ಜಾತಿ ಆಧಾರಿತ ಜನಗಣತಿಯನ್ನು ನಡೆಸಲೇಬೇಕು: ಬಿಹಾರ ಸಿಎಂ ನಿತೀಶ್ ಕುಮಾರ್

ಸೋಮವಾರ ನಾವು ದೆಹಲಿಗೆ ತೆರಳುತ್ತಿದ್ದೇವೆ. ಪ್ರಧಾನಿ ಮೋದಿಯವರನ್ನು ಭೇಟಿಮಾಡಲಿದ್ದೇವೆ. ಆ ವೇಳೆ ಜಾತಿ ಆಧಾರಿತ ಜನಗಣತಿ ನಡೆಸಲು ಪ್ರಧಾನಿಯವರನ್ನು ಒತ್ತಾಯಿಸುತ್ತೇವೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

“ಈಗಾಗಲೇ ಕೆಲವರು ದೆಹಲಿಯನ್ನು ತಲುಪಿದ್ದಾರೆ ಮತ್ತೆ ಕೆಲವರು ನನ್ನೊಂದಿಗೆ ಬರುತ್ತಾರೆ. ನಾಳೆ 11 ಗಂಟೆಗೆ 10 ಸದಸ್ಯರ ನಿಯೋಗದೊಂದಿಗೆ ಪ್ರಧಾನಿಯವರನ್ನು ಭೇಟಿಯಾಗುತ್ತೇವೆ” ಎಂದು ಹೇಳಿದ್ದಾರೆ.

“ಜಾತಿ ಆಧಾರಿತ ಜನಗಣತಿ ಒಂದು ನಿರ್ಣಾಯಕ ವಿಷಯವಾಗಿದೆ. ಇದು ಕಾರ್ಯರೂಪಕ್ಕೆ ಬಂದರೆ, ಅದಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ. ಮೇಲಾಗಿ, ಇದು ಬಿಹಾರಕ್ಕೆ ಮಾತ್ರವಲ್ಲ, ಇಡೀ ದೇಶದ ಜನರು ಇದರಿಂದ ಪ್ರಯೋಜನ ಪಡೆಯುತ್ತಾರೆ. ಹೀಗಾಗಿ ಒಮ್ಮೆಯಾದರೂ ಜಾತಿ ಆಧಾರಿತ ಜನಗಣತಿ ನಡೆಸಬೇಕು. ಈ ದೃಷ್ಟಿಕೋನದಿಂದ ನಾವು ನಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಂಗಾಳ: ಮಾಜಿ ಕಾಂಗ್ರೆಸ್ ಅಧ್ಯಕ್ಷ ಸೋಮೆನ್ ಮಿತ್ರಾ ಅವರ ಪತ್ನಿ ಟಿಎಂಸಿಗೆ ಮರಳುವ ಸಾಧ್ಯತೆ!

ಜಾತಿ ಗಣತಿಯು ಪ್ರತಿಯೊಬ್ಬರ ಹಿತಾಸಕ್ತಿಗೆ ಅನುಗುಣವಾಗಿದೆ. ಒಂದು ಜಾತಿಯ ಜನರ ಗುಂಪನ್ನು ಅಸಮಾಧಾನಗೊಳಿಸುತ್ತದೆ ಎಂಬ ಕಳವಳವು ಆಧಾರರಹಿತವಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ಈ ಹಿಂದೆ ಪದೇ ಪದೇ ಹೇಳಿದ್ದಾರೆ.

“ಜಾತಿ ಗಣತಿ ಮಾಡುವುದು ಕೇಂದ್ರಕ್ಕೆ ಬಿಟ್ಟದ್ದು. ನಮ್ಮ ಕೆಲಸ ನಮ್ಮ ಅಭಿಪ್ರಾಯಗಳನ್ನು ತಿಳಿಸುವುದು ಅಷ್ಟೇ. ಈ ಜನಗಣಿಯನ್ನು ಒಂದು ಜಾತಿಯವರು ಇಷ್ಟಪಡುತ್ತಾರೆ. ಇನ್ನೊಂದು ಜಾತಿಯವರು ಇಷ್ಟಪಡುವುದಿಲ್ಲ ಎಂದು ಭಾವಿಸಬೇಡಿ. ಇದು ಎಲ್ಲರ ಹಿತಾಸಕ್ತಿಗಾಗಿ” ಎಂದು ಸುದ್ದಿಗಾರರಿಗೆ ಹೇಳಿದ್ದಾರೆ.

ನಿತೀಶ್ ಕುಮಾರ್ ಮಾತ್ರವಲ್ಲ, ಬಿಹಾರದ ಹಲವಾರು ನಾಯಕರು, ಪಕ್ಷದ ವ್ಯಾಪ್ತಿಯನ್ನು ಮೀರಿ, ಜಾತಿ ಆಧಾರಿತ ಜನಗಣತಿಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಹಿನ್ನಡೆಯಲ್ಲಿ ಕಾಂಗ್ರೆಸ್‌; ಮತ್ತೆ ಅಹಿಂದ ಪುನರುಜ್ಜೀವನಕ್ಕೆ ಮುಂದಾದ ಸಿದ್ದರಾಮಯ್ಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights