FACT CHECK | ಆಂಧ್ರಪ್ರದೇಶದಲ್ಲಿ ಶಾಲಾ ಮಕ್ಕಳು ಅಸಹಜವಾಗಿ ವರ್ತಿಸುತ್ತಿದ್ದಾರೆ ಎಂದು ನೇಪಾಳದ ವಿಡಿಯೋ ಹಂಚಿಕೆ

ಆಂಧ್ರಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂಬ ಹೇಳಿಕೆಯೊಂದಿಗೆ ಶಾಲಾ ವಿದ್ಯಾರ್ಥಿಗಳ ಅಸಹಜ ವರ್ತನೆಯನ್ನು ಪ್ರದರ್ಶಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅಸಹಜವಾಗಿ ವರ್ತಿಸುತ್ತಿರುವ ವಿದ್ಯಾರ್ಥಿಗಳನ್ನು ಕಂಡ ಶಾಲಾ ಸಿಬ್ಬಂದಿ ಮತ್ತು ಇತರ ವಿದ್ಯಾರ್ಥಿಗಳು ಭಯಭೀತರಾಗಿದ್ದು, ನೆಲದಲ್ಲಿ ಬಿದ್ದು ಒದ್ದಾಡುತ್ತಾ, ಕೂಗುತ್ತಾ ಅಸಹಜವಾಗಿ ವರ್ತಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಒಂದು ಕಾಲದಲ್ಲಿ ಈ ಶಾಲೆಯನ್ನು ಕೋವಿಡ್-19 ಶವಗಳ ಶೇಖರಣಾ ಸ್ಥಳವಾಗಿ ಬಳಸಲಾಗುತ್ತಿತ್ತು ಮತ್ತು ಶಾಲೆಯ ಸಮೀಪದಲ್ಲಿ ಸ್ಮಶಾನವಿದೆ ಎಂದು ಹೇಳಲಾಗುತ್ತಿದೆ.

ಆಂಧ್ರಪ್ರದೇಶದ ಶಾಲೆಯೊಂದರಲ್ಲಿ  ಶಾಲಾ ಮಕ್ಕಳು ಅಸಹಜವಾಗಿ ವರ್ತಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. COVID-19 ರ ಸಂದರ್ಭದಲ್ಲಿ ಕೋವಿಡ್‌ನಿಂದ ಸಾವನಪ್ಪಿದ ಶವಗಳನ್ನು ಇರಿಸಲು ಈ ಶಾಲೆಯನ್ನು ಬಳಸಲಾಗುತ್ತಿದ್ದು ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಅದರ ಕೆಲವು ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜೂನ್ 2024 ರಂದು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ವಿಡಿಯೋಗಳು ಲಭ್ಯವಾಗಿದ್ದು,  ವೈರಲ್  ದೃಶ್ಯಗಲೊಂದಿಗೆ ಹೋಲಿಕೆಯಾಗಿದೆ. (ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು)  ಈ ಪೋಸ್ಟ್‌ಗಳ ಪ್ರಕಾರ, ಬೈತಾಡಿಯ ಸಿಗಾಸ್‌ನಲ್ಲಿರುವ ಭುವನೇಶ್ವರಿ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ.

ಮೇಲಿನ ಸುಳಿವನ್ನು ಆಧಾರವಾಗಿಟ್ಟುಕೊಂಡು ಕೀವರ್ಡ್ ವರ್ಡ್ ಸರ್ಚ್ ಮಾಡಿದಾಗ,  ವೈರಲ್ ವಿಡಿಯೋದಲ್ಲಿರುವ ದೃಶ್ಯಗಳನ್ನು ಒಳಗೊಂಡ ಸುದ್ದಿ ವರದಿಗಳು ಲಭ್ಯವಾಗಿದೆ.

ನೇಪಾಳದ ಈ ಸುದ್ದಿ ವರದಿಗಳ ಪ್ರಕಾರ, ಈ ಘಟನೆಯು ನೇಪಾಳದ ಬೈತಾಡಿ, ಸಿಗಾಸ್ ಗ್ರಾಮೀಣ ಪುರಸಭೆ -5 ರ ಭುವನೇಶ್ವರಿ ಶಾಲೆಯಲ್ಲಿ ನಡೆದಿದೆ. ಈ ಘಟನೆ ಸಂಭವಿಸಿದಾಗ ವಿದ್ಯಾರ್ಥಿಗಳು ಸಾಮೂಹಿಕ ಹಿಸ್ಟೀರಿಯಾ ಅಥವಾ ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದರು ಎಂದು ವರದಿಯಾಗಿದೆ.

ಮಾಸ್‌ ಹಿಸ್ಟೀರಿಯಾ (ಇಲ್ಲಿ ಮತ್ತು ಇಲ್ಲಿ) ಒಂದು ಮಾನಸಿಕ ಸಾಮಾಜಿಕ ಆರೋಗ್ಯ ಸಮಸ್ಯೆಯಾಗಿದ್ದು, ಇದರಲ್ಲಿ ಜನರ ಗುಂಪು ‘ಅಸಹಜ ಮತ್ತು ಅಸಾಧಾರಣ ನಡವಳಿಕೆಗಳು, ಆಲೋಚನೆಗಳು ಮತ್ತು ಭಾವನೆಗಳು ಅಥವಾ ಆರೋಗ್ಯ ಲಕ್ಷಣಗಳ’  ಅನುಭವವನ್ನು ಹೊಂದಿದೆ.

ಭುವನೇಶ್ವರಿ ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಇಂತಹ ಸಮಸ್ಯೆ ಹೆಣ್ಣುಮಕ್ಕಳಲ್ಲಿ ಬಹಳ ದಿನಗಳಿಂದ (ಇದನ್ನು ಓದಿ) ಕಂಡುಬಬರುತ್ತಿದ್ದು, ಅವರ ಓದಿನ ಮೇಲೆ ಪರಿಣಾಮ ಬೀರಿದೆ. ಕೆಲವು ಹುಡುಗಿಯರು ಹಠಾತ್ತಾಗಿ ನೆಲದ ಮೇಲೆ ಬಿದ್ದು ಹೊರಳಾಡುವುದು, ಕಿರುಚಾಡುವುದು, ಇತ್ಯಾದಿ ಲಕ್ಷಣಗಳನ್ನು ತೋರಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಹದಿಹರೆಯದ ಹುಡುಗಿಯರಲ್ಲಿ ಇಂತಹ ವರ್ತನೆಗಳು ಕಂಡುಬರುತ್ತಿರುವುದರಿಂದ ಶಾಲೆಯ ಪರಿಸರದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಆಶಾ ವ್ಯಾಪ್ತಿಯಲ್ಲಿ ಸ್ಮಶಾನ ಅಥವಾ ಕೋವಿಡ್‌ನಿಂದ ಸಾವನಪ್ಪಿದ ಶವಗಳನ್ನು ಇರಿಸಲು ಈ ಶಾಲೆಯನ್ನು ಬಳಸಲಾಗುತ್ತಿ ಎಂಬುದನ್ನು ಯಾವ ಮಾಧ್ಯಮಗಳು ವರದಿ ಮಾಡಿಲ್ಲ ಅಥವಾ ಉಲ್ಲೇಖಿಸಿಲ್ಲ. ಗೂಗಲ್ ಮ್ಯಾಪ್‌ನಲ್ಲಿ ಶಾಲೆಯ ಸ್ಥಳವನ್ನು ಸರ್ಚ್ ಮಾಡಿದಾಗ, ಶಾಲೆಯ ಮೇಲ್ಛಾವಣಿಯ ಬಣ್ಣಗಳು ವೈರಲ್ ವೀಡಿಯೊದಲ್ಲಿ ಕಂಡುಬರುವ ಬಣ್ಣಕ್ಕೆ ಹೊಂದಿಕೆಯಾಗಿರುವುದನ್ನು ಕಂಡುಕೊಂಡಿದ್ದೇವೆ. ವೈರಲ್ ವಿಡಿಯೋವನ್ನು ನೇಪಾಳದ ಬೈತಾಡಿಯ ಸಿಗಾಸ್‌ನ ಭುವನೇಶ್ವರಿ ಶಾಲೆಯಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ನೇಪಾಳದ ವಿಡಿಯೋವನ್ನು ಆಂಧ್ರಪ್ರದೇಶದ ಶಾಲಾ ಮಕ್ಕಳು ಅಸಹಜ ನಡವಳಿಕೆಯನ್ನು ಪ್ರದರ್ಶಿಸುವ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಾರತ ಪಾಕ್‌ ಮೇಲೆ ಯುದ್ದ ಮಾಡಿದರೆ ಭಾರತೀಯ ಮುಸ್ಲಿಮರು ಪಾಕ್‌ ಸೇನೆಗೆ ಸೇರುತ್ತಾರೆ ಎಂದು ಹೇಳಿದ್ರಾ ಅಸಾದುದ್ದೀನ್ ಓವೈಸಿ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights