Corona fund : ಪಿಎಂ ಪರಿಹಾರ ನಿಧಿಗೆ ಮೊದಲ ದಿನವೇ 100 ಕೋಟಿ ಹರಿದುಬಂತು…..

ದೇಶವನ್ನು ಕಾಡುತ್ತಿರುವ ಕೊರೋನಾ ಹೆಮ್ಮಾರಿಯ ವಿರುದ್ಧದ ಸಮರದಲ್ಲಿ ಕೈಜೊಡಿಸುವಂತೆ ಪ್ರಧಾನಿ ನೀಡಿದ ಕರೆಗೆ ಧನಿಕರು ಉದಾರವಾಗಿ ದಾನ ಮಾಡಿದ್ದಾರೆ.ಕೊರೋನಾದಂತಹ ವಿಪತ್ತಿನ ಸಂದರ್ಭಗಳಲ್ಲಿ ಬಳಕೆಗೆ ಶನಿವಾರವಷ್ಟೇ ಸ್ಥಾಪಿಸಲಾದ ವಿಶೇಷ ಪರಿಹಾರ ನಿಧಿಗೆ ಜನ ಕೈಯೆತ್ತಿ ದಾನ ಮಾಡುತ್ತಿದ್ದಾರೆ.  ಇತನ್ಮದ್ಯೆ ಟಾಟಾ ಸಮೂಹ ಸಂಸ್ಥೆಯು ಕೊರೋನಾ ಹೆಮ್ಮಾರಿಯ ವಿರುದ್ಧದ ಹೋರಾಟಕ್ಕೆ ಬೇಕಾಗುವ ವೈದ್ಯಕೀಯ ಸೌಲಬ್ಯಕ್ಕಾಗಿ 1500 ಕೋಟಿ ರೂಪಾಯಿ ದೆಣಿಗೆ ನೀಡಿದ್ದಾರೆ.

ಉದಾರವಾಗಿ ದೇಣಿಗೆ ನೀಡುವಂತೆ ಪ್ರಧಾನಿ ಮನವಿಯ ಕೆಲವೇ ಗಂಟೆಗಳಲ್ಲಿ ಹಿಂದಿ ಚಿತ್ರ ನಟ ಅಕ್ಷಯ್ ಕುಮಾರ್‍ 25 ಕೋಟಿ ರೂಗಳ ದೇಣಿಗೆ ಘೋಷಿಸಿದ್ದರು.ಬಳಿಕ ದೇಶದ ಅತ್ಯಂತ ಶ್ರೀಮಂತ ಸಂಸ್ಥೆಯಾಗಿರುವ ಬಿಸಿಸಿಐ ಈ ನಿಧಿಗೆ 51 ಕೋಟಿ ರೂಗಳ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿತ್ತು.

ಬಾಲಿವುಡ್ ನಟ ಅಕ್ಷಯ್ ಕುಮಾರ್‍ ತಮ್ಮ ಸಾಮಾಜಿಕ ಕಾಳಜಿಯಲ್ಲಿಯೂ ಸದಾ ಮುಂದು. ಸಾಮಾಜಿಕ ವಿಷಯಗಳ ಬಗ್ಗೆ ತಮ್ಮದೇ ಖಚಿತ ನಿಲುವು ಹೊಂದಿರುವ ಅಕ್ಷಯ್ ಧಾರಾಳಿ ಕೂಡ ಹೌದು. ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೋನಾ ವೈರಾಣುವಿನ ಅಟ್ಟಹಾಸದಿಂದ ಜನರಿಗೆ ನೆಮ್ಮದಿ ನೀಡುವ ಸಲುವಾಗಿ ಪ್ರಧಾಣ ಮಂತ್ರಿ ಆರಂಭಿಸಿರುವ ಪರಿಹಾರ ನಿಧಿಗೆ ಅಕ್ಷಯ್ ಕುಮಾರ್‍ ಧಾರಾಳವಾಗಿ ದೇಣಿಗೆ ನೀಡಿದ್ದಾರೆ.

ಇದೂ ಸೇರಿದಂತೆ ನಿಧಿ ಸ್ಥಾಪನೆಯ 24 ತಾಸಿನೊಳಗೆ ದೇಶದ ವಿವಿಧ ಮೂಲಗಳಿಂದ ಧನಸಹಾಯ ಹರಿದುಬರುತ್ತಿದ್ದು, ಈಗಾಗಲೇ ಶತಕೋಟಿ ಸಮೀಪಿಸಿದೆ ಎನ್ನಲಾಗಿದೆ.ಈ ನಿಧಿಗೆ ಇಂತಿಷ್ಟೇ ದೇಣಿಗೆ ನೀಡಬೇಕು ಎಂಬ ಮಿತಿ ಇಲ್ಲ. ಜನ ತಮ್ಮ ಇಚ್ಚಾನುಸಾರ ಮತ್ತು ಶಕ್ತ್ಯಾನುಸಾರ ದೇಣಿಗೆ ನೀಡಬಹುದಾಗಿದೆ.

ಕ್ರಿಕೆಟಿಗ ಸುರೇಶ್ ರೈನಾ 51 ಲಕ್ಷ ರೂ ನೀಡಿದ್ದರೆ ಮತ್ತೊಬ್ಬರು 501 ರೂ ನೀಡಿದ್ದಾರೆ. ಇಬ್ಬರಿಗೂ ಪ್ರಧಾನಿ ಮೋದಿ ಸ್ಪಂದಿಸಿದ್ದಾರೆ. 51 ಲಕ್ಷ ನೀಡಿದ ರೈನಾ ಕ್ರಮವನ್ನು ಅದ್ಭುತ ಅರ್ಧಶತಕ ಎಂದು ಬಣ್ಣಿಸಿರುವ ಮೋದಿ 501 ರೂ ದೇಣಿಗೆ ನೀಡಿದ ವ್ಯಕ್ತಿಯ ಕಾಣಿಕೆಯನ್ನು ಸಹ ಕೊಂಡಾಡಿದ್ದಾರೆ.

ಇದು ಕೊರೋನಾಗಷ್ಟೇ ಸೀಮಿತವಾಗಿರದೇ ಇಂತಾಹ ಯಾವುದೇ ತುರ್ತು ರಾಷ್ಟ್ರೀಯ ವಿಪತ್ತಿನ ಸಂದರ್ಭಗಳಲ್ಲಿ ಸಹ ಬಳಕೆಗೆ ಯೋಗ್ಯವಾಗಿರಲಿದೆ. ಈ ಪರಿಹಾರ ನಿಧೀಗೆ ಯಾರು ಬೇಕಾದರೂ ದೇಣಿಗೆ ನೀಡಬಹುದಾಗಿದೆ. ದೇಣಿಗೆ ಸಲ್ಲಿಸುವುದಕ್ಕೆ ಇಚ್ಛಿಸುವವರು ಈ ಕೆಳಗಿನ ಖಾತೆಗೆ ದಾನ ಮಾಡಬಹುದಾಗಿದೆ.
ಪ್ರಧಾನಿ ಕಾರ್‍ಯಾಲಯ ಈ ಬಗ್ಗೆ ಪ್ರಕಟಣೆ ಹೊರಡಿಸಿದ ಕೆಲವೇ ಹೊತ್ತಿನಲ್ಲಿ ನಟ ಅಕ್ಷಯ್ ಕುಮಾರ್‍ ಈ ನಿಧಿಗೆ ತಮ್ಮ ಮೊದಲ ಕಾಣಿಕೆ ನೀಡಿದರು.

ಬಳಿಕ ದೇಶದ ಐಎಎಸ್ ಅಧಿಕಾರಿಗಳ ಸಂಘವು ತನ್ನ ಖಾತೆಯಿಂದ ಈ ಪರಿಹಾರ ನಿಧಿಗೆ 31 ಲಕ್ಷ ರೂಗಳ ದೇಣಿಗೆ ನೀಡುತ್ತಿರುವುದಾಗಿ ಘೋಷಿಸಿತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights