ಲಸಿಕೆ ಪಡೆಯದಿದ್ದರೆ ಪಡಿತರ ರದ್ದು; ಆಹಾರ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿದ ತಹಶೀಲ್ದಾರ್, ಜಿಲ್ಲಾಧಿಕಾರಿ!
ಕೋವಿಡ್ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿ ಕಾನೂನು ತರಲಾಗಿದೆ. ಎಲ್ಲೆಡೆ ಲಸಿಕೆ ಹಾಕಲಾಗುತ್ತಿದೆ. ಹೀಗಿದ್ದರೂ, ರಾಜ್ಯದ ಚಿ೦ತಾಮಣಿ ಸೇರಿದಂತೆ ಹಲವು ತಾಲೂಕುಗಳ ತಹಶೀಲ್ದಾರ್ಗಳು ಮತ್ತು ಜಿಲ್ಲಾಧಿಕಾರಿಗಳು “ಲಸಿಕೆ ಪಡೆಯದಿದ್ದವರಿಗೆ ಪಡಿತರವನ್ನು ನೀಡುವುದಿಲ್ಲ’ ಎ೦ದು ಸುತ್ತೋಲೆ ಹೊರಡಿಸಿದ್ದಾರೆ. ಇದು ಆಹಾರದ ಹಕ್ಕಿನ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ!
ಲಸಿಕೆ ಸ್ವಪ್ರೇರಿತವಾಗಿರಬೇಕು ಎ೦ದು ಕೇ೦ದ್ರ ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಇಲಾಖೆಯು ಸ್ಪಷ್ಟವಾಗಿ ಹೇಳಿದ್ದರೂ ಲಸಿಕೆ ಪಡೆಯದವರಿಗೆ ಪಡಿತರ ನೀಡಬಾರದು ಎ೦ದು ಕೋಲಾರ ಜಿಲ್ಲೆಯ ಚಿ೦ತಾಮಣಿ ತಾಲೂಕಿನ ತಹಶೀಲ್ದಾರ್ ಹೊರಡಿಸಿರುವ ಸೂಚನೆಯು ವಿರೋಧಕ್ಕೆ ಗ್ರಾಸವಾಗಿದೆ.
ಬಲವ೦ತವಾಗಿ ಲಸಿಕಾ ಹಾಕಿಕೊಳ್ಳುವಂತೆ ಒತ್ತಾಯಿಸುತ್ತಿರುವ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ಗಳು ಲಸಿಕೆ ಪಡೆಯದವರಿಗೆ ಪಡಿತರ ಸ್ಥಗಿತಗೊಳಿಸಲು ಸುತ್ತೋಲೆ ಹೊರಡಿಸುತ್ತಿದ್ದಾರೆ. ಆದರೂ, ಕ೦ದಾಯ ಸಚಿವ ಆರ್ ಅಶೋಕ್ ಮತ್ತು ಆಹಾರ ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಈವರೆಗೂ ಚಕಾರ ಎತ್ತಿಲ್ಲ.
ಯಾದಗಿರಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿಯೂ ಅಲ್ಲಿನ ಜಿಲ್ಲಾಧಿಕಾರಿಗಳು ಮತ್ತು ಸ್ಥಳೀಯ ಅಧಿಕಾರಿಗಳು ಸಹ ಪಡಿತರ ಚೀಟಿದಾರರಿಗೆ ಪಡಿತರವನ್ನು ಸ್ಮಗಿತಗೊಳಿಸಿದ್ದರು. ಇದರ ಬೆನ್ನಲ್ಲೇ ಚಿ೦ತಾಮಣಿ ತಾಲೂಕಿನ ತಹಶೀಲ್ದಾರ್, 2021ರ ಆಗಸ್ಟ್ 21ರಂದು ಪಡಿತರ ಸ್ಮಗಿತಗೊಳಿಸುವ೦ತೆ ನ್ಯಾಯಬೆಲೆ ಅಂಗಡಿ ಪ್ರಾಧಿಕಾರದವರಿಗೆ ಜ್ಞಾಪನ ಪತ್ರದಲ್ಲಿ ಸೂಚಿಸಿದ್ದಾರೆ.

“ವ್ಯಾಕ್ಸಿನ್ ಪಡೆಯದೇ ಇರುವ ಪಡಿತರ ಚೀಟಿದಾರರಿಗೆ ಪಡಿತರವನ್ನು ನೀಡಲಾಗುವುದಿಲ್ಲ ಎ೦ಬ ಬಗ್ಗೆ ಸೂಚನಾ ಫಲಕವನ್ನು ನ್ಯಾಯಬಲೆ ಅ೦ಗಡಿಯ ಮುಂದೆ ಕಡ್ಡಾಯವಾಗಿ ಪ್ರಕಟಿಸುವುದು; ಎಂದು ಸೂಚಿಸಿರುವುದು ಜ್ನಾಪನ ಪತ್ರದಿ೦ದ ತಿಳಿದು ಬ೦ದಿದೆ.
ಕೋವಿಡ್ 3ನೇ ಅಲೆ ಆಕ್ರಮಿಸುವ ಸಂಭವದ ಹಿನ್ನೆಲೆಯಲ್ಲಿ 2021ರ ಆಗಸ್ಟ್ 21ರಂದು ಚಿಂತಾಮಣಿಯಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಎಲ್ಲಾ ನ್ಯಾಯಬೆಲೆ ಅಂಗಡಿಗಳ ಮಾಲೀಕರೊಂ೦ದಿಗೆ ಕೋವಿಡ್ ಲಸಿಕ ಕುರಿತು ಚರ್ಚಿಸಲಾಗಿತ್ತು. ಲಸಿಕೆ ಸ೦ಬ೦ಧ ಪ್ರಗತಿ ಸಾಧಿಸುವ ಸಲುವಾಗಿ ಆಗಸ್ಟ್ ಮತ್ತು ಸೆಪ್ಟೆ೦ಬರ್ನಲ್ಲಿ ಕೆಲವು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿತ್ತು. ಅದರಲ್ಲಿ ಲಸಿಕೆ ಪಡೆಯದೇ ಇರುವ ಪಡಿತರ ಚೀಟಿದಾರರಿಗೆ ಪಡಿತರವನ್ನು ನೀಡುವುದಿಲ್ಲ ಎ೦ಬ ಸೂಚನೆಯನ್ನೂ ನೀಡಲಾಗಿತ್ತು ಎ೦ಬುದು ಜ್ನಾಪನ ಪತ್ರದಿ೦ದ ತಿಳಿದು ಬಂದಿದೆ.
ಇದನ್ನೂ ಓದಿ: ಲಾಕ್ಡೌನ್ ವಿರುದ್ಧ ಪ್ರತಿಭಟನೆ: ಜನರು – ಪೊಲೀಸರ ನಡುವೆ ಘರ್ಷಣೆ; 218 ಜನರ ಬಂಧನ!
ಲಸಿಕೆ ನಿರಾಕರಿಸಿದವರಿಗೆ ಪಡಿತರ ನೀಡಬಾರದು ಎ೦ದು ಯಾದಗಿರಿ ಜಿಲ್ಲೆಯಲ್ಲಿಯೂ ಅಲ್ಲಿನ ಜಿಲ್ಲಾಧಿಕಾರಿ ರಾಗಪ್ರಿಯಾ ಅವರು ಆಹಾರ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದರು ಎ೦ದು ಕನ್ನಡಪ್ರಭ ಪತ್ರಿಕೆಯು ವಿಶೇಷ ವರದಿ ಪ್ರಕಟಿಸಿತ್ತು. ಪ್ರತಿ ದಿನ 15ರಿ೦ದ 20 ಸಾವಿರ ಲಸಿಕೆಗಳನ್ನು ನೀಡಬೇಕು. ಇದಕ್ಕಾಗಿ 12 ಗ೦ಟಿಗಳ ಕಾಲ ಲಸಿಕೆ ನೀಡಿದಾಗ ಮಾತ್ರ ಟಾರ್ಗೆಟ್ ಪೂರ್ಣಗೊಳಿಸಲು ಸಾಧ್ಯ ಎ೦ದು ಕೋವಿಡ್ ಲಸಿಕೆ ವಿತರಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿದ್ದರು.
ಯಾದಗಿರಿ ಸಮೀಪದ ಅಲ್ಲಿಪೂರ ಗ್ರಾಮದಲ್ಲಿ ಕೆಲವು ದಿನಗಳ ಹಿ೦ದೆ, ಲಸಿಕೆ ಪಡೆಯದಿದ್ದರೆ ಪಡಿತರ ನೀಡುವುದಿಲ್ಲವೆ೦ದು ಪ೦ಚಾಯತ್ ಡ೦ಗೂರ ಸಾರಿದ್ದರು. ಗುರಿ ಸಾಧನೆ ತಲುಪಬೇಕು ಎ೦ಬ ಕಾರಣಕ್ಕಾಗಿ, ಮನೆಗಳಿಗೆ ನುಗ್ಗಿ ಆಟೋಗಳಲ್ಲಿ ಎತ್ತಾಕಿಕೊ೦ಡು ಹೋಗಿ ಕೆಲವರಿಗೆ ಲಸಿಕೆ ನೀಡಿಸಿದ್ದಾರೆ ಎ೦ಬ ಆಕ್ರೋಶಗಳು ಮೂಡಿಬ೦ದಿದ್ದವು. ಆರೋಗ್ಯ ಸಿಬ್ಬ೦ದಿಗಳು ಅಥವಾ ಅಧಿಕಾರಿಗಳು ಬರುತ್ತಾರೆ೦ದರೆ ಆ ಭಾಗದ ಎಲ್ಲ ಗ್ರಾಮಸ್ಥರು ಊರೇ ಖಾಲಿ ಮಾಡಿ ಓಡಿಹೋಗುವ೦ತಹ ಸ್ಥಿತಿ ನಿರ್ಮಾಣವಾಗಿತ್ತು ಎ೦ಬ ವರದಿ ಪ್ರಕಟವಾಗಿತ್ತು.
ಇದನ್ನೂ ಓದಿ: ಬಂಗಾಳ: ಮಾಜಿ ಕಾಂಗ್ರೆಸ್ ಅಧ್ಯಕ್ಷ ಸೋಮೆನ್ ಮಿತ್ರಾ ಅವರ ಪತ್ನಿ ಟಿಎಂಸಿಗೆ ಮರಳುವ ಸಾಧ್ಯತೆ!

