ಎರಡು ತಲೆಗಳುಳ್ಳ ಮಗು ಜನನ; ಶಿಶುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪರಾರಿಯಾದ ಪೋಷಕರು
ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಎರಡು ತಲೆಗಳುಳ್ಳ ಮಗುವೊಂದು ಜನಿಸಿದ್ದು, ಆ ನವಜಾತ ಶಿಶುವನ್ನು ಹೆತ್ತವರು ಆಸ್ಪತ್ರೆಯಲ್ಲಿಯೂ ಬಿಟ್ಟು ಪರಾರಿಯಾಗಿದ್ದಾರೆ.
ರಾಂಚಿಯ ರಾಜೇಂದ್ರ ಇನ್ಸ್ಟಿುಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ರಿಮ್ಸ್) ಆಸ್ಪತ್ರೆಯಲ್ಲಿ ಎರಡು ತಲೆಯುಳ್ಳು ಮಗು ಜನಿಸಿದೆ. ಆ ಮಗು ಓಸಿಪಿಟಲ್ ಮೆನಿಂಜೋ ಇನ್ಸೆಪಫಲೋಸಿಲ್ ಕಾಯಿಲೆಗೆ ತುತ್ತಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಗುವಿನ ತಲೆಯ ಹಿಂಭಾಗ ಚೀಲದಂತಿದ್ದು, ಎರಡು ತಲೆ ಇರುವಂತೆ ಕಾಣುತ್ತದೆ. ಈ ಮಗುವನ್ನು ಪೋಷಕರು ಆಸ್ಪತ್ರೆಯಲ್ಲಿಯೇ ಬಿಟ್ಟು ಹೋಗಿದ್ದಾರೆ. ಅಲ್ಲದೇ, ಅವರು ಆಸ್ಪತ್ರೆಯಗೆ ನಕಲಿ ವಿಳಾಸ ನೀಡಿದ್ದಾರೆ ಎಂದು ಹೇಳಲಾಗಿದೆ.
ಮಗುವಿಗೆ ಜನ್ಮ ಕೊಟ್ಟ ಕೂಡಲೇ ಅಲ್ಲಿಂದ ಪರಾರಿ ಆಗಬೇಕೆಂದು ಮೊದಲೇ ನಿರ್ಧರಿಸಿದಂತೆ ಕಾಣುತ್ತದೆ. ಮಗು ಜನಿಸಿದ ಕೂಡಲೇ, ಅದನ್ನು ಐಸಿಯುಗೆ ಸೇರಿಸಲಾಗಿತ್ತು. ಅದೇ ಸಮಯದಲ್ಲಿ ಮಗುವಿನ ಕುಟುಂಬದವರು ಅಲ್ಲಿಂದ ಸದ್ದಿಲ್ಲದೆ ಪರಾರಿ ಆಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ರಿಮ್ಸ್ ನ ಆಡಳಿತ ಮಂಡಳಿಯು ಮಗು ಒಂಟಿಯಾಗಿರುವ ಕುರಿತು ಸಿಡಬ್ಲ್ಯೂಸಿ ಗೆ ವರದಿ ಮಾಡಿದ್ದು, ಸಿಡಬ್ಲ್ಯೂಸಿಯಿಂದ ಮಾಹಿತಿ ಪಡೆದ ಬಳಿಕ ಕರುಣಾ ಸಂಸ್ಥೆ ಮಗುವಿಗೆ ನೆರವು ನೀಡಲು ಮುಂದಾಗಿದೆ.
ಓಸಿಪಿಟಲ್ ಮೆನಿಂಜೊ ಇನ್ಸೆಕಫಲೋಸಿಲ್ ಕಾಯಿಲೆಯು ಒಂದು ಜನ್ಮದತ್ತ ಕಾಯಿಲೆಯಾಗಿದ್ದು, ಅದರಲ್ಲಿ ತಲೆ ಬುರುಡೆಯ ಮೂಳೆಗಳು ಹೊರಗೆ ಬಂದಿರುತ್ತವೆ ಮತ್ತು ತಲೆ ಹಿಂದೆ ಒಂದು ಚೀಲದ ರೂಪದಲ್ಲಿ ಸಂಗ್ರಹವಾಗಿರುತ್ತವೆ. ಮಗು ಜೀವನ ಪರ್ಯಂತ ಈ ಕಾಯಿಲೆಯಿಂದ ಬಳಬೇಕಾಗುತ್ತದೆ. ಇದರಿಂದ ಇನ್ನಿತರ ಕಾಯಿಲೆಗಳು ಬರುವ ಸಾಧ್ಯತೆಯೂ ಕೂಡ ಇರುತ್ತವೆ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: ವಿವಾಹೇತರ ಸಂಬಂಧ ಆರೋಪ: ಮಹಿಳೆ ಮತ್ತು ಯುವಕನನ್ನು ಕಂಬಕ್ಕೆ ಕಟ್ಟಿ ಕ್ರೌರ್ಯ ಮೆರೆದ ಗ್ರಾಮಸ್ಥರು