ಫ್ಯಾಕ್ಟ್‌ಚೆಕ್: ಸಿಸಿ ಟಿವಿ ಫೂಟೇಜ್ ಮುಂಬೈದಲ್ಲ, ಬೆಂಗಳೂರಿನದ್ದು!
ಹೃದಯಾಘಾತದಿಂದ ವೈದ್ಯರೊಬ್ಬರು ಕುಸಿದು ಬೀಳುವ ಸಿಸಿಟಿವಿ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆಸ್ಪತ್ರೆಯ ಕಾರಿಡಾರ್‌ನಲ್ಲಿ ವೈದ್ಯರೊಬ್ಬರು ಫೈಲ್‌ನಲ್ಲಿ ಬರೆಯುತ್ತಾ ಸಹೋದ್ಯೋಗಿಯೊಂದಿಗೆ ನಿಂತಿರುತ್ತಾರೆ. ಕೊಂಚ ಸಮಯದ ನಂತರ ಆ ವೈದ್ಯರು ಕುಸಿದು ಬೀಳುತ್ತಾರೆ. ಆಕೆಯ ಸಹಾಯಕ್ಕೆ ಆಸ್ಪತ್ರೆ ಸಿಬ್ಬಂದಿ ನೆರವಾಗುತ್ತಾರೆ. ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ ಮುಂಬೈನ ವಿನಾಯಕ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಸುನಿತಾ ಎಂದು ಪ್ರತಿಪಾದಿಸಿ ವಿಡಿಯೋವನ್ನು ವೈರಲ್ ಮಾಡಲಾಗುತ್ತಿದೆ. ವಿಡಿಯೋದ ಸತ್ಯಾಸ್ತಯತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:
ವೈರಲ್ ವಿಡಿಯೋದ CCTV ಫೂಟೇಜ್‌ನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅದೇ ವೀಡಿಯೊವನ್ನು 14 ಡಿಸೆಂಬರ್ 2017 ರಲ್ಲಿ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ವೀಡಿಯೊವನ್ನು ಒಂದಕ್ಕಿಂತ ಹೆಚ್ಚು ಬಾರಿ ಹಂಚಿಕೊಳ್ಳಲಾಗಿದೆ. ವೀಡಿಯೊದ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಮತ್ತಷ್ಟು ಹುಡುಕಾಟ ನಡೆಸಿದಾಗ ಮೂಲ ವಿಡಿಯೊ ನವೆಂಬರ್ 11, 2017 ರ ರಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಸಿ ಟಿವಿ ವೀಡಿಯೊದಲ್ಲಿ ಘಟನೆ ನಡೆದಿರುವ ದಿನಾಂಕ ದಾಖಲಾಗಿದೆ. ಇದೇ ವಿಡಿಯೋವನ್ನು 26 ನವಂಬರ್ ನಲ್ಲಿ ಟ್ವಿಟರ್‌ನಲ್ಲೂ ಹಂಚಿಕೊಳ್ಳಲಾಗಿದೆ.

ಅದೇ ವೀಡಿಯೊವನ್ನು ಅಮೃತೇಶ್ ಸ್ವಾಮಿರಾವ್ ಎಂಬುವವರು 14 ಡಿಸೆಂಬರ್ 2017 ರಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಕರ್ನಾಟಕದ ಬೆಂಗಳೂರಿನ ವಿನಾಯಕ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
‘ನ್ಯೂಸ್‌ಫ್ಲೇರ್’ ಡಿಸೆಂಬರ್ 2017 ರಲ್ಲಿ ಪ್ರಕಟವಾದ ಲೇಖನದಲ್ಲಿ ಅದೇ ವೀಡಿಯೊವನ್ನು ಹಂಚಿಕೊಂಡಿದೆ ಈ ವಿಡಿಯೋ ಬೆಂಗಳೂರಿನದ್ದಾಗಿದೆ ಎಂದು ವರದಿ ಮಾಡಿದೆ. ವಿನಾಯಕ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ಡಾ. ಸುನಿತಾ ಕುಸಿದು ಬಿದ್ದಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಆಸ್ಪತ್ರೆಯ ವಕ್ತಾರ ಡಾ. ಭರತ್, “ಘಟನೆ ನಡೆದ ಕೂಡಲೇ ನಾವು ಅವರನ್ನು ಐಸಿಯುಗೆ ಸೇರಿಸಿದೆವು ಮತ್ತು ಇಂಟ್ರಾಕಾರ್ಡಿಯಾಕ್ ಇಂಜೆಕ್ಷನ್ ಸೇರಿದಂತೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡಿದೆವು. ಆದರೆ ಅವರು ಸ್ಪಂದಿಸದೇ ಸಾವನ್ನಪ್ಪಿದರು. ಅವರು ಮಧುಮೇಹಿಯಾಗಿದ್ದರು. ಈ ವೇಳೆ ಅವರ ಸಕ್ಕರೆ ಮಟ್ಟ ತುಂಬಾ ಹೆಚ್ಚಿತ್ತು. ಆದರೆ ಅವರು ತಮ್ಮ ಅನಾರೋಗ್ಯ ಸ್ಥಿತಿಯ ಬಗ್ಗೆ ಆಸ್ಪತ್ರೆಯಲ್ಲಿ ತಿಳಿಸಿರಲಿಲ್ಲ” ಎಂದು ಹೇಳಿದ್ದಾರೆ.

2017 ರಲ್ಲಿ ಕೆಲವು ವೆಬ್‌ಸೈಟ್‌ಗಳು ಪ್ರಕಟಿಸಿದ ವರದಿಗಳನ್ನು ಮತ್ತು ವಿಡಿಯೋಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಇದನ್ನು ಪರಿಶೀಲಿಸಲು ಬೆಂಗಳೂರಿನ ವಿನಾಯಕ ಆಸ್ಪತ್ರೆಯನ್ನು ಸಂಪರ್ಕಿಸಲಾಯಿತು. ಆಸ್ಪತ್ರೆಯ ಸಿಬ್ಬಂದಿಗಳ ಪ್ರಕಾರ, “ಇದು ಆರು ವರ್ಷಗಳ ಹಿಂದೆ ನಮ್ಮ ಆಸ್ಪತ್ರೆಯಲ್ಲಿ ನಡೆದ ಘಟನೆ. ಸ್ಥಳದಲ್ಲಿದ್ದ ವೈದ್ಯೆ ಡಾ. ಸುನಿತಾ. ಅವರು ಮಧುಮೇಹಿ. ಹೃದಯಾಘಾತದಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ” ಎಂದು ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆದ ನಂತರ ಆಸ್ಪತ್ರೆಗೆ ಈ ಕುರಿತು ಹಲವು ಕರೆಗಳು ಬಂದಿವೆ ಎಂದು ಆಸ್ಪತ್ರೆ ಸಿಬ್ಬಂದಿಗಳು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ವೈದ್ಯರೊಬ್ಬರು ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ಕುಸಿದ್ದು ಬಿದ್ದು ಸಾವಿಗೀಡಾದ ಘಟನೆ ಮುಂಬೈನದ್ದಲ್ಲ, ಈ ಘಟನೆ ಬೆಂಗಳೂರಿನ ವಿನಾಯಕ ಆಸ್ಪತ್ರೆಯದ್ದು. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆ ತಪ್ಪಾಗಿದೆ.
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಜಾಗೃತಿ ಉದ್ದೇಶಕ್ಕೆ ಮಾಡಿದ ವಿಡಿಯೊವನ್ನು ಮುಸ್ಲಿಂ ವ್ಯಾಪಾರಿಯ ಮೋಸ ಎಂಬ ಸುಳ್ಳು ಹೇಳಿಕೆಯೊಂದಿಗೆ ವೈರಲ್!

