ಅಜ್ಜಿ-ಮೊಮ್ಮಗನ ಮೇಲೆ ದಾಳಿ ಮಾಡಿದ ಹುಚ್ಚು ಗೂಳಿ : ಆಘಾತಕಾರಿ ವೀಡಿಯೊ ವೈರಲ್!

ಹರಿಯಾಣದ ಬಾಲಕನೊಬ್ಬ ತನ್ನ ಅಜ್ಜಿಯನ್ನು ಹುಚ್ಚು ಗೂಳಿಯಿಂದ ರಕ್ಷಿಸಲು ಧಾವಿಸಿ ತಾನೂ ಗೂಳಿ ದಾಳಿಗೆ ಒಳಗಾಗಿದ್ದಾನೆ. ಈ ಆಘಾತಕಾರಿ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಘಟನೆ ಹರಿಯಾಣದ ಮಹೇಂದ್ರಗರದಿಂದ ಸೋಮವಾರ ವರದಿಯಾಗಿದೆ.

ವೀಡಿಯೋದಲ್ಲಿ ವಯಸ್ಸಾದ ಮಹಿಳೆ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಗೂಳಿ ಆಕೆಗೆ ಗುದ್ದಿ ಬೀಳಿಸುತ್ತದೆ. ಗೂಳಿ ಗುದ್ದಿದ ಬಳಿಕ ಆಕೆ ನೆಲಕ್ಕುರುಳುತ್ತಾಳೆ. ಇದನ್ನು ಕಂಡ ಮೊಮ್ಮಗ ಅವಳ ಸಹಾಯಕ್ಕೆ ಧಾವಿಸಲು ಪ್ರಯತ್ನಿಸುತ್ತಾನೆ. ಕೋಪಗೊಂಡ ಗೂಳಿ ಹುಡುಗನನ್ನು ನೆಲಕ್ಕೆ ಬಡಿದುರುಳಿಸುತ್ತದೆ. ಕೋಪದಿಂದ ಒದೆಯುತ್ತದೆ.

ನಂತರರ ಆ ಹುಡುಗ ನೇರವಾಗಿ ತನ್ನ ಅಜ್ಜಿಯ ಬಳಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಾನೆ. ಪಟ್ಟುಹಿಡಿದ ಗೂಳಿ ಮತ್ತೆ ಆಕ್ರಮಣ ಮಾಡುತ್ತದೆ. ಇಬ್ಬರೂ ಕೆಲವು ಹೆಜ್ಜೆಗಳ ಅಂತರದಲ್ಲಿ ನೆಲಕ್ಕುರುಳುತ್ತಾರೆ. ಅಜ್ಜಿ ಮತ್ತು ಅವಳ ಮೊಮ್ಮಗನಿಗೆ ಸಹಾಯ ಮಾಡಲು ಜನರು ತಮ್ಮ ಮನೆಗಳಿಂದ ಹೊರಬರುವುದನ್ನು ವೀಡಿಯೊ ತೋರಿಸುತ್ತದೆ.

ಎಎನ್‌ಐ ಪ್ರಕಾರ, ಗೂಳಿಯಿಂದ ಮೂರು ಜನರು ಗಾಯಗೊಂಡಿದ್ದಾರೆ. ಬಾಲಕನಿಗೂ ಗಾಯಗಳಾಗಿವೆ. “ಸೆಪ್ಟೆಂಬರ್ 28 ರಂದು ಹರಿಯಾಣದ ಮಹೇಂದ್ರಗರದ ದಲ್ಲಿ ಹುಚ್ಚು ಗೂಳಿ ಬಾಲಕ ಹಾಗೂ ಅಜ್ಜಿಯ ಮೇಲೆ ಹಲ್ಲೆ ನಡೆಸಿದೆ. ನಂತರ ಒಬ್ಬ ಹುಡುಗ ತನ್ನ ಅಜ್ಜಿಯನ್ನು ರಕ್ಷಿಸಿದನು” ಎಂದು ಸುದ್ದಿ ಸಂಸ್ಥೆ ಯೂಟ್ಯೂಬ್‌ನಲ್ಲಿ ಹಂಚಿಕೊಂಡು ಬರೆದಿದೆ.

ಇದನ್ನು ಕೆಳಗೆ ವೀಕ್ಷಿಸಿ:

ಬುಲ್ ದಾಳಿಯ ತುಣುಕನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದೆ. ಇದನ್ನು ಸಾವಿರಾರು ಜನ ವೀಕ್ಷಿಸಿದ್ದಾರೆ. ಯೂಟ್ಯೂಬ್ ಮತ್ತು ಟ್ವಿಟರ್ ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಆಘಾತಕಾರಿ ಕಾಮೆಂಟ್‌ಗಳನ್ನು ಗಳಿಸಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹುಡುಗ ಪ್ರದರ್ಶಿಸಿದ ಧೈರ್ಯವನ್ನು ಹೊಗಳಿದರು.

ಹಿರಿಯ ಶಾರ್ಪ್ ಶೂಟರ್ ಚಂದ್ರೋ ತೋಮರ್ ಅವರು ಈ ತುಣುಕನ್ನು ಹಂಚಿಕೊಂಡವರಲ್ಲಿ ಹುಡುಗ ಗೌರವಕ್ಕೆ ಅರ್ಹರು ಎಂದು ಶ್ಲಾಘಿಸಿದರು. ಐಪಿಎಸ್ ದೀಪನ್ಶು ಕಬ್ರಾ ಕೂಡ ಈ ಘಟನೆಯ ಬಗ್ಗೆ ಟ್ವೀಟ್ ಮಾಡಿ, “ಈ ಧೈರ್ಯಶಾಲಿ ಮಗುವಿಗೆ ಯಾವುದೇ ಪ್ರಶಂಸೆ ಸಾಕಾಗುವುದಿಲ್ಲ” ಎಂದು ಬರೆದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.