ಸೋಲಿನ ಹತಾಶೆಯಿಂದ ರಾಕೆಟ್ ಹೊಡೆದು ಮುರಿದ ನೊವಾಕ್ ಜೊಕೊವಿಕ್!
ಯುಎಸ್ ಓಪನ್ ಫೈನಲ್ ನಲ್ಲಿ ಸೋಲಿನ ಹತಾಶೆಯಿಂದ ಬ್ಯಾಡ್ಮಿಂಟನ್ ಆಟಗಾರ ನೊವಾಕ್ ಜೊಕೊವಿಕ್ ರಾಕೆಟ್ ಅನ್ನು ಹೊಡೆದು ಮುರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾನುವಾರ ನಡೆದ ಯುಎಸ್ ಓಪನ್ ಫೈನಲ್‌ನಲ್ಲಿ ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ ಸೋತ ನೊವಾಕ್ ಜೊಕೊವಿಕ್ ಹತಾಶರಾಗಿ ರಾಕೆಟ್ ನೆಲಕ್ಕೆ ಹೊಡೆದು ಮುರಿಯುವ ಮೂಲಕ ಆಟದ ನಿಯಮವನ್ನು ಉಲ್ಲಂಘಿಸಿದ್ದಾರೆ.
ಮೆಡ್ವೆದೇವ್ 6-4, 6-4, 6-4 ನೇರ ಸೆಟ್ ಗಳಲ್ಲಿ ಗೆಲುವು ದಾಖಲಿಸಿ, ತಮ್ಮ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಈ ಸೋಲಿನಿಂದ ಹತಾಶರಾದ ಜೊಕೊವಿಕ್ ತನ್ನ ರಾಕೆಟ್ ಅನ್ನು ಹೊಡೆದು ಮುರಿದರು.
https://twitter.com/Freaknoisemusic/status/1437185541129314304?ref_src=twsrc%5Etfw%7Ctwcamp%5Etweetembed%7Ctwterm%5E1437185541129314304%7Ctwgr%5E%7Ctwcon%5Es1_&ref_url=https%3A%2F%2Fsports.ndtv.com%2Ftennis%2Fus-open-final-novak-djokovic-smashes-racquet-in-frustration-during-shocking-loss-to-daniil-medvedev-watch-2538721