Fact check: ರಷ್ಯಾ ಅಧ್ಯಕ್ಷ ‘ವ್ಲಾಡಿಮಿರ್ ಪುಟಿನ್’ ಉಕ್ರೇನ್ ಯುದ್ದದ ಕುರಿತು ಮಾತುಕತೆಗೆ ಮೋದಿಯವರನ್ನು ಸಂಪರ್ಕಿಸಿದ್ದು ನಿಜವೆ?

ಉಕ್ರೇನ್‌-ರಷ್ಯಾ ಬಿಕ್ಕಟ್ಟಿನ ಹಿನ್ನಲೆಯಲ್ಲಿ, ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್‌‌ ಜೊತೆಗೆ ನಡೆದುಕೊಂಡು ಹೋಗುತ್ತಿರುವ ವಿಡಿಯೊವೊಂದರ ಜೊತೆಗೆ, “ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ರಷ್ಯಾ ಅಧ್ಯಕ್ಷ ಪುಟಿನ್, ಭಾರತದ ಪ್ರಧಾನಿ ಜೊತೆಗೆ ಮಾತುಕತೆ ನಡೆಸಲು ಮನವಿ ಮಾಡಿದ್ದರು” ಎಂಬ ಸಂದೇಶವೊಂದು ವೈರಲ್‌ ಆಗುತ್ತಿದೆ.

“ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೊದಲು ಮಾತುಕತೆ ನೆಡೆಸಲು ಮನವಿ ಮಾಡಿದ್ದು ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೊತೆಗೆ ಹೊರತು ಬೇರೆ ದೇಶದ ಜೊತೆಗಲ್ಲ.. ಮೋದಿ ಗತ್ತು ವಿಶ್ವಕ್ಕೆ ಗೊತ್ತು” ಎಂದು ವಿಡಿಯೊ ಜೊತೆಗಿನ ಸಂದೇಶ ಪ್ರತಿಪಾದಿಸುತ್ತದೆ.

ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿರುವ ಈ ವಿಡಿಯೊ ಮತ್ತು ಸಂದೇಶವನ್ನು ಹಲವಾರು ಬಳಕೆದಾರರು, ಅದರಲ್ಲೂ ಮುಖ್ಯವಾಗಿ ಬಿಜೆಪಿ ಬೆಂಬಲಿಗರು ಹಂಚಿಕೊಳ್ಳುತ್ತಿದ್ದಾರೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಇದನ್ನೂ ಓದಿFact Check: ಉಕ್ರೇನ್‌ ಜನರಿಗೆ ‘ಸಿಖ್ಖ್’ ಸಮುದಾಯ ಉಚಿತ ಆಹಾರ ನೀಡುತ್ತಿದೆ ಎಂಬ ಫೋಟೊ ವೈರಲ್ ?

ಫ್ಯಾಕ್ಟ್‌ಚೆಕ್

ಉಕ್ರೇನ್‌-ರಷ್ಯಾ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಹಲವಾರು ಸಂಬಂಧಪಡದ, ಹಳೆಯ ಚಿತ್ರಗಳು ಹಾಗೂ ವಿಡಿಯೊಗಳು ಹರಿದಾಡುತ್ತಿದೆ. ವಿಡಿಯೊ ಮತ್ತು ವೈರಲ್ ಸಂದೇಶದ ಬಗ್ಗೆ ನಾನುಗೌರಿ.ಕಾಂ ಬೇರೆ ಬೇರೆಯಾಗಿ ಪರಿಶೀಲನೆ ನಡೆಸಿದೆ.

  • ವೈರಲ್ ವಿಡಿಯೊ 2021 ರ ಡಿಸೆಂಬರ್‌ 6ರದ್ದಾಗಿದೆ

ವೈರಲ್ ಸಂದೇಶ ಜೊತೆಗೆ ಹರಿದಾಡುತ್ತಿರುವ ವಿಡಿಯೊವನ್ನು ಕೆಲವು ಕೀವರ್ಡ್‌ಗಳ ಮೂಲಕ ಹುಡುಕಾಡಿದಾಗ ಈ ವಿಡಿಯೊ 2021 ರ ಡಿಸೆಂಬರ್‌ 6 ರಂದು ಮಾಡಿರುವ ವಿಡಿಯೊ ಎಂದು ತಿಳಿದು ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ 21 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯನ್ನು 2021 ರ ಡಿಸೆಂಬರ್‌ 6ರಂದು ನಡೆಸಿದ್ದರು. ಉಭಯ ನಾಯಕರು ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತು ಕಾರ್ಯತಂತ್ರದ ಪಾಲುದಾರಿಕೆಯ ನಿರೀಕ್ಷೆಗಳನ್ನು ಚರ್ಚಿಸಿದ್ದರು. ಈ ಭೇಟಿಯ ಸಂದಂರ್ಭದಲ್ಲಿ ಮಾಡಲಾಗಿರುವ ವೀಡಿಯೊ ಇದಾಗಿದೆ.

 

  • ವೈರಲ್‌ ಸಂದೇಶ ಸುಳ್ಳಾಗಿದ್ದು, ಇದಕ್ಕೆ ಯಾವುದೇ ಆಧಾರವಿಲ್ಲ.

ವಿಡಿಯೊ ಜೊತೆಗೆ ಹರಿಡಾಡುತ್ತಿರುವ ಸಂದೇಶವು, “ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ರಷ್ಯಾ ಅಧ್ಯಕ್ಷ ವಾಲ್ಡಮೀರ್ ಪುಟಿನ್ ಅವರು ಪ್ರಧಾನಿ ಮೋದಿ ಜೊತೆಗೆ ಮಾತುಕತೆ ನೆಡೆಸಲು ಮನವಿ ಮಾಡಿದ್ದರು” ಎಂದು ಪ್ರತಿಪಾದಿಸುತ್ತದೆ.

ವೈರಲ್ ಸಂದೇಶದಲ್ಲಿ ಹೇಳಿರುವಂತೆ, ಯುದ್ಧ ಪ್ರಾರಂಭವಾದ ನಂತರ ರಷ್ಯಾ ಅಧ್ಯಕ್ಷ ಪ್ರಧಾಮಿ ಮೋದಿ ಜೊತಗೆ ಮಾತುಕತೆಗೆ ವಿನಂತಿಸಿಯೆ ಇಲ್ಲ. ಈ ಬಗ್ಗೆ ಯಾವುದೇ ಸುದ್ದಿಗಳು ಇದುವರೆಗೂ ಲಭ್ಯವಿಲ್ಲ. ಒಂದು ವೇಳೆ ಪುಟಿನ್‌ ಈ ರೀತಿಯಾಗಿ ವಿನಂತಿಸಿದ್ದರೆ ವಿಶ್ವದ ಹಲವು ಮಾಧ್ಯಮಗಳು ವರದಿ ಮಾಡಿರುತ್ತಿದ್ದವು. ಆದರೆ Ensuddi.com ಗೆ ಈ ರೀತಿಯ ಯಾವುದೆ ಸುದ್ದಿ ಲಭ್ಯವಾಗಿಲ್ಲ.

ಆದರೆ ರಷ್ಯಾ-ಉಕ್ರೇನ್‌ ಯದ್ಧ ಪ್ರಾರಂಭವಾದ ನಂತರ ಪ್ರಧಾನಿ ಮೋದಿ ಪುಟಿನ್‌ಗೆ ಕರೆ ಮಾಡಿ ಶಾಂತಿ ಕಾಪಾಡುವಂತೆ ಕರೆ ನೀಡಿದ್ದರು. ಜೊತೆಗೆ ಬಿಕ್ಕಟ್ಟಿನ ಬಗ್ಗೆ ವಿಶ್ವಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಎರಡು ಸಭೆಯಲ್ಲೂ ಭಾರತ ತಟಸ್ಥ ನೀತಿಯನ್ನು ಅನುಸರಿಸಿದೆ.

ಪುಟಿನ್‌ ಪ್ರಧಾನಿ ಮೋದಿಗೆ ಕರೆ ಮಾಡಿರುವ ಯಾವುದೆ ಸುದ್ದಿ ಲಭ್ಯವಾಗಿಲ್ಲ, ಬದಲಾಗಿ ಮೋದಿಯೆ ಪುಟಿನ್‌ಗೆ ಕರೆ ಮಾಡಿದ್ದರು.

ಒಟ್ಟಿನಲ್ಲಿ ವೈರಲ್‌ ವಿಡಿಯೊ ಮತ್ತು ಸಂದೇಶ ಹೇಳುವಂತೆ, ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ರಷ್ಯಾ ಅಧ್ಯಕ್ಷ ವಾಲ್ಡಮೀರ್ ಪುಟಿನ್ ಅವರು ಪ್ರಧಾನಿ ಮೋದಿ ಜೊತೆಗೆ ಮಾತುಕತೆ ನೆಡೆಸಲು ಮನವಿ ಮಾಡಿದ್ದರು ಎಂಬುವುದು ಸುಳ್ಳು ಪ್ರತಿಪಾದನೆಯಾಗಿದೆ. ಅದರ ಜೊತೆಗೆ ವೈರಲ್‌ ಆಗಿರುವ ವಿಡಿಯೊ 2021 ರ ಡಿಸೆಂಬರ್‌ 6ರಂದು ನಡೆದ 21 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯದ್ದಾಗಿದೆ.

ರಷ್ಯಾ ಮತ್ತು ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಪ್ರಧಾನಿ ಮೋದಿ ಶಾಂತಿ ಕಾಪಾಡುವಂತೆ ಕರೆ ನೀಡಿದ್ದರು. ಆದರೂ ರಷ್ಯಾ ಮತ್ತು ಉಕ್ರೇನ್ ಯುದ್ಧ ಮುಂದುವರೆದಿದೆ. ಯುದ್ದದಿಂದಾಗಿ 14 ಮಕ್ಕಳು ಸೇರಿದಂತೆ 352 ಉಕ್ರೇನಿಯನ್ ನಾಗರಿಕರು ಮೃತಪಟ್ಟಿದ್ದು, 1,684 ಮಂದಿಗೆ ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಅಧೀಕೃತವಾಗಿ ಹೇಳಿದೆ.

ರಷ್ಯಾ ಮತ್ತು ಉಕ್ರೇನ್ ಬಿಕ್ಕಟ್ಟು ಪ್ರಾರಂಭವಾದ ನಂತರ ಸಂಬಂಧಪಡದ ಹಲವು ಹಳೆಯ ವಿಡಿಯೊ ಹಾಗೂ ಚಿತ್ರಗಳು ಹರಿದಾಡುತ್ತಿದೆ. ಇವುಗಳನ್ನು ನಾನುಗೌರಿ.ಕಾಂ ಫ್ಯಾಕ್ಟ್‌ಚೆಕ್‌ ಮಾಡಿದೆ. ಇದನ್ನು ನೀವು ಇಲ್ಲಿ   ನೋಡಬಹುದು. ಅಲ್ಲದೆ ಇತರ ಫ್ಯಾಕ್ಟ್‌ಚೆಕ್‌ ಲೇಖನಗಳಿಗೆ ನಮ್ಮ ಏನ್‌ಸುದ್ದಿ.ಕಾಂ ವೆಬ್‌ಸೈಟ್‌ಅನ್ನು ನೀವು ನೋಡಬಹುದು.

ಬಾಪು ಅಮ್ಮೆಂಬಳ

ನಾನುಗೌರಿ.ಕಾಂ

ಇದನ್ನೂ ಓದಿ: Fact check: ಉಕ್ರೇನ್ ವಿಷಯದಲ್ಲಿ ಭಾರತ ಹಸ್ತಕ್ಷೇಪ ಮಾಡದಂತೆ ರಷ್ಯಾ ಅಧ್ಯಕ್ಷ ಪುಟಿನ್ ಎಚ್ಚರಿಕೆ ನೀಡಿದರೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights