ಫ್ಯಾಕ್ಟ್‌ಚೆಕ್: ‘ಬಾಲ ಗಾಯಕ’ ದಿವಂಗತ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಮೊಮ್ಮಗ ಅಲ್ಲ!

ಸಾವಿರಾರು ಹಾಡುಗಳ ಮೂಲಕ ಕೋಟ್ಯಾಂತರ ಜನರನ್ನು ರಂಜಿಸಿದ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ. ಐದು ದಶಕಗಳ ಕಾಲ ಸಂಗೀತ ಲೋಕದಲ್ಲಿ ಸಕ್ರಿಯರಾಗಿದ್ದು, 40 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿಯಾಗಿದ್ದ ‘ಗಾನ ಗಾರುಡಿಗ’ ದಿವಂಗತ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಮೊಮ್ಮಗನ ಲೈವ್ ಹಾಡುವ ವಿಡಿಯೊ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ.

ಎಸ್‌ಪಿಬಿ ಹಾಡಿರುವ ‘ಮಲರೆ ಮೌನಮ’ ಹಾಡನ್ನು ಚಿಕ್ಕ ಹುಡುಗನೊಬ್ಬ ಹಾಡುತ್ತಿರುವುದನ್ನು ಈ ವಿಡಿಯೋ ತೋರಿಸಲಾಗುತ್ತಿದೆ. ಹಾಗಿದ್ದರೆ ಈ ವಿಡಿಯೋದಲ್ಲಿ ಹಾಡುತ್ತಿರುವ ಬಾಲಕ ದಿವಾಂಗತ ಎಸ್‌ಪಿ ಬಾಲಸುಭ್ರಹ್ಮಣ್ಯಂ ಅವರ ಮೊಮ್ಮಗನಾ? ಎಂದು ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್:

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್  ಮಾಡಲಾಗಿದ್ದು, ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊವನ್ನು 19 ಜೂನ್ 2020 ರಂದು ಯೂಟ್ಯೂಬ್ ಚಾನೆಲ್ ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಈ ವೀಡಿಯೊವನ್ನು “ಮಲಾರೆ ಮೌನಮೆ – ಆದಿತ್ಯ ಸುರೇಶ್ ಅವರ ಸುಂದರ ಗಾಯನ” ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು  ಹುಡುಕಿದಾಗ, ಆದಿತ್ಯ ಸುರೇಶ್ ಅವರ ಫೇಸ್‌ಬುಕ್ ಪುಟದಲ್ಲಿ ಪ್ರಕಟವಾದ ಅದೇ ವೀಡಿಯೊ ಕಂಡುಬಂದಿದೆ. ವೀವರ್‌ವೊಬ್ಬರು ಕಾಮೆಂಟ್ ವಿಭಾಗದಲ್ಲಿ, ನೀವು ಎಸ್‌ಪಿಬಿ ಅವರ ಮೊಮ್ಮಗನೇ ಎಂದು ಬಳಕೆದಾರರು ಕೇಳಿದಾಗ, ಆದಿತ್ಯ ಸುರೇಶ್ ಅವರು ಎಸ್‌ಪಿಬಿ ಅವರ ಮೊಮ್ಮಗ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಮತ್ತು ಅದು ನಕಲಿ ಸುದ್ದಿ ಎಂದು ಖಚಿತಪಡಿಸಿದ್ದಾರೆ.

ಆದಿತ್ಯ ಸುರೇಶ್ ಕೇರಳದ ಕೊಲ್ಲಂ ನಗರದ ಜನಪ್ರಿಯ ಬಾಲ ಗಾಯಕ. ಹುಟ್ಟಿನಿಂದಲೇ ಬ್ರಿಟಲ್ ಬೋನ್ ಕಾಯಿಲೆಯಿಂದ ಬಳಲುತ್ತಿದ್ದ ಆದಿತ್ಯ ಸುರೇಶ್ ಹಾಡುಗಾರಿಕೆಯಲ್ಲಿ ಒಲವು ಹೊಂದಿದ್ದರು. ಕೇರಳ ಮತ್ತು ದೇಶದ ಇತರ ಭಾಗಗಳಲ್ಲಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆದಿತ್ಯ ಸುರೇಶ್ ಅವರ ಲೈವ್ ಪ್ರದರ್ಶನಗಳ ಕೆಲವು ಇತರ ವೀಡಿಯೊಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಆದಿತ್ಯ ಸುರೇಶ್‌ಗೂ ಸಿನಿಮಾಗಳಲ್ಲಿ ಹಾಡುವ ಅವಕಾಶಗಳು ಬಂದವು. ಆದಿತ್ಯ ಸುರೇಶ್ ಅವರ ಪೋಷಕರೊಂದಿಗೆ ಇರುವ ಫೋಟೋವನ್ನು ಇಲ್ಲಿ ನೋಡಬಹುದು.

ದಿವಾಂಗತ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಮೊಮ್ಮಕ್ಕಳೊಂದಿಗೆ ಇರುವ ಅವರ ಕೌಟುಂಬಿಕ ಚಿತ್ರಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ಎಲ್ಲ ಆಧಾರಗಳಿಂದ ವಿಡಿಯೋದಲ್ಲಿ ಹಾಡುತ್ತಿರುವ  ಬಾಲ ಗಾಯಕ ಆದಿತ್ಯ ಸುರೇಶ್ ಅವರೇ ಹೊರತು ದಿವಂಗತ ಗಾಯಕ ಎಸ್‌ಪಿಬಿ ಅವರ ಮೊಮ್ಮಗ ಅಲ್ಲ ಎಂಬುದು ಖಚಿತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವೀಡಿಯೊದಲ್ಲಿ ಹಾಡುತ್ತಿರುವ ವಿಡಿಯೊ ಕೇರಳದ ಬಾಲ ಗಾಯಕ ಆದಿತ್ಯ ಸುರೇಶ್ ಆಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ  ದಿವಂಗತ ಗಾಯಕ ಎಸ್‌ಪಿಬಿ ಅವರ ಮೊಮ್ಮಗ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗಿರುವ ಪೋಸ್ಟ್‌ನ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: Fact check:ಪಾಕಿಸ್ತಾನದ ಸಂಸತ್‌ನಲ್ಲಿ ‘ಮೋದಿ ಜಿಂದಾಬಾದ್‌’ ಎಂದು ಘೋಷಣೆ ಕೂಗಿಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights