Fact Check: ಯುಪಿಯಲ್ಲಿ ಮುಲಾಯಂ ಸಿಂಗ್ ಅಧಿಕಾರದಲ್ಲಿದ್ದಾಗ ಸಂತರ ಮೇಲೆ ದಾಳಿ ನಡೆಸಲಾಗಿದೆ ಎಂದು ಗುಜರಾತ್ನ ಚಿತ್ರವನ್ನು ಹಂಚಿಕೊಳ್ಳಲಾಗಿದೆ!
ಪೊಲೀಸ್ ಅಧಿಕಾರಿಯೊಬ್ಬರು ಒಬ್ಬ ವ್ಯಕ್ತಿಯ ತಲೆಗೂದಲನ್ನು ಎಳೆಯುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ನೆಟ್ಟಿಗರು, “ನಮ್ಮ ಸಂತರನ್ನು ಅವರ ಕೂದಲನ್ನು ಹಿಡಿದು ಎಳೆಯುತ್ತಿದ್ದವರು ಜಿಹಾದಿ ಅಲ್ಲ … ಅದು ಅಖಿಲೇಶ್ ಯಾದವ್ ಅವರ ತಂದೆ… ನೆನಪಿದೆಯಲ್ಲವೇ?” ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ಚಿತ್ರವು ಮುಲಾಯಂ ಸಿಂಗ್ ಯಾದವ್ ಅವರ ಅಧಿಕಾರಾವಧಿಯಲ್ಲಿ ತೆಗೆದ ಉತ್ತರ ಪ್ರದೇಶದ ಚಿತ್ರ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಯೊಂದಿಗೆ ಚಿತ್ರವು ಭಾರೀ ಪ್ರಮಾಣದಲ್ಲಿ ವೈರಲ್ ಅಗಿದೆ. ಉತ್ತರ ಪ್ರದೇಶದಲ್ಲಿ 2022ರ ಆರಂಭದಲ್ಲಿ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಚಿತ್ರವು ವೈರಲ್ ಆಗುತ್ತಿದೆ.
हमारे संतो का बाल पकड़ कर खिंचवाने वाला कोई जेहादी नही था,,,वो अखिलेश यादव का बाप था…याद है ना ?? pic.twitter.com/B1BMIcqsoA
— महंत बलरामदास श्री हनुमानगढ़ी अयोध्या (@Balram_Ayodhya) December 5, 2021
ಹಲವಾರು ಇತರ ಟ್ವಿಟರ್ ಮತ್ತು ಫೇಸ್ಬುಕ್ ಬಳಕೆದಾರರು ಕೂಡ ಈ ಚಿತ್ರವನ್ನು ಅದೇ ಹೇಳಿಯೊಂದಿಗೆ ಹಂಚಿಕೊಂಡಿದ್ದಾರೆ.
ಸತ್ಯ – ಈ ಫೋಟೋ ಹಳೆಯ ಚಿತ್ರ:
ಚಿತ್ರವನ್ನು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ ಚಿತ್ರಕ್ಕೆ ಸಂಬಂಧಿಸಿದ ಹಳೆಯ ಸಂದರ್ಭಗಳು ದೊರೆತಿವೆ.
ಚಿತ್ರವನ್ನು ಗುಜರಾತ್ನಲ್ಲಿರುವ ಆಶಾರಂಬಾಪು ಆಶ್ರಮದ ಅಧಿಕೃತ ವೆಬ್ಸೈಟ್ ashram.org ನಲ್ಲಿ ಅಪ್ಲೋಡ್ ಮಾಡಲಾಗಿದೆ. ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರಿಗೆ 2013ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ವಿಶೇಷ ಎಸ್ಸಿ/ಎಸ್ಟಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು.
ಇದಕ್ಕೆ ಸಂಬಂಧಿಸಿದಂತೆ 2009ರ ಡಿಸೆಂಬರ್ನಲ್ಲಿ ಲೇಖನವನ್ನು ಪ್ರಕಟಿಸಲಾಗಿದೆ. ಇದನ್ನು ಇಂಟರ್ನೆಟ್ ಆರ್ಕೈವ್ನಲ್ಲಿ ನೋಡಬಹುದು. ಲೇಖನದ ಪ್ರಕಾರ, ಚಿತ್ರಗಳು ನವೆಂಬರ್ 27, 2009 ರಂದು ನಡೆದ ಘಟನೆಯದ್ದು, ಆ ವರದಿಯಲ್ಲಿ ಆಶ್ರಮದ ಸದಸ್ಯರ ವಿರುದ್ಧ ಪೊಲೀಸ್ ದೌರ್ಜನ್ಯವನ್ನು ಉಲ್ಲೇಖಿಸಲಾಗಿದೆ. ಗಾಂಧಿನಗರದಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ ನಂತರ ಆಶ್ರಮದ ಸುಮಾರು 150 ಅನುಯಾಯಿಗಳನ್ನು ಬಂಧಿಸಲಾಗಿತ್ತು.
ಲೇಖನವು ವೈರಲ್ ಅಗಿರುವ ಚಿತ್ರದ ಜೊತೆಗೆ ಇನ್ನೂ ಹಲವು ಚಿತ್ರಗಳನ್ನು ಒಳಗೊಂಡಿದೆ.
ಅದೇ ದಿನ ಗುಜರಾತ್ನ ಅಹಮದಾಬಾದ್ನ ಮೊಟೆರಾ ಪ್ರದೇಶದಲ್ಲಿನ ಅಸಾರಾಂ ಅವರ ಆಶ್ರಮದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಆಜ್ ತಕ್ ಕೂಡ ಈ ಘಟನೆಯನ್ನು ವರದಿ ಮಾಡಿದೆ. ಒಂದು ದಿನದ ಹಿಂದೆ ಪೊಲೀಸರು ಮತ್ತು ಆಶ್ರಮದ ಸದಸ್ಯರ ನಡುವೆ ಕಲ್ಲು ತೂರಾಟ ನಡೆದ ನಂತರ ಪೊಲೀಸರು ದಾಳಿಯ ಸಮಯದಲ್ಲಿ ಆಶ್ರಮದ 200 ಸದಸ್ಯರನ್ನು ಬಂಧಿಸಿದ್ದಾರೆ ಎಂದು ಅದು ವರದಿ ಮಾಡಿದೆ.
ಚಿತ್ರಗಳನ್ನು Diwala.com ನಲ್ಲಿ ಪೋಸ್ಟ್ ಮಾಡಲಾಗಿದೆ (ಡೊಮೇನ್ ಇನ್ನು ಮುಂದೆ ಪ್ರವೇಶಿಸಲಾಗುವುದಿಲ್ಲ). ಈ ಲೇಖನವು ಗುಜರಾತ್ನಲ್ಲಿ ಘಟನೆ ನಡೆದಿದೆ ಎಂದು ವರದಿ ಮಾಡಿದೆ.
ಹೆಚ್ಚುವರಿಯಾಗಿ, ಅಸಾರಾಂ ಅವರ ಯೂಟ್ಯೂಬ್ ಚಾನೆಲ್ನಲ್ಲಿ ವೀಡಿಯೊಗಳು ದೊರೆತಿದ್ದು, Diwala.com ನಲ್ಲಿ ಅಪ್ಲೋಡ್ ಮಾಡಿದ ಚಿತ್ರಗಳಲ್ಲಿರುವ ಒಂದು ಚಿತ್ರವು 1:52 ಮಾರ್ಕ್ನಲ್ಲಿ ದೃಶ್ಯಗಳಿಗೆ ಹೊಂದಾಣಿಕೆಯಾಗುತ್ತವೆ.
ಒಟ್ಟಾರೆಯಾಗಿ ಹೇಳುವುದಾದರೆ, ಗುಜರಾತ್ನಲ್ಲಿ ಪೊಲೀಸ್ ಅಧಿಕಾರಿ ಮತ್ತು ಅಸಾರಾಂ ಬೆಂಬಲಿಗರ ನಡುವಿನ ಘರ್ಷಣೆಯ ಚಿತ್ರವನ್ನು ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಆಡಳಿತದಲ್ಲಿ ಪೊಲೀಸ್ ಹಿಂಸಾಚಾರ ಎಂದು ಹಂಚಿಕೊಳ್ಳಲಾಗಿದೆ.
ಕೃಪೆ: ಆಲ್ಟ್ ನ್ಯೂಸ್
ಇದನ್ನೂ ಓದಿ: Fact Check: ಜಾಗೃತಿ ಮೂಡಿಸುವ ವಿಡಿಯೋವನ್ನು ಮಕ್ಕಳ ಅಪಹರಣದ ನೈಜ ಘಟನೆ ಎಂದು ಹಂಚಿಕೊಳ್ಳಲಾಗಿದೆ!