Fact check: ಬಡವರಿಗೆ ಮನೆ ನಿರ್ಮಿಸಿಕೊಡಲು ವಿಫಲರಾದ ಮಂತ್ರಿಯೊಬ್ಬರು ಬೆಂಕಿ ಹಚ್ಚಿಕೊಂಡಿದ್ದು ನಿಜವೆ?

ಮಂಗೋಲಿಯನ್ ಮಂತ್ರಿಯೊಬ್ಬರು ಪತ್ರಿಕಾಗೋಷ್ಠಿಯಲ್ಲಿ ಬೆಂಕಿ ಹಚ್ಚಿಕೊಂಡ ದೃಶ್ಯಗಳು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಮಂಗೊಲಿಯಾದ ಮಂತ್ರಿ 1 ಲಕ್ಷ ಮನೆಗಳನ್ನ ಕಟ್ಟಿಸಿಕೊಡುವುದಾಗಿ ತಪ್ಪಿದಲ್ಲಿ ಬೆಂಕಿ ಹಚ್ಚಿಕೊಂಡು ಸಾಯುವುದಾಗಿ ಹೇಳಿದ್ದರು ಆದರೆ 70 ಸಾವಿರ ಮನೆ ಮಾತ್ರ ಕಟ್ಟಿಸಿದ್ರು. ಹಾಗಾಗಿ ಹೇಳಿದಂತೆ ಪತ್ರಿಕಾಗೋಷ್ಠಿ ಕರೆದು ಬೆಂಕಿ ಹಚ್ಚಿಕೊಂಡಿದ್ದು. ಇದು ನಮ್ಮ ದೇಶದಲ್ಲಿ ಊಹಿಸಿ ಕೊಳ್ಳಲು ಸಾಧ್ಯವಿಲ್ಲ ಎಂದು ಈ ಪೋಸ್ಟ್ ನಲ್ಲಿ ಬರೆದು ಹಂಚಿಕೊಳ್ಳಲಾಗಿದೆ.

ಹಾಗಿದ್ದರೆ ಮಂಗೋಲಿಯಾದ ಮಂತ್ರಿ ಈ ರೀತಿ ಬೆಂಕಿ ಹಚ್ಚಿಕೊಂಡಿದ್ದು ನಿಜವೆ?  ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೀಡಿಯೋದಲ್ಲಿನ ಸ್ಕ್ರೀನ್‌ಶಾಟ್‌ ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಲಕ ಹುಡುಕಿದಾಗ 16 ನವೆಂಬರ್ 2015 ರಂದು ‘ದಿ ಡೈಲಿ ಮೇಲ್’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊ ಕಂಡುಬಂದಿದೆ. ಈ ಲೇಖನವು ಮಂಗೋಲಿಯನ್ ಕಲ್ಲಿದ್ದಲು ಗಣಿಗಾರಿಕೆ ಒಕ್ಕೂಟದ ನಾಯಕನು ತನ್ನನ್ನು ತಾನೇ ಧಹಿಸಿಕೊಳ್ಳುವ ದೃಶ್ಯಗಳು ಎಂದು ವರದಿ ಮಾಡಿದೆ. ಮಂಗೋಲಿಯಾದ ಉಲಾನ್‌ಬಾಟರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೆಂಕಿ ಹಂಚಿಕೊಂಡಿದ್ದಾರೆ.

ಘಟನೆ ಕುರಿತು ಹೆಚ್ಚಿನ ವಿವರಗಳಿಗಾಗಿ ಕೀ ವರ್ಡ್ ಬಳಸಿಕೊಂಡು ಸರ್ಚ್ ಮಾಡಿದಾಗ, ಪತ್ರಿಕಾಗೋಷ್ಠಿಯಲ್ಲಿ ಬೆಂಕಿ ಹಚ್ಚಿಕೊಂಡ ವ್ಯಕ್ತಿ ಮಂಗೋಲಿಯಾದ “ಮಂಗೋಲಿಯನ್ ಸಾಲಿಡಾರಿಟಿ ಲೇಬರ್ ಯೂನಿಯನ್ ಮಂಡಳಿಯ” ಅಧ್ಯಕ್ಷ ಎಸ್. ಎರ್ಡೆನ್ ಎಂದು ತಿಳಿದುಬಂದಿದೆ. ಮಂಗೋಲಿಯಾದ ಕಲ್ಲಿದ್ದಲು ಗಣಿಗಾರಿಕೆಯನ್ನು ಚೀನಾ ಸ್ವಾಧೀನಪಡಿಸಿಕೊಂಡಿರುವುದನ್ನು ಪ್ರತಿಭಟಿಸಿ ಯೂನಿಯನ್ ನಾಯಕ ಸ್ವಯಂ ಬೆಂಕಿ ಹಚ್ಚಿಕೊಂಡಿದ್ದರು. ಅವರು ಬೆಂಕಿ ಹಚ್ಚಿಕೊಳ್ಳುವ ಮೊದಲು, ಎಸ್. ಎರ್ಡೆನ್ ವರದಿಯ ಪ್ರಕಾರ, “ಸರ್ಕಾರವು ಇನ್ನು ಮುಂದೆ ನಮ್ಮ ಕಂಪನಿಯನ್ನು ಬೆಂಬಲಿಸುವುದಿಲ್ಲ, ಕಾರ್ಮಿಕರ ಕುಟುಂಬಗಳು ಹಸಿವಿನಿಂದ ಬಳಲುತ್ತಿದ್ದಾರೆ. ಇದಕ್ಕಾಗಿಯೇ ನಾನು ಮಂಗೋಲಿಯಾದ ಜನರು ಮತ್ತು ನಮ್ಮ ಮಕ್ಕಳಿಗಾಗಿ ನನ್ನನ್ನು ಸುಡುತ್ತೇನೆ. ಎರ್ಡೆನ್ ಗಂಭೀರವಾದ ಸುಟ್ಟಗಾಯಗಳಿಂದ ಬಳಲುತ್ತಿದ್ದರು ಮತ್ತು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಘಟನೆಯ ವಿವರಗಳನ್ನು ವರದಿ ಮಾಡುತ್ತಾ, ಹಲವು ಇತರ ಸುದ್ದಿ ವೆಬ್‌ಸೈಟ್‌ಗಳು 2015 ರಲ್ಲಿ ಲೇಖನಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಇತ್ತೀಚೆಗೆ, ದೇಶದಲ್ಲಿ ಬಡವರಿಗೆ ಕಡಿಮೆ ವೆಚ್ಚದ ಮನೆಗಳನ್ನು ನಿರ್ಮಿಸುವ ಭರವಸೆಯನ್ನು ಉಳಿಸಿಕೊಳ್ಳಲು ವಿಫಲವಾದ ಮಂಗೋಲಿಯನ್ ಮಂತ್ರಿಯೊಬ್ಬರು ಸ್ವತಃ ಬೆಂಕಿ ಹಚ್ಚಿಕೊಂಡ ಸುದ್ದಿ ಎಂಬ ಯಾವ  ವರದಿಗಳಿಲ್ಲ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಮಂಗೋಲಿಯನ್ ಕಲ್ಲಿದ್ದಲು ಗಣಿ ಒಕ್ಕೂಟದ ಕಾರ್ಮಿಕ ಸಂಘದ ನಾಯಕರೊಬ್ಬರು ಸ್ವತಃ ಬೆಂಕಿ ಹಚ್ಚಿಕೊಳ್ಳುವ 2015 ರ ವೀಡಿಯೊವನ್ನು, ಮಂಗೋಲಿಯನ್ ಮಂತ್ರಿಯೊಬ್ಬರು ಪತ್ರಿಕಾಗೋಷ್ಠಿಯಲ್ಲಿ ಬೆಂಕಿ ಹಚ್ಚಿಕೊಂಡ ದೃಶ್ಯಗಳು ಎಂಬ ಸುಳ್ಳು ನಿರೂಪಣೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ.


ಇದನ್ನು ಓದಿರಿ: Fact check: ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷ ಭಯೋತ್ಪಾದಕನೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights