ಶ್ರೀರಾಮುಲು ಪಿಎ ರಾಜಣ್ಣ ವಿರುದ್ಧ ಎಫ್ಐಆರ್ : ರಾಮುಲು ಮನವೊಲಿಕೆಗೆ ಸಿಎಂ ಯತ್ನ!

ಸಚಿವರು, ಸಿಎಂ ಪುತ್ರ ಬಿ ವೈ ವಿಜಯೇಂದ್ರ ಹೆಸರು ಹೇಳಿಕೊಂಡು ಜನರನ್ನು ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕ ಪಿ ಎ ರಾಜು ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸೌಧದಲ್ಲಿ ಸಚಿವ ಶ್ರೀರಾಮುಲು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಅಸಮಧಾನಗೊಂಡಿದ್ದಾರೆ.

“ಯಾರು ಯಾರ ಹೆಸರನ್ನೂ ದುರ್ಬಳಕೆ ಮಾಡಿಕೊಳ್ಳಬಾರದು. ರಾಜಣ್ಣ ನನಗೆ ಗೊತ್ತಿರುವ ಹುಡುಗ. ನಾನು ಸಿಎಂ, ವಿಜಯೇಂದ್ರ ಬಳಿ ಮಾತನಾಡುತ್ತೇನೆ. ಏನಾಗಿದೆ ಎಂದು ನಾನು ಚರ್ಚೆ ಮಾಡುತ್ತೇನೆ” ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ಆತ ಯಾರ ಹೆಸರ ಹೇಳಿಕೊಂಡು ದುರ್ಬಳಿಕೆ ಮಾಡಿಕೊಂಡಿದ್ದರೆ ನನ್ನ ಗಮನಕ್ಕೆ ತರಬೇಕಿತ್ತು. ಆದರೆ ತಂದಿಲ್ಲ. ಹೀಗಾಗಿ ನಾನು ಇಂದು ಸಿಎಂ ಹಾಗೂ ವಿಜಯೇಂದ್ರನ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಹೇಳಿದೇ ಕೇಳದೇ ತಮ್ಮ ಪಿಎಯನ್ನು ಅರೆಸ್ಟ್ ಮಾಡಿದ್ದಕ್ಕೆ ಶ್ರೀರಾಮುಲು ಅಸಮಧಾನಗೊಂಡಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು, ಸಿಎಂ ದೂರಾವಾಣಿ ಕರೆ ಮಾಡಿ ಮನವೊಲಿಕೆಗೆ ಯತ್ನಸಿದ್ದಾರೆ ಎನ್ನಲಾಗುತ್ತಿದ್ದು, ನೇರಾನೇರ ಮಾತುಕತೆಗಾಗಿ ಸಿಎಂ ಕರೆ ನೀಡಿದ್ದಾರೆ ಎನ್ನಲಾಗಿದೆ. ಸಿಎಂ ಭೇಟಿಗೆ ಯಲಹಂಕ ಹುಣಸಮರಹಳ್ಳಿ ಗೆಸ್ಟ್ ಹೌಸ್ ನಿಂದ ವಿಧಾನಸೌಧಕ್ಕೆ ತೆರಳಿದ್ದಾರೆ.

ಈ ವೇಳೆ ವಿಧಾನಸೌಧದಲ್ಲಿ ಮಾಧ್ಯಮದ ಮುಂದೆ ಮಾತನಾಡಿದ ಸಚಿವ ಶ್ರೀರಾಮುಲು, “ರಾಜು ನನಗೆ ಗೊತ್ತಿರುವ ಹುಡುಗ. ತನಿಖೆ ನಡೆಯುತ್ತಿದೆ. ತನಿಖೆ ನಡೆಯುವ ಸಮಯದಲ್ಲಿ ನಾನು ಮಾತನಾಡುವುದು ಸರಿಯಲ್ಲ. ರಾಜು ವಿರುದ್ಧ ಎಫ್ ಐಆರ್ ಆಗಿದೆ. ತನಿಖೆ ಮುಗಿಲಿ ತಪ್ಪಿಕಸ್ತರಿಗೆ ಶಿಕ್ಷೆಯಾಗುತ್ತದೆ. ಮುಖ್ಯಮಂತ್ರಿಗಳ ಜೊತೆ ನಾನು ಈ ಬಗ್ಗೆ ಮಾತನಾಡುತ್ತೇನೆ” ಎಂದಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights