ಹೊಸ ಕಾನೂನಿನ ವಿರುದ್ಧ ಪಾಕಿಸ್ತಾನ ಪತ್ರಕರ್ತರ ಪ್ರತಿಭಟನೆ..!

ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗುವಂತ ಹೊಸ ಕಾನೂನುಗಳ ವಿರುದ್ಧ ಪಾಕಿಸ್ತಾನ ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಪಾಕಿಸ್ತಾನದ ಮಾಧ್ಯಮ ಅಭಿವೃದ್ಧಿ ಪ್ರಾಧಿಕಾರ ಜಾರಿಗೊಳಿಸಲು ಇಚ್ಚಿಸುವ ಹೊಸ ಕಾನೂನುಗಳಲ್ಲಿ ಉನ್ನತ ಮಿಲಿಟರಿ ಅಧಿಕಾರಿಗಳು, ನ್ಯಾಯಾಧೀಶರು ಮತ್ತು ಸರ್ಕಾರಿ ನಾಯಕರ ವಿರುದ್ಧ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಸುದ್ದಿ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೆ ದಂಡಿಸಲು ನ್ಯಾಯಮಂಡಳಿಗಳನ್ನು ಸ್ಥಾಪಿಸುತ್ತದೆ.

ಈ ಕಾನೂನುನ ವಿರುದ್ಧ ತಿರುಗಿ ಬಿದ್ದ ಪಾಕಿಸ್ತಾನದ ನೂರಾರು ಪತ್ರಕರ್ತರು ಸೆಪ್ಟೆಂಬರ್ 14, 2021 ರಂದು, ಸಂಸತ್ತಿನ ಮುಂದೆ ಪ್ರತಿಭಟಿಸಿದರು. ಈ ಕಾನೂನನ್ನು ಒಂದು ವೇಳೆ ಜಾರಿಗೊಳಿಸಿದರೆ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದಂತೆ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಹೊಸ ಕಾನೂನಿನ ವಿರುದ್ಧ ಭಾನುವಾರ ಇಸ್ಲಾಮಾಬಾದ್ ನ್ಯಾಷನಲ್ ಪ್ರೆಸ್ ಕ್ಲಬ್ ಕಟ್ಟಡದ ಮುಂದೆ ರ್ಯಾಲಿ ನಡೆಸುವ ಮೂಲಕ ಪ್ರತಿಭಟನೆಯನ್ನು ಆರಂಭಿಸಿದರು. ಇದರಲ್ಲಿ ಮಾಧ್ಯಮ ಕಾರ್ಯಕರ್ತರು, ಹಲವಾರು ವಿರೋಧ ಪಕ್ಷಗಳ ಸದಸ್ಯರು ಮತ್ತು ನಾಗರಿಕ ಸಮಾಜದ ಕಾರ್ಯಕರ್ತರು ಭಾಗವಹಿಸಿದ್ದರು. ರಾತ್ರಿಯ ಹೊತ್ತು ಪ್ರತಿಭಟನಾಕಾರರು ಸಂಸತ್ ಭವನದ ಮುಂದೆ ಧರಣಿ ನಡೆಸಿದರು. ಇದು ಇಂದಿಗೂ ಮುಂದುವರಿದಿದೆ.

‘ನಕಲಿ ಸುದ್ದಿಗೆ ಕಡಿವಾಣ’

ಕ್ಯಾಬಿನೆಟ್ ಮಂತ್ರಿಗಳು ಮತ್ತು ಸರ್ಕಾರಿ ವಕ್ತಾರರು ವಾರಗಳಿಂದ ಪತ್ರಕರ್ತರು ಸುಳ್ಳಿ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಹೀಗಾಗಿ ಪಾಕಿಸ್ತಾನ ಮಾಧ್ಯಮ ಅಭಿವೃದ್ಧಿ ಪ್ರಾಧಿಕಾರವನ್ನು (ಪಿಎಂಡಿಎ) ಹೊಸ ಕಾನೂನಿನ ಮೂಲಕ ರಚಿಸಲಾಗಿದ್ದು, ಮಾಧ್ಯಮ ಕಾರ್ಯಕರ್ತರಿಗೆ ಸಕಾಲಕ್ಕೆ ಪಾವತಿ ಹಾಗೂ ನಕಲಿ ಸುದ್ದಿಗಳ ಹಾವಳಿಯನ್ನು ತಡೆಯುತ್ತದೆ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights