‘Eye of fire’ : ಅನಿಲ ಸೋರಿಕೆ – ಮೆಕ್ಸಿಕೊ ಸಮುದ್ರದ ನೀರಿನಲ್ಲಿ ಭಾರಿ ಬೆಂಕಿ..!

ನೀರೊಳಗಿನ ಪೈಪ್‌ಲೈನ್‌ನಿಂದ ಅನಿಲ ಸೋರಿಕೆಯಾಗಿ ಗಲ್ಫ್ ಆಫ್ ಮೆಕ್ಸಿಕೊದ ಸಮುದ್ರದ ಮೇಲ್ಮೈ ಭಾಗದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ನೀರಿನಲ್ಲಿ ಬೆಂಕಿ ಕಾಣಿಸಿಕೊಂಡ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಬೆಂಕಿಯ ಜ್ವಾಲೆ ಕರಗಿದ ಲಾವಾವನ್ನು ಹೋಲುತ್ತಿದ್ದು, ಇದನ್ನು “ಬೆಂಕಿಯ ಕಣ್ಣು” ಎಂದು ಕರೆಯಾಗಿದೆ.

ಸ್ಥಳೀಯ ಸಮಯ ಬೆಳಿಗ್ಗೆ 5: 15 ಕ್ಕೆ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿದ್ದು, ಬೆಳಿಗ್ಗೆ 10: 30 ರ ಹೊತ್ತಿಗೆ ಅದನ್ನ ಸಂಪೂರ್ಣವಾಗಿ ನಂದಿಸಲ್ಪಟ್ಟಿದೆ ಎಂದು ವರದಿಯಾಗಿದೆ. ಜ್ವಾಲೆಗಳನ್ನು ನಿಯಂತ್ರಿಸಲು ಸಾರಜನಕವನ್ನು ಬಳಸಲಾಗಿದೆ. ಮೆಕ್ಸಿಕೊದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಪೆಟ್ರೋಲಿಯೊಸ್ ಮೆಕ್ಸಿಕಾನೋಸ್ ಅಥವಾ ಪೆಮೆಕ್ಸ್‌ನ ಸಾಗರದೊಳಗಿನ ಪೈಪ್‌ಲೈನ್‌ನಲ್ಲಿ ಉಂಟಾದ ಬೆಂಕಿ ಸಂಪೂರ್ಣವಾಗಿ ನಂದಿಸಲು ಐದು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಪೈಪ್‌ಲೈನ್ ಪೆಮೆಕ್ಸ್‌ನ ಪ್ರಮುಖ ಕು ಮಾಲೂಬ್ ಜಾಪ್ ತೈಲ ಅಭಿವೃದ್ಧಿಯ ಪ್ಲಾಟ್‌ಫಾರ್ಮ್‌ಗೆ ಸಂಪರ್ಕ ಕಲ್ಪಿಸುತ್ತದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ವೃತ್ತಾಕಾರದ ಆಕಾರವನ್ನು ಹೊಂದಿರುವ ಬೆಂಕಿ ನಂದಿಸಲು ನೀರನ್ನು ಸಿಂಪಡಿಸುವ ದೋಣಿಗಳ ದೃಶ್ಯಗಳನ್ನು ಹಂಚಿಕೊಂಡ ಮೆಕ್ಸಿಕೊ ಮತ್ತು ಇತರೆಡೆಗಳ ವಿವಿಧ ಪತ್ರಕರ್ತರು ಇದನ್ನು ‘ಬೆಂಕಿಯ ಕಣ್ಣು’ ಎಂದು ಕರೆದಿದ್ದಾರೆ. ಇದರಿಂದಾಗಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights