Fact Check: ಮಸೀದಿ ಕೆಡವಿದಾಗ ನಂದಿ ವಿಗ್ರಹ ಪತ್ತೆಯಾಗಿದ್ದು ಸತ್ಯವೇ?

ಮಣ್ಣಿನಲ್ಲಿ ಮುಚ್ಚಿಹೋಗಿದ್ದ ಹಿಂದೂ ದೇವತೆ ನಂದಿಯ ವಿಗ್ರಹವು ಮಸೀದಿಯನ್ನು ಕೆಡವುವಾಗಿ ಪತ್ತೆಯಾಗಿದೆ ಎಂಬ ಹೇಳಿಕೆಯೊಂದಿಗೆ ಚಿತ್ರವೊಂದನ್ನು ಹಂಚಿಕೊಳ್ಳಲಾಗಿದೆ.

https://twitter.com/ChandniPathak19/status/1465612050554494982?s=20

ಇದೇ ಹೇಳಿಕೆಯೊಂದಿಗೆ ಆ ಚಿತ್ರವನ್ನು ಟ್ವಿಟರ್‌ ಮತ್ತು ಫೇಸ್‌ಬುಕ್‌ಗಳಲ್ಲಿಯೂ ಹಂಚಿಕೊಳ್ಳಲಾಗಿದೆ.

“ಇದು ಪ್ರತಿ ಇಸ್ಲಾಮಿಕ್ ಗೋರಿ ಅಥವಾ ಮಸೀದಿಯ ಸತ್ಯ” ಎಂಬ ಹೇಳಿಕೆಯ ಜೊತೆಗೂ ಹಲವರು ಹಂಚಿಕೊಂಡಿದ್ದಾರೆ. (ಆರ್ಕೈವ್ ಲಿಂಕ್) (1, 2)

ಫ್ಯಾಕ್ಟ್‌ ಚೆಕ್: 

ವೈರಲ್‌ ಆದ ಚಿತ್ರವನ್ನು ಬಳಸಿಕೊಂಡು ರಿವರ್ಸ್‌ ಇಮೇಜ್ ಮೂಲಕ ಹುಡುಕಿದಾಗ, ‘ಲಾಸ್ಟ್ ಟೆಂಪಲ್ಸ್’ ಹೆಸರಿನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ಮೂಲ ಚಿತ್ರ ದೊರೆತಿದೆ. ನಮಕ್ಕಲ್ ಜಿಲ್ಲೆಯ ಮೋಹನೂರಿನ ಸೆಲ್ಲಾಂಡಿಯಮ್ಮನ್ ದೇವಸ್ಥಾನದಲ್ಲಿ ಉತ್ಖನನದ ಸಮಯದಲ್ಲಿ ದೊಡ್ಡ ನಂದಿ ವಿಗ್ರಹ ಪತ್ತೆಯಾಗಿದೆ ಎಂದು ಬಳಕೆದಾರರು ಬರೆದಿದ್ದಾರೆ.

ಈ ಚಿತ್ರಗಳನ್ನು ಮೊದಲು ಸೆಪ್ಟೆಂಬರ್ 1, 2021 ರಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ ಎಂಬುದು ಗೊತ್ತಾಗಿದೆ. ಈ ಪೋಸ್ಟ್‌ನಲ್ಲಿ ಚಿತ್ರಗಳನ್ನು ನಾಮಕ್ಕಲ್ ಜಿಲ್ಲೆಯ ದೇವಸ್ಥಾನದಲ್ಲಿ ತೆಗೆದಿದೆ ಎಂದು ಉಲ್ಲೇಖಿಸಲಾಗಿದೆ.

ನಾಮಕ್ಕಲ್ ತಮಿಳುನಾಡಿನಲ್ಲಿದೆ. ಈ ಸುಳಿವನ್ನು ಬಳಸಿಕೊಂಡು ತಮಿಳು ಭಾಷೆಯ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದಾಗ, ಸೆಲಂಡಿಯಮ್ಮನ್ ದೇವಾಲಯದ ಜೀರ್ಣೋದ್ಧಾರದ ಕುರಿತು ಸೆಪ್ಟೆಂಬರ್ 2 ರಂದು ದಿನಮಲರ್‌ನಲ್ಲಿ ಲೇಖನವೊಂದು ದೊರೆತಿದೆ. ದೇವಸ್ಥಾನದ ಸುತ್ತ ಕಾರ್ಮಿಕರು ಅಗೆಯುತ್ತಿದ್ದಾಗ ಹಳೆಯ ನಂದಿ ವಿಗ್ರಹ ಪತ್ತೆಯಾಗಿದೆ. ದೇಗುಲದ ಅಧಿಕಾರಿಗಳು ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೈಯಿಂದ ವಿಗ್ರಹವನ್ನು ತೆಗೆದಿದ್ದಾರೆ. ಪ್ರಸ್ತುತ ಸೇಲಂ ಮ್ಯೂಸಿಯಂನಲ್ಲಿರುವ ಪ್ರತಿಮೆಯನ್ನು ಪುರಾತತ್ವ ಇಲಾಖೆ ಪರಿಶೀಲಿಸುತ್ತಿದೆ.

ತಮಿಳು ನ್ಯೂಸ್ ಪೋರ್ಟಲ್ ವಿಕಟನ್ ಕೂಡ ನಾಮಕ್ಕಲ್‌ನ ದೇವಸ್ಥಾನದ ಸುತ್ತಲೂ ಅಗೆಯುತ್ತಿರುವಾಗ ನಂದಿ ವಿಗ್ರಹ ಪತ್ತೆಯಾದ ಬಗ್ಗೆ ವರದಿಯನ್ನು ಪ್ರಕಟಿಸಿದೆ.

ದೇವಾಲಯದ ನವೀಕರಣದ ಕುರಿತು ತಮಿಳು ಸುದ್ದಿ ವಾಹಿನಿ ಪುತಿಯಾ ತಲೈಮುರೈ ಟಿವಿಯ ಸುದ್ದಿ ತುಣುಕನ್ನೂ ಇಲ್ಲಿ ವೀಕ್ಷಿಸಬಹುದು.

ಆದ್ದರಿಂದ ತಮಿಳುನಾಡಿನ ದೇವಸ್ಥಾನದ ಕೆಳಗೆ ಪತ್ತೆಯಾದ ವಿಗ್ರಹವನ್ನು, ಮಸೀದಿಯನ್ನು ಅಗೆದಾಗ ಸಿಕ್ಕ ನಂದಿ ವಿಗ್ರಹ ಎಂದು ಸುಳ್ಳು ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಕೃಪೆ: ಆಲ್ಟ್‌ನ್ಯೂಸ್‌

ಇದನ್ನೂ ಓದಿ: Fact Check: ತಿರುಪತಿ ಪುರೋಹಿತರ ಮನೆಯಲ್ಲಿ 128KG ಚಿನ್ನ ಪತ್ತೆ? ನಿಜಾಂಶವೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights