ಖಾಸಗಿ ಭಾಗಗಳಲ್ಲಿ ಬಿದಿರು ಸೇರಿಸಿ ಅತ್ತೆಯನ್ನು ಕೊಂದ ಅಳಿಯ..!
ಪತ್ನಿ ಬಗ್ಗೆ ಮಾಹಿತಿ ನೀಡದ ಕಾರಣಕ್ಕೆ ಕೋಪಗೊಂಡ ಪತಿಯೊಬ್ಬ ತನ್ನ ಅತ್ತೆಯ ಖಾಸಗಿ ಭಾಗಗಳಲ್ಲಿ ಬಿದಿರು ಸೇರಿಸಿ ಕೊಲೆ ಮಾಡಿದ ಅಮಾನವೀಯ ಘಟನೆ ಮುಂಬೈನಲ್ಲಿ ನಡೆದಿದೆ.
ಈ ಘಟನೆ ಮೃತ ಮಹಿಳೆ ತನ್ನ ಮಗಳೊಂದಿಗೆ ವಾಸಿಸುತ್ತಿದ್ದ ಮುಂಬೈನ ವಿಲೆ ಪಾರ್ಲೆ (ಪೂರ್ವ) ದಲ್ಲಿ ನಡೆದಿದೆ. ಈಗಾಗಲೇ ಮೂರು ವರ್ಷ ಚೈನ್ ಸ್ನ್ಯಾಚಿಂಗ್ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಿದ್ದನು. ಜೈಲಿನಿಂದ ಬಿಡುಗಡೆಯಾದ ನಂತರ ಆರೋಪಿ ತನ್ನ ಪತ್ನಿಯನ್ನು ಭೇಟಿಯಾಗಲು ಹೋದಾಗ ಆಕೆ ಬೇರೊಬ್ಬರನ್ನು ಮದುವೆಯಾಗಿ ಗರ್ಭಿಣಿಯಾಗಿದ್ದನ್ನು ಕಂಡಿದ್ದಾನೆ. ತನ್ನ ಪತ್ನಿಗೆ ಆಕೆಯ ಹೊಸ ಗಂಡನನ್ನು ತೊರೆಯುವಂತೆ ಕೇಳಿಕೊಂಡಿದ್ದಾನೆ. ಇದನ್ನು ಪತ್ನಿ ನಿರಾಕರಿಸಿದ್ದಲು. ಅಷ್ಟಕ್ಕೆ ಸುಮ್ಮನಾಗಿದ್ದ ಆರೋಪಿ ಮರುದಿನ ಮತ್ತೆ ಪತ್ನಿಯನ್ನು ಭೇಟಿ ಮಾಡಲು ಹೋದಾಗ ಪತ್ನಿ ಮನೆಯಲ್ಲಿರಲಿಲ್ಲ.
ಈ ವೇಳೆ ಅತ್ತೆಯನ್ನು ತನ್ನ ಪತ್ನಿ ಬಗ್ಗೆ ಪ್ರಶ್ನೆ ಮಾಡಿದ್ದಾನೆ. ಆದರೆ ಅತ್ತೆ ಹೆಂಡತಿ ಬಗ್ಗೆ ಯಾವುದೇ ಮಾಹಿತಿ ನೀಡದೆ ಇದ್ದಾಗ ವಾಗ್ವಾದ ವಿಕೋಪಕ್ಕೆ ತಿರುಗಿದೆ. ಈ ವೇಳೆ ಆರೋಪಿ ತನ್ನ ಅತ್ತೆಯ ಮೇಲೆ ಹಲ್ಲೆ ನಡೆಸಿ ಹಲವು ಬಾರಿ ಇರಿದಿದ್ದಾನೆ. ಟೈಲ್ಸ್‌ನಿಂದ ಹಲ್ಲೆ ಮಾಡಿ, ಖಾಸಗಿ ಭಾಗಗಳಲ್ಲಿ ಬಿದಿರು ಸೇರಿಸಿ ಕೊಲೆ ಮಾಡಿದ್ದಾನೆ. ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಒಂದು ದಿನದ ನಂತರ ಪೊಲೀಸರು ಪುಣೆಯಲ್ಲಿ ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377 ಅಡಿ ವಿಲೆ ಪಾರ್ಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನ್ಯಾಯಾಲಯ ಆರೋಪಿಯನ್ನು ಸೆಪ್ಟೆಂಬರ್ 14 ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸಿ ಆದೇಶಿಸಿದೆ.