ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ವಿಚಾರಕರು v/s RSS ಪ್ರಚಾರಕರು!

2022ರ ಆರಂಭದಲ್ಲಿ ನಡೆಯಲಿರುವ ಪಂಚರಾಜ್ಯ ಚುನಾವಣೆಯಲ್ಲಿ ಉತ್ತರ ಪ್ರದೇಶ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಹೀಗಾಗಿ, ಅಲ್ಲಿನ ಜನರೊಂದಿಗೆ ಸಾಧಿಸುವ ನಿಟ್ಟಿನಲ್ಲಿ, ಕಾಂಗ್ರೆಸ್ ‘ವಿಚಾರಕರನ್ನು’ ಮತ್ತು ಆರ್‌ಎಸ್‌ಎಸ್‌ ‘ಪ್ರಚಾರಕರನ್ನು’ ನಿಯೋಜಿಸಲು ಯೋಜಿಸಿದೆ. ಈ ಕಾಂಗ್ರೆಸ್‌ ವಿಚಾರಕರು ಎಂದು ಕರೆಯುವ ಕಾರ್ಯಕರ್ತರು ಪ್ರಾಥಮಿಕವಾಗಿ ಕಾಂಗ್ರೆಸ್‌ನ ತಳಮಟ್ಟದ ಮುಂಚೂಣಿ ಸಂಘಟನೆಯಾದ ಸೇವಾದಳದ ಸದಸ್ಯರಾಗಿರುತ್ತಾರೆ. ಇವರು ಆಯ್ದ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ ಮತ್ತು ಬೆಲೆ ಏರಿಕೆ, ನಿರುದ್ಯೋಗ ಮತ್ತು ರೈತರ ಸಂಕಷ್ಟದಂತಹ ಸಮಸ್ಯೆಗಳ ಕುರಿತು ಮತದಾರರೊಂದಿಗೆ ಅರ್ಥಪೂರ್ಣ ಮಾತುಕತೆ ನಡೆಸುತ್ತಾರೆ.

2017ರಲ್ಲಿ ರಾಹುಲ್ ಗಾಂಧಿ ಪಕ್ಷದ ಮುಖ್ಯಸ್ಥರಾದ ನಂತರ ಸೇವಾದಳದ ಪಾತ್ರ ಮತ್ತು ಜವಾಬ್ದಾರಿಗಳನ್ನು ಸರಿಪಡಿಸಲಾಯಿತು. ಈ ಮೂಲಕ ಪಕ್ಷವು ನೆಲೆ ಹೊಂದಿದ್ದ ರಾಜ್ಯಗಳಲ್ಲಿ ಚುನಾವಣಾ ಪ್ರಚಾರ ಮತ್ತು ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಇಮೇಜ್‌ ಮೇಕಿಂಗ್‌ ಕಾರ್ಯಗಳು ನಡೆದವು. ಈ ಸಂಸ್ಥೆಯು 600 ಜಿಲ್ಲೆಗಳಲ್ಲಿ ಸುಮಾರು 3.7 ಲಕ್ಷ ಸಕ್ರಿಯ ಸದಸ್ಯರನ್ನು ಹೊಂದಿದೆ. ಉತ್ತರ ಪ್ರದೇಶದಲ್ಲಿ ಸೇವಾದಳವು ಸುಮಾರು 450 ಸದಸ್ಯರನ್ನು ಒಳಗೊಂಡಿದೆ.

ಚುನಾವಣೆಗೆ ಮುಂಚಿತವಾಗಿ ಆರ್‌ಎಸ್‌ಎಸ್ ಮತ್ತು ಇತರ ಪಕ್ಷಗಳ ಭಾವನಾತ್ಮಕ ಮತ್ತು ಧಾರ್ಮಿಕ ಅಜೆಂಡಾಗಳಿಂದ ಮತದಾರರನ್ನು ಜನರ ಅಜೆಂಡಾಗಳ ಕಡೆಗೆ ಕರೆತರಲು, ಅವರಿಗೆ ಜನರ ಅಜೆಂಡಾಗಳ ಬಗ್ಗೆ ಮನವರಿಕೆ ಮಾಡಲು ನಾವು ನಮ್ಮ ಕಾರ್ಯಪಡೆಗೆ ತರಬೇತಿ ನೀಡುತ್ತಿದ್ದೇವೆ. ಸೇವಾದಳದ ಸದಸ್ಯರು ರಾಜ್ಯ ಘಟಕಗಳೊಂದಿಗೆ ಜನರನ್ನು ತಲುಪುತ್ತಾರೆ. ಮತದಾರರೊಂದಿಗೆ ಸಮಸ್ಯೆಗಳ ಕುರಿತು ಮಾತನಾಡಲು ಪ್ರಯತ್ನಿಸುತ್ತಾರೆ ಎಂದು ಸೇವಾದಳದ ಮುಖ್ಯ ಸಂಘಟಕ ಲಾಲ್ಜಿ ದೇಸಾಯಿ ಹೇಳಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ ಸಿ-ವೋಟರ್ ಸಮೀಕ್ಷೆ: ಮತ್ತೆ ಅಧಿಕಾರ ಹಿಡಿಯಲಿದೆ ಬಿಜೆಪಿ; ಕಾಂಗ್ರೆಸ್‌ ಕಳಪೆ ಪ್ರದರ್ಶನ ಸಾಧ್ಯತೆ!

ತಂಡವು ಯುವಜನರನ್ನು ಹೊಂದಿದ್ದು, ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಲಿದೆ. ಯುಪಿ ಸೇವಾದಳದ 80% ಸದಸ್ಯರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಅವರನ್ನು ಸೇವಾದಳ ಯುವ ಬ್ರಿಗೇಡ್, ಸೇವಾದಳ ಮತ್ತು ಮಹಿಳಾ ಸೇವಾದಳ ಎಂದು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಯುವಜನರು ಮತ್ತು ಕಾರ್ಮಿಕ ವರ್ಗದೊಂದಿಗೆ ಸಂವಹನ ನಡೆಸಲು ಸಾಮಾಜಿಕ ಮಾಧ್ಯಮ ಸಾಧನಗಳನ್ನು ಬಳಸಿಕೊಂಡು ಅವರಿಗೆ ಸಮರ್ಥವಾಗಿ ತರಬೇತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಒಂದು ಕಾಲದಲ್ಲಿ ವಿಧ್ಯುಕ್ತ ಸಂಘಟನೆಯಾಗಿ ಕಾಣುತ್ತಿದ್ದ ಕಾಂಗ್ರೆಸ್‌ನ ಸೇವಾದಳವು ಈಗ ಉತ್ತರ ಪ್ರದೇಶದಲ್ಲಿ 100 ಕ್ಷೇತ್ರಗಳಲ್ಲಿ ಕಣ್ಮರೆಯಾಗಿದೆ. ಇದೀಗ ಮತ್ತೆ ಸೇವಾದಳಕ್ಕೆ ಜೀವತುಂಬುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡುತ್ತಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಯುಪಿಯ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಮತ್ತು ಯುಪಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಅವರ ಅಂತಿಮ ಅನುಮೋದನೆಯ ನಂತರ ಕೆಲಸ ಪ್ರಾರಂಭವಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ಕಾಂಗ್ರೆಸ್‌ಗೆ ಚುನಾವಣಾ ಯುದ್ದ; ಪ್ರಿಯಾಂಕಾ ಗಾಂಧಿಗೆ ಕಠಿಣ ಪರೀಕ್ಷೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights