Fact check: ಅಬುಧಾಬಿಯಲ್ಲಿ ನಡೆದಿರುವ ಡ್ರೋನ್ ದಾಳಿಯ ವೈರಲ್ ಫೋಟೋ ನಿಜವೇ?

17 ಜನವರಿ ಸೋಮವಾರದಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿಯಲ್ಲಿ  ಡ್ರೋನ್ ದಾಳಿ  ಸಂಭವಿಸಿದೆ ಎಂದು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಒಂದು ಫೋಟೊವನ್ನು ವೈರಲ್ ಮಾಡುತ್ತಿದ್ದಾರೆ. ಫೋಟೊದಲ್ಲಿ  ನೆಲದ ಮೇಲೆ ವಿಮಾನವು ದಟ್ಟವಾದ ಹೊಗೆಯಲ್ಲಿ ಆವೃತವಾಗಿದ್ದು ಮತ್ತು ಅದರ ಸುತ್ತ ಕೆಲವು ವಾಹನಗಳು ಇರುವುದನ್ನು ಕಾಣಬಹುದಾಗಿದೆ. ವೈರಲ್ ಆಗುತ್ತಿರುವ ಫೋಟೋ ನಿಜವಾಗಿಯೂ ದಾಳಿ ನಡೆದಿರುವ ಸ್ಥಳವಾ ಅಥವಾ ಬೇರೆಯದಾ ಎಂದು ತಿಳಿಯಲು   ಫ್ಯಾಕ್ಟ್ ಚೆಕ್ ಮಾಡಲಾಗಿದೆ.

ಫ್ಯಾಕ್ಟ್ ಚೆಕ್:

ಈ ದಾಳಿಯನ್ನು ಯಮನ್ ಮಾಡಿದ್ದು,  ಮೂರು ಸಾವು ಸಂಭವಿಸಿದ್ದು, ಅದರಲ್ಲಿ ಇಬ್ಬರು ಭಾರತೀಯರು ಎಂದು ವರದಿಯಾಗಿದೆ. ಆದಾಗ್ಯೂ ವೈರಲ್ ಆದ ಫೋಟೊ ಪರಿಶೀಲಿಸಿದಾಗ , 2016 ರಲ್ಲಿ ದುಬೈನಲ್ಲಿ ಸಂಭವಿಸಿದ ವಿಮಾನ ಅಪಘಾತದ ಫೋಟೋ ಎಂದು ತಿಳಿದು ಬಂದಿದೆ. ಕೇರಳದಿಂದ 300 ಪ್ರಯಾಣಿಕರೊಂದಿಗೆ ಹೊರಟಿದ್ದ ಎಮಿರೇಟ್ಸ್ ವಿಮಾನವು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ ಎಂದು ವರದಿಯಾಗಿದೆ.

ಪ್ರತಿಪಾದನೆ: ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಯುಎಇಯಲ್ಲಿ ಯಮನ್ ದಾಳಿಯ ವಿವರಗಳನ್ನು ಹೊಂದಿರುವ ಲೇಖನದೊಂದಿಗೆ ಫೋಟೊವನ್ನು ಹಂಚಿಕೊಳ್ಳುತ್ತಿದ್ದಾರೆ.

ಇದನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಲಾಗಿದ್ದು ಇಲ್ಲಿ ಮತ್ತು ಇಲ್ಲಿ ನೋಡಬಹುದು, ಮತ್ತು  Twitter ನಲ್ಲಿ ಶೇರ್ ಮಾಡಿದ್ದು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್:  ಈ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್  ನಡೆಸಿದಾಗ  ಹಲವಾರು ಸುದ್ದಿ ವರದಿಗಳು ನಮಗೆ ಲಭಿಸಿವೆ. ಆ ವರದಿಗಳು ಆಗಸ್ಟ್ 2016 ರಲ್ಲಿ ಸಂಭವಿಸಿದೆ ಎಂದು ನಿಖರವಾಗಿ ಹೇಳುತ್ತದೆ. ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ,ವಿಮಾನವು ಕೇರಳದ ತಿರುವನಂತಪುರದಿಂದ  ಬಂದದ್ದು ಮತ್ತು 3 ಆಗಸ್ಟ್ 2016 ರಂದು ಸ್ಥಳೀಯ ಸಮಯ 12:45 PM ರ ಸುಮಾರಿಗೆ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ರ್ಯಾಶ್ ಲ್ಯಾಂಡ್ ಆಗಿದೆ ಎಂದು ವರದಿ ಮಾಡಿದೆ.

EK521 ವಿಮಾನವು ಅಪಘಾತಕ್ಕೀಡಾಗಿದೆ ಮತ್ತು ಎಲ್ಲಾ 282 ಪ್ರಯಾಣಿಕರು ಮತ್ತು 18 ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ, ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ ಎಂದು ಎಮಿರೇಟ್ಸ್  ದೃಢಪಡಿಸಿದೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ವಿಮಾನದಲ್ಲಿ ಇದ್ದವರಲ್ಲಿ 226 ಮಂದಿ ಭಾರತೀಯರು. EK521 ನಲ್ಲಿದ್ದ ಎಲ್ಲಾ ಪ್ರಯಾಣಿಕರು ತಲಾ $7,000 ಆರ್ಥಿಕ ಪರಿಹಾರವನ್ನು ಪಡೆಯುತ್ತಾರೆ ಎಂದು ಏರ್‌ಲೈನ್ ನಂತರ ಖಚಿತಪಡಿಸಿತು. ಈ ಎರಡು ವರದಿಗಳಲ್ಲಿ ಅದೇ ಫೋಟೊವನ್ನು ನಾವು ಗಮನಿಸಿದ್ದೇವೆ.

ಫೋಟೊದಲ್ಲಿ ಮೇಲಿನ ಎಡಭಾಗಕ್ಕೆ ಕೆಲವು ಸಣ್ಣ ವಿಮಾನಗಳನ್ನು ಸೇರಿಸಿದ್ದು  ವೈರಲ್ ಫೋಟೋವನ್ನು ಮಾರ್ಕ್ ಮಾಡಲಾಗಿದೆ.. 2016 ರ ಘಟನೆಯ ಮೂಲ ಫೋಟೋಗಳಲ್ಲಿ ಈ ವಿಮಾನಗಳು  ಕಂಡುಬರುವುದಿಲ್ಲ.

ಅಬುಧಾಬಿಯಲ್ಲಿ ನಡೆದ ಘಟನೆಯ ವಿವರ:

ಜನವರಿ 17, ಸೋಮವಾರದಂದು ಅಬುಧಾಬಿಯ ಎರಡು ವಿಮಾನಗಳ ಮೇಲೆ ದಾಳಿ ನಡೆಸಲಾಯಿತು. ಯೆಮೆನ್ ದಾಳಿಯಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತು ಆರು ಮಂದಿ ಗಾಯಗೊಂಡಿದ್ದಾರೆ.

ಯುಎಇಯ ವಿದೇಶಾಂಗ ವ್ಯವಹಾರಗಳ ಸಚಿವ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಈ ದಾಳಿಯನ್ನು ತಮ್ಮ ದೇಶದ “ಕಾನೂನುಬಾಹಿರ ಗುರಿ” ಎಂದು ಖಂಡಿಸಿದರೆ, ಯಮನ್ ವಕ್ತಾರ ಯಾಹ್ಯಾ ಸಾರಿ ಅವರು “ಪ್ರಮುಖ ಮತ್ತು ಸೂಕ್ಷ್ಮ” ತಾಣಗಳ ವಿರುದ್ಧ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಬಳಸಿಕೊಂಡು “ಯಶಸ್ವಿ ಮಿಲಿಟರಿ ಕಾರ್ಯಾಚರಣೆ” ನಡೆಸಿದ್ದೇವೆ ಎಂದು ಹೇಳಿರುವ ವರದಿಗಳು ಎಮಿರೈಟ್ಸ್ ನಲ್ಲಿ ಲಭ್ಯವಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಯುಎಇ ಯ ಅಬುಧಾಬಿಯಲ್ಲಿ ಇತ್ತೀಚೆಗೆ ನಡೆದ ಯಮನ್ ದಾಳಿ ನಿಜ ಆದರೆ  ವೈರಲ್ ಮಾಡಲಾದ ಫೋಟೋ ಮಾತ್ರ 2016 ರಲ್ಲಿ ದುಬೈನಲ್ಲಿ ಎಮಿರೇಟ್ಸ್ ವಿಮಾನ ಅಪಘಾತದ ಘಟನೆಗೆ ಸಂಬಂಧಿಸಿದ ಫೋಟೋ ಯಮನ್ ದಾಳಿ ಘಟನೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿದೆ.


ಇದನ್ನು ಓದಿರಿ: fact check: ಮಹಾಭಾರತದ ಪಳೆಯುಳಿಕೆಗಳು ಸಿಕ್ಕಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights