FACT CHECK | 2024 ಸೆಪ್ಟಂಬರ್‌ 30ರೊಳಗೆ LICಯು ತನ್ನ ಎಲ್ಲಾ ಯೋಜನೆಯನ್ನು ಸ್ಥಗಿತಗೊಳಿಸಲಿದೆ ಎಂಬುದು ನಿಜವೇ?

ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ತನ್ನ ಎಲ್ಲಾ ವಿಮಾ ಉತ್ಪನ್ನಗಳು ಮತ್ತು ಪರಿಷ್ಕರಣೆಯ ಯೋಜನೆಗಳನ್ನು ಸೆಪ್ಟೆಂಬರ್ 30 ರೊಳಗೆ ಹಿಂಪಡೆಯಲಿದೆ ಎಂದು ಹೇಳುವ ಸೂಚನಾ ಪತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ.

ಪಠ್ಯ ನ ಚಿತ್ರವಾಗಿರಬಹುದು

30 ಸೆಪ್ಟೆಂಬರ್ 2024 ರೊಳಗೆ LICಯು ತನ್ನ ಎಲ್ಲಾ ಯೋಜನೆಗಳನ್ನು ಸ್ಥಗಿತಗೊಳಿಸಲಿದೆ ಎಂದು ಹೇಳಿಕೊಂಡು ಪ್ರಸಾರವಾಗುತ್ತಿರುವ ಸೂಚನಾ ಪತ್ರದಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಪ್ರತಿಪಾದಿಸಿದಂತೆ LIC ವಿಮಾ ಯೋಜನೆಗಳನ್ನು ಹಿಂತೆಗೆದುಕೊಳ್ಳಲಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾದ ಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸಲು LIC ವೆಬ್‌ಸೈಟ್‌ಅನ್ನು ಸರ್ಚ್ ಮಾಡಿದಾಗ, LIC ತನ್ನ ಎಲ್ಲಾ ವಿಮಾ ಯೋಜನೆಗಳನ್ನು ಹಿಂತೆಗೆದುಕೊಳ್ಳುವ ಕುರಿತು ಯಾವುದೇ ಪತ್ರಿಕಾ ಪ್ರಕಟಣೆ ಅಥವಾ ಅಧಿಸೂಚನೆಯನ್ನು ಹೊರಡಿಸಿದ ಮಾಹಿತಿ ಲಭ್ಯವಾಗಿಲ್ಲ.

ಆದರೂ, LIC ಪ್ರತಿ ವರ್ಷ ಕೆಲವು ವಿಮಾ ಯೋಜನೆಗಳನ್ನು ವಾಡಿಕೆಯಂತೆ ಹಿಂತೆಗೆದುಕೊಳ್ಳುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ತನ್ನ ಮಾರ್ಗಸೂಚಿಗಳನ್ನು ಅನುಸರಿಸುವ ಕ್ರಮವಾಗಿದ್ದು, ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಗುಣವಾಗಿ ಮತ್ತು ಗ್ರಾಹಕರ ಅಗತ್ಯಗಳನ್ನು ಉತ್ತಮವಾಗಿ ಪೂರೈಸುವ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತದೆ. ಹೆಚ್ಚುವರಿಯಾಗಿ, ಈ ಸಮಸ್ಯೆಯನ್ನು ಪರಿಹರಿಸುವ ಯಾವುದೇ ಸುದ್ದಿ ವರದಿಗಳು ಅಥವಾ ಮಾಧ್ಯಮ ವರದಿಗಳು ಲಭ್ಯವಾಗಿಲ್ಲ. 2024-25ರ ಹಣಕಾಸು ವರ್ಷಕ್ಕೆ LIC ಯು ಹಿಂತೆಗೆದುಕೊಂಡ ಯೋಜನೆಗಳ ಕುರಿತು ನೀವು (ಇಲ್ಲಿ) ನೋಡಬಹುದು.

ಹೆಚ್ಚಿನ ಮಾಹಿತಿಗಾಗಿ X ಖಾತೆಯಲ್ಲಿ ನಲ್ಲಿ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ನೀಡಿರುವ ಸ್ಪಷ್ಟೀಕರಣ ಲಭ್ಯವಾಗಿದೆ. ವೈರಲ್ ಪೋಸ್ಟ್ ನಕಲಿ ಎಂದು ಪಿಐಬಿ ಹೇಳಿದೆ, “ಎಲ್ಲಾ ವಿಮಾ ಉತ್ಪನ್ನಗಳು/ಯೋಜನೆಗಳನ್ನು ಪರಿಷ್ಕರಣೆಗಾಗಿ 30 ಸೆಪ್ಟೆಂಬರ್ 2024 ರಂದು ಹಿಂತೆಗೆದುಕೊಳ್ಳುತ್ತದೆ ಎಂದು ಎಲ್‌ಐಸಿ ಹೊರಡಿಸಿಸೆ ಎನ್ನಲಾದ  ಸೂಚನಾ ಪತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದು,  ಇದು ಸುಳ್ಳು ಮತ್ತು ದಾರಿತಪ್ಪಿಸುವಂತಾದ್ದು ಎಂದು ಸ್ಪಷ್ಟಪಡಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತೀಯ ಜೀವ ವಿಮಾ ನಿಗಮವು (LIC) ತನ್ನ ಎಲ್ಲಾ ವಿಮಾ ಯೋಜನೆಗಳನ್ನು 30 ಸೆಪ್ಟೆಂಬರ್ 2024 ರೊಳಗೆ ಹಿಂತೆಗೆದುಕೊಳ್ಳುವ ಕುರಿತು ಯಾವುದೇ ಪತ್ರ ಅಥವಾ ಅಧಿಸೂಚನೆಯನ್ನು ನೀಡಿಲ್ಲ. ನಿಯಮಾನುಸಾರ ಪ್ರತಿ ವರ್ಷ ತನ್ನ ಮಾರ್ಗ ಸೂಚಿಯಂತೆ ಗ್ರಾಹಕರ ಮತ್ತು ಮಾರುಕಟ್ಟೆ ಅವಶ್ಯಕತೆಗಳಿಗೆ ಅನುಗುಣಾಗಿ ನಡೆಯುವ ಸಾಆನ್ಯ ಪ್ರಕ್ರಿಯೆಯನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಆಂಧ್ರಪ್ರದೇಶದಲ್ಲಿ ಶಾಲಾ ಮಕ್ಕಳು ಅಸಹಜವಾಗಿ ವರ್ತಿಸುತ್ತಿದ್ದಾರೆ ಎಂದು ನೇಪಾಳದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights