ದೇಶದಲ್ಲಿ 1.96 ಲಕ್ಷ ಹೊಸ ಕೊರೊನಾ ಕೇಸ್ : 3,511 ಜನ ಸೋಂಕಿಗೆ ಬಲಿ…!
ದೇಶದಲ್ಲಿ 1.96 ಲಕ್ಷ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಕಳೆದ 24 ಗಂಟೆಗಳಲ್ಲಿ 3,511 ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಮಂಗಳವಾರ ಬೆಳಿಗ್ಗೆ 1,96,427 ಹೊಸ ಕೊರೋನವೈರಸ್ ಪ್ರಕರಣಗಳು ದಾಖಲಾಗಿದ್ದು, ಕಳೆದ 24 ಗಂಟೆಗಳಲ್ಲಿ 3,511 ಸೋಂಕಿತರು ಸಾವನ್ನಪ್ಪಿದ್ದಾರೆ.
ಗರಿಷ್ಠ ಪ್ರಕರಣಗಳು ದಾಖಲಾದ ಐದು ರಾಜ್ಯಗಳಲ್ಲಿ 34,867 ಪ್ರಕರಣಗಳು ತಮಿಳುನಾಡು, 25,311 ಪ್ರಕರಣಗಳು ಕರ್ನಾಟಕ, 22,122 ಪ್ರಕರಣಗಳು ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ 17,883 ಪ್ರಕರಣಗಳು ಮತ್ತು ಕೇರಳದಲ್ಲಿ 17,821 ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕೊರೋನವೈರಸ್‌ನಿಂದ ಹೆಚ್ಚು ಹಾನಿಗೊಳಗಾದ ಎರಡನೇ ರಾಜ್ಯ ಕರ್ನಾಟಕದಲ್ಲಿ 25,311 ಹೊಸ ಪ್ರಕರಣಗಳು ಕಂಡುಬಂದಿವೆ. ರಾಜಧಾನಿ ಬೆಂಗಳೂರಿನಲ್ಲಿ 5,701 ಪ್ರಕರಣಗಳು ದಾಖಲಾಗಿವೆ.
ತಮಿಳುನಾಡು ದೈನಂದಿನ ಕೋವಿಡ್ ಪ್ರಕರಣಗಳಲ್ಲಿ ಸ್ವಲ್ಪ ಕುಸಿತ ಕಂಡಿದ್ದು 34,867 ಹೊಸ ಪ್ರಕರಣಗಳು ಮತ್ತು 404 ಸಾವುಗಳು ಸಂಭವಿಸಿವೆ. ರಾಜಧಾನಿ ಚೆನ್ನೈನಿಂದ 4,985 ಹೊಸ ಪ್ರಕರಣಗಳು ದಾಖಲಾಗಿವೆ.
ಪರೀಕ್ಷೆಯ ಕುಸಿತದಿಂದ ಕೇರಳದಲ್ಲಿ ಸೋಮವಾರ 17,821 ಹೊಸ ಕರೋನವೈರಸ್ ಪ್ರಕರಣಗಳು ದಾಖಲಾಗಿವೆ. 196 ಕೋವಿಡ್-ಸಂಬಂಧಿತ ಸಾವುಗಳು ಇಂದು ವರದಿಯಾಗಿವೆ.
ದೆಹಲಿಯಲ್ಲಿ 1,550 ಹೊಸಾ ಕೊರೊನಾವೈರಸ್ ಪ್ರಕರಣಗಳು ದಾಖಲಾಗಿದ್ದು, 207 ಸಾವುಗಳು ದಾಖಲಾಗಿವೆ.
ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ ಕಳೆದ 24 ಗಂಟೆಗಳಲ್ಲಿ 3,894 ಹೊಸ ಕೋವಿಡ್-19 ಪ್ರಕರಣಗಳನ್ನು ದಾಖಲಿಸಿದೆ. 153 ಕೋವಿಡ್ ರೋಗಿಗಳು ಸಾವನ್ನಪ್ಪಿದರು. ಭಾರತದ ಅತಿ ಹೆಚ್ಚು ಹಾನಿಗೊಳಗಾದ ರಾಜ್ಯಗಳ ಪಟ್ಟಿಯಲ್ಲಿ ಇದು ಐದನೇ ಸ್ಥಾನದಲ್ಲಿದೆ.