ಫ್ಯಾಕ್ಟ್‌ಚೆಕ್: ಅಯೋಧ್ಯೆಯಲ್ಲಿ ಹಿಂದೂ ರಾಷ್ಟ್ರದ ಬೇಡಿಕೆ ಇಟ್ಟು ಮೆರವಣಿಗೆ ನಡೆಸಿದ್ದಾರೆ ಎಂಬುದು ಸುಳ್ಳು!

ಇತ್ತೀಚೆಗೆ ‘ಹಿಂದೂ ರಾಷ್ಟ್ರ’ಕ್ಕಾಗಿ ಒತ್ತಾಯಿಸಿ ಅಯೋಧ್ಯೆಯಲ್ಲಿ ಬೃಹತ್  ಮೆರವಣಿಗೆಯನ್ನು ನಡೆಸಲಾಗಿದೆ ಎಂದು ಬಲಪಂಥೀಯ ಪ್ರತಿಪಾದಕರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುತ್ತಿದ್ದಾರೆ. “ಅಯೋಧ್ಯಯಲ್ಲಿ ಹಿಂದೂ ರಾಷ್ಟ್ರಕ್ಕೆ ಬೇಡಿಕೆಯಿಟ್ಟ ಉತ್ತರಪ್ರದೇಶದ ಹಿಂದೂಗಳು.. ಅಲೆ ಎದ್ದಾಗಿದೆ ಇನ್ನೇನಿದ್ರು ಆರ್ಭಟನೇ” ಎಂದು ಪ್ರತಿಪಾದಿಸಲಾಗಿದೆ.

ವೈರಲ್ ಪೋಸ್ಟ್‌ನ ವಿಡಿಯೊದ ಆವೃತ್ತಿಯನ್ನು ಇಲ್ಲಿ ಆರ್ಕೈವ್ ಮಾಡಲಾಗಿದೆ. ಬಲಪಂಥೀಯ ಪ್ರತಿಪಾದಕಿ ಶಕುಂತಲ ನಟರಾಜ್ @ShakunthalaHS ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದೇ ರೀತಿ ವಿಡಿಯೊ ಪೋಸ್ಟ್‌ ಅನ್ನು ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು  ತಮ್ಮ ಫೇಸ್‌ಬುಕ್ ಅಕೌಂಟ್‌ನಿಂದ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಸ್ಟ್‌ನ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

ಪೋಸ್ಟ್ ಮಾಡಿದ ವಿಡಿಯೋದಲ್ಲಿ ಪ್ರವೀಣ್ ತೊಗಾಡಿಯಾ ನೇತೃತ್ವದಲ್ಲಿ ಮೆರವಣಿಗೆ ನಡೆಸುತ್ತಿರುವುದು ಎಂದು ಹೇಳಲಾಗಿದೆ.  ಗೂಗಲ್  ಕೀವರ್ಡ್‌ ಸಹಾಯದಿಂದ ಸರ್ಚ್ ಮಾಡಿದಾಗ , ಅದೇ ವೀಡಿಯೊವನ್ನು ಅಕ್ಟೋಬರ್ 2018 ರಲ್ಲಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಇರುವುದು  ವೀಡಿಯೊ ಹಳೆಯದು. ಮತ್ತು ಹಿಂದೂ ರಾಷ್ಟ್ರಕ್ಕಾಗಿ ಅಯೋಧ್ಯೆಯಲ್ಲಿ ನಡೆಸಲಾದ ಮೆರವಣಿಗೆ ಎಂಬುದು ಸುಳ್ಳು

 

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋ 2018 ರದ್ದು

ಅಕ್ಟೋಬರ್ 2018 ರಲ್ಲಿ ಪ್ರವೀಣ್ ತೊಗಾಡಿಯಾ ನೇತೃತ್ವದ ಮೆರವಣಿಗೆಯ ಅನೇಕ ರೀತಿಯ ವೀಡಿಯೊಗಳನ್ನು ಹಲವು ಸುದ್ದಿ ಚಾನೆಲ್‌ಗಳು ಅಪ್‌ಲೋಡ್ ಮಾಡಿರುವುದನ್ನು ಕಾಣಬಹುದು. ಅವುಗಳಲ್ಲಿ ಕೆಲವು ವೀಡಿಯೊಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಕಾರ್ಯಕ್ರಮದ ಕುರಿತು ಪ್ರವೀಣ್ ತೊಗಾಡಿಯಾ ಅವರ ಪತ್ರಿಕಾ ಹೇಳಿಕೆಯನ್ನು ಇಲ್ಲಿ ನೋಡಬಹುದು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕೆಂಬುದು ಈ ಮೆರವಣಿಗೆಯ ಪ್ರಮುಖ ಬೇಡಿಕೆಯಾಗಿತ್ತು (ಇದು ನವೆಂಬರ್ 2019 ರಲ್ಲಿ ನೀಡಲಾದ ಅಯೋಧ್ಯೆ ರಾಮಮಂದಿರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೂ ಮೊದಲು ನಡೆದ ಪ್ರತಿಭಟನಾ ಮೆರವಣಿಗೆ).

ಈ ಹಿಂದೆಯೂ ಇದೇ ರೀತಿಯ ಪ್ರತಿಪಾದನೆಯೊಂದಿಗೆ ಮತ್ತೊಂದು ವೀಡಿಯೊ ವೈರಲ್ ಆಗಿತ್ತು, ಫ್ಯಾಕ್ಟ್‌ಚೆಕ್ ಮೂಲಕ ಅದು ಸುಳ್ಳು ಎಂದು ನಿರೂಪಿಸಲಾಗಿದ್ದು. ಅದನ್ನು ಇಲ್ಲಿ ಓದಬಹುದು. ಆದಾಗ್ಯೂ, ‘ಹಿಂದೂ ರಾಷ್ಟ್ರ’ದ ಬೇಡಿಕೆಯನ್ನು ವಿವಿಧ ಗುಂಪುಗಳು ಆಗಾಗ್ಗೆ ಮಾಡುತ್ತಿರುತ್ತವೆ. ಅಂತಹ ಕೆಲವು ಘಟನೆಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಅಯೋಧ್ಯೆಯಲ್ಲಿ ಇತ್ತೀಚೆಗೆ ‘ಹಿಂದೂ ರಾಷ್ಟ್ರ’ಕ್ಕೆ ಒತ್ತಾಯಿಸಿ ನಡೆದ ಮೆರವಣಿಗೆ ಎಂದು ಹಳೆಯ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಿಂದೂ ರಾಷ್ಟ್ರಕ್ಕಾಗಿ ಒತ್ತಾಯಿಸಿ ಇತ್ತೀಚೆಗೆ ಯಾವುದೇ   ಮೆರವಣಿಗೆಗಳು ನಡೆದಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆ ಸುಳ್ಳು .

ಕೃಪೆ ಫ್ಯಾಕ್ಟ್‌ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಸಂಸ್ಕೃತ ಭಾಷೆಯ ಆಧಾರದ ಮೇಲೆ ಸೂಪರ್ ಕಂಪ್ಯೂಟರ್ ರಚನೆ ಮಾಡುವ ಬಗ್ಗೆ NASA ವಿಜ್ಞಾನಿಗಳು ಹೇಳಿದ್ದಾರೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights