Fact check: ಪುಟಿನ್ ಹಿಟ್ಲರ್‌ನ ಪ್ರತಿಬಿಂಬ ಎಂಬಂತೆ ಟೈಮ್ ನಿಯತಕಾಲಿಕೆ ತನ್ನ ಮುಖಪುಟ ಚಿತ್ರ ಹಾಕಿದ್ದು ನಿಜವೆ?

ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ನಡುವೆ, ಟೈಮ್ ನಿಯತಕಾಲಿಕವು ತನ್ನ ಇತ್ತೀಚಿನ ಸಂಚಿಕೆಯಲ್ಲಿ ವ್ಲಾಡಿಮಿರ್ ಪುಟಿನ್ ಅವರನ್ನು ‘ಹಿಟ್ಲರ್ ಮೀಸೆ’ಯೊಂದಿಗೆ ಚಿತ್ರಿಸಿದೆ ಎಂದು ಹೇಳುವ  ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಇರುವಂತೆ ಟೈಮ್ ನಿಯತಕಾಲಿಕೆ ವ್ಲಾಡಿಮಿರ್ ಪುಟಿನ್ ಅವರ ಫೋಟೊವನ್ನು ಹಿಟ್ಲರ್ ಚಿತ್ರದೊಂದಿಗೆ ಹೋಲಿಕೆ ಮಾಡಿರುವುದು ನಿಜವೇ ಎಂದು ಪರಿಶೀಲಿಸೋಣ.

TIME ಮ್ಯಾಗಜೀನ್‌ನ ಇತ್ತೀಚಿನ ಮುಖಪುಟವನ್ನು ಸರ್ಚ್ ಮಾಡಿದಾಗ, TIME ನಿಯತಕಾಲಿಕದ ಅಧಿಕೃತ Twitter ಹ್ಯಾಂಡಲ್‌ನಲ್ಲಿ ಫೋಟೋ ಕಂಡು ಬಂದಿದೆ. ಮುಖಪುಟದಲ್ಲಿ ಇರುವ ಶೀರ್ಷಿಕೆ ಮತ್ತು ಉಪಶೀರ್ಷಿಕೆಯನ್ನು ಒಂದೇ ರೀತಿ ಇದ್ದು, ಆದರೆ ಚಿತ್ರದಲ್ಲಿ ಟ್ಯಾಂಕರ್ ಹೊಂದಿರುವ ಮಿಲಿಟರಿ ಸಿಬ್ಬಂದಿಯ ಚಿತ್ರವನ್ನು ಹೊಂದಿದೆ. ಆದರೆ ಹಿಟ್ಲರ್ ಮೀಸೆಯೊಂದಿಗೆ ವ್ಲಾಡಿಮಿರ್ ಪುಟಿನ್ ಫೋಟೊ ಇಲ್ಲ.

‘TIME ಮ್ಯಾಗಜೀನ್ ನ ಕವರ್ ಫೋಟೊವನ್ನು’  Google ಸರ್ಚ್‌ ಮಾಡಿದಾಗ ಹಲವು ಮುಖಪುಟ ಚಿತ್ರಗಳು ಲಭ್ಯವಾಗಿವೆ. TIME ಮ್ಯಾಗಜೀನ್‌ನ ಆನ್‌ಲೈನ್ ಆರ್ಕೈವ್, ಅಲ್ಲಿ ಮ್ಯಾಗಜೀನ್ ಪ್ರಕಟಿಸಿದ ಎಲ್ಲಾ ಕವರ್‌ ಫೋಟೊಗಳನ್ನು ಸಂಗ್ರಹಿಸಲಾಗಿದೆ. 2022 ರ ಟೈಮ್ ಮ್ಯಾಗಜೀನ್ ಕವರ್‌ ಫೋಟೊ ನೋಡಿದಾಗ, ಅವುಗಳಲ್ಲಿ ಯಾವುದೂ ಹಿಟ್ಲರ್ ಮೀಸೆಯೊಂದಿಗೆ ವ್ಲಾಡಿಮಿರ್ ಪುಟಿನ್ ಅವರ ಮುಖಪುಟ ಚಿತ್ರವನ್ನು ಒಳಗೊಂಡಿಲ್ಲ.

ಪ್ಯಾಟ್ರಿಕ್ ಮುಲ್ಡರ್ ಎಂಬ ಟ್ವಿಟರ್ ಬಳಕೆದಾರರು ಹಿಟ್ಲರ್ ಮೀಸೆಯೊಂದಿಗೆ ವ್ಲಾಡಿಮಿರ್ ಪುಟಿನ್ ಅವರ ಕಲಾಕೃತಿಯನ್ನು ರಚಿಸಿದ್ದಾರೆ ಎಂದು ದೃಢಪಡಿಸಿದ್ದು, ಅದೇ ದಿನ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿತ್ತು. ಪ್ಯಾಟ್ರಿಕ್ ಮುಲ್ಡರ್, ಅವರು ಮೂಲತಃ ಗ್ರಾಫಿಕ್ ಡಿಸೈನರ್ ಆಗಿದ್ದು , ಪ್ಯಾಟ್ರಿಕ್ ಮುಲ್ಡರ್ ರಚಿಸಿದ್ದ ಪುಟಿನ್ ಅವರ ಫೋಟೋವನ್ನು  ಟೈಮ್ ಕವರ್‌ಗಾಗಿ ಅಲ್ಲ ಎಂದು ಹೇಳುತ್ತಾರೆ.

ಇದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ವ್ಲಾಡಿಮಿರ್ ಪುಟಿನ್ ಫೋಟೊಗೆ ಹಿಟ್ಲರ್ ಮೀಸೆಯನ್ನು ಒಳಗೊಂಡಿರುವ ಚಿತ್ರವನ್ನು ರಚಿಸಿದ್ದು ಪ್ಯಾಟ್ರಿಕ್ ಮುಲ್ಡರ್ ಎಂಬ ಕಲಾವಿದ. ಆದರೆ ಆ ಫೋಟೋವನ್ನು  TIME ನಿಯತಕಾಲಿಕದ ಕವರ್ ಫೋಟೋ ಆಗಿ ಬಳಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಆದರೆ ಟೈಮ್ ಮ್ಯಾಗಜಿನ್‌ನ  ಮುಖಪುಟದಲ್ಲಿ ಪುಟಿನ್ ಅವರ ಫೋಟೋವನ್ನು ಹಾಕಿಲ್ಲ. ಎಡಿಟ್ ಮಾಡಲಾಗಿದೆ ಅಷ್ಟೆ.


ಇದನ್ನು ಓದಿರಿ: Fact check: ರಷ್ಯಾ ದಾಳಿಯಿಂದ ಕೈವ್‌ನ ಸ್ವಾತಂತ್ರ ಚೌಕ ನಾಶವಾಗಿದ್ದು ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights