ಕೊರೊನಾ ಲಸಿಕೆ ಅಭಿಯಾನ: ಲಸಿಕೆ ವಿತರಣೆಯಲ್ಲಿ 100% ಸಾಧನೆ ಮಾಡಿವೆ ಈ ರಾಜ್ಯಗಳು!

ದೇಶದಲ್ಲಿ ಕೊರೊನಾ ವಿರುದ್ದ ಲಸಿಕೆ ಅಭಿಯಾನ ಮತ್ತಷ್ಟು ವೇಗ ಪಡೆದುಕೊಂಡಿದೆ. ಇದೂವರೆಗೂ ದೇಶದಲ್ಲಿ  74 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಿಸಿದೆ.

ಈ ಪೈಕಿ, 56.5 ಕೋಟಿ ಜನರು ಒಂದು ಡೋಸ್ ವ್ಯಾಕ್ಸಿನ್‌ ಪಡೆದುಕೊಂಡಿದ್ದಾರೆ. 17.7 ಕೋಟಿ ಜನರು ಎರಡೂ ಡೋಸ್‌ ಲಸಿಕೆಯನ್ನು ಪಡೆದಿದ್ದಾರೆ ಎಂದು ಹೇಳಿದೆ.

ಅಲ್ಲದೆ, ಮೂರು ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕನಿಷ್ಠ ಒಂದು ಡೋಸ್ ಲಸಿಕೆ ವಿತರಿಸಲಾಗಿದ್ದು, 100% ಸಾಧನೆ ಮಾಡಿವೆ ಎಂದು ಪ್ರಕಟಣೆ ಹಳಿದೆ.

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಒಂದು ಡೋಸ್‌ ವ್ಯಾಕ್ಸಿನ್‌ ನೀಡುವಲ್ಲಿ ಮೊದಲಿಗೆ ಯಶಸ್ವಿಯಾಗಿರುವ ರಾಜ್ಯ ಹಿಮಾಚಲ ಪ್ರದೇಶ ಎಂದು ಹೇಳಿದ್ದು, ರಾಜ್ಯದ 55.7 ಲಕ್ಷ ಮಂದಿಗೆ ಕನಿಷ್ಠ ಒಂದು ಡೋಸ್ ನೀಡಲಾಗಿದೆ. ನವೆಂಬರ್ ಅಂತ್ಯದ ವೇಳೆಗೆ ಎರಡೂ ಡೋಸ್‌ಗಳನ್ನು ಪೂರ್ಣಗೊಳಿಸಲಾಗುವುದು ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ತಿಳಿಸಿದ್ದಾರೆ.

ಗೋವಾದಲ್ಲಿ 11.8 ಲಕ್ಷ ಫಲಾನುಭವಿಗಳಿಗೆ ಕನಿಷ್ಠ ಒಂದು ಡೋಸ್ ನೀಡಲಾಗಿದೆ. ಆದರೆ ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ಹೇಳಿಕೆಯನ್ನು ಅಲ್ಲಗಳೆದಿವೆ.

ದಾದ್ರಾ ಮತ್ತು ನಗರ್ ಹವೇಲಿಯಲ್ಲಿ 6.26 ಲಕ್ಷ ಮಂದಿಗೆ ಮೊದಲ ಡೋಸ್ ವಿತರಿಸಲಾಗಿದೆ. ಸಿಕ್ಕಿಂನಲ್ಲಿ 5.10 ಲಕ್ಷ ಡೋಸ್ ನೀಡಲಾಗಿದೆ. ಇದರೊಂದಿಗೆ 100% ವ್ಯಾಕ್ಸಿನ್‌ ವಿತರಣೆಯಾಗಿದೆ.

ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್‌ನಲ್ಲಿ 1.97 ಲಕ್ಷ  ಹಾಗೂ ಲಕ್ಷದ್ವೀಪದಲ್ಲಿ 53,499 ಡೋಸ್‌ ಲಸಿಕೆ ವಿತರಣೆ ಮಾಡಲಾಗಿದೆ. ಈ ಎರಡೂ ಕೇಂದ್ರಾಡಳಿತ ಪ್ರದೇಶಗಳೂ ಕೂಡಾ ಶೇಕಡ 100% ಫಲಾನುಭವಿಗಳಿಗೆ ಕನಿಷ್ಠ ಒಂದು ಡೋಸ್ ನೀಡಿವೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಪ್ರತಿ 46 ನಿಮಿಷಕ್ಕೆ ಒಂದು ಆತ್ಮಹತ್ಯೆ; 5 ವರ್ಷದಲ್ಲಿ 56,000 ಜನ ಬಲಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights