಳು ಹೀಗಿವೆ:

  1. ದಕ್ಷಿಣ ಆಫ್ರಿಕಾ, ಹಾಂಕಾಂಗ್‌ ಮತ್ತು ಬೋಟ್ಸ್‌ವಾನಾದಿಂದ ರಾಜ್ಯಕ್ಕೆ ಬರುವವರಿಗೆ RTPCR ಟೆಸ್ಟ್‌ ಮತ್ತು 10 ದಿನಗಳ ಐಸೋಲೇಷನ್‌ ಕಡ್ಡಾಯ.
  2. ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ RTPCR ಟೆಸ್ಟ್‌ ಕಡ್ಡಾಯ.
  3. ಗಡಿ ಜಿಲ್ಲೆಗಳಲ್ಲಿ ಇಲ್ಲಾ ಇಲಾಖೆಗಳು ಮೂರು ಶಿಫ್ಟ್ ಗಳಲ್ಲಿ ಕೆಲಸ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ.
  4. ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ನೆರೆಟಿವ್‌ ರಿಪೋರ್ಟ್‌ ಕಡ್ಡಾಯ. ಪ್ರತಿ 07 ದಿನಕ್ಕೊಮ್ಮೆ RTPCR ಟೆಸ್ಟ್‌ ಮಾಡಿಸಬೇಕು.
  5. ಸರ್ಕಾರಿ ಕಚೇರಿಗಳು ಹಾಗೂ ಮಾಲ್‌ಗಳು, ಹೋಟೆಲ್‌, ರೆಸ್ಟೋರೆಂಟ್‌ಗಳು, ಸಿನಿಮಾ ಹಾಲ್‌ಗಳು, ಈಜುಗೊಳ ಸಾರ್ವಜನಿಕ ಗ್ರಂಥಾಲಯ, ಮೃಗಾಲಯಗಳು ಮತ್ತು ಜೈವಿಕ ಉದ್ಯಾನವನಗಳು, ಕೆಲಸ ಮಾಡುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆಯಬೇಕು.
  6. ವೈದ್ಯಕೀಯ ಕಾಲೇಜು ಮತ್ತು ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಬೇಕು.
  7. ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಗಳನ್ನು ತೀವ್ರಗೊಳಿಸುವುದು. ನೆಗಟಿವ್ ಇದ್ದವರಿಗೆ ನಗರ ಪ್ರವೇಶಕ್ಕೆ ಅನುಮತಿ.

ಇದನ್ನೂ ಓದಿ: ACB ದಾಳಿ: ಮನೆಯ ಪೈಪ್‌ನಲ್ಲಿ ನೋಟಿನ ಕಂತೆ ಇಟ್ಟು ಜೈಲು ಸೇರಿದ ಸರ್ಕಾರಿ ಎಂಜಿನಿಯರ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights