ಫ್ಯಾಕ್ಟ್‌ಚೆಕ್: ಭಗವಂತ್ ಮಾನ್ ಬೈಕ್ ಕಳ್ಳತನ ಮಾಡಿದ್ದಕ್ಕಾಗಿ 12 ವರ್ಷಗಳ ಹಿಂದೆ ಬಂಧನವಾಗಿದ್ದು ನಿಜವೆ?

ಪಂಜಾಬ್‌ನ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಕುರಿತಾದ ಪೊಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು , ಭಗಂವತ್ ಮಾನ್ ಅವರ ಹಳೆಯ ಫೋಟೊವೊಂದನ್ನು ಬಳಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆ ಮಾಡುತ್ತಿದ್ದಾರೆ. ಭಗವಂತ್ ಮಾನ್ ಮತ್ತು ಸ್ನೇಹಿತರು 12 ವರ್ಷಗಳ ಹಿಂದೆ ಬೈಕ್ ಕಳ್ಳತನ ಮಾಡಿದ್ದ ಕಾರಣಕ್ಕೆ ಪಂಜಾಬ್ ಪೊಲೀಸರು ಅವರನ್ನು ಬಂದಿಸಿದ್ದರು ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಭಗವಂತ್ ಮಾನ್ ಅವರ ಕುರಿತು ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.

https://twitter.com/022BJP/status/1509502641868804105?ref_src=twsrc%5Etfw%7Ctwcamp%5Etweetembed%7Ctwterm%5E1509502641868804105%7Ctwgr%5E%7Ctwcon%5Es1_&ref_url=https%3A%2F%2Fwww.altnews.in%2Fold-photo-falsely-viral-as-punjab-cm-bhagwant-mann-was-arrested-for-bike-theft%2F

ಫೇಸ್‌ಬುಕ್‌ನಲ್ಲೂ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್:

ಭಗವಂತ್ ಮಾನ್ ಬಗ್ಗೆ ಈ ಹಿಂದೆಯೂ ವ್ಯಂಗ್ಯ ಮತ್ತು ಹಾಸ್ಯದ ರೀತಿಯ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು. ಅದರ ಕುರಿತು ensuddi.com ಫ್ಯಾಕ್ಟ್‌ಚೆಕ್ ಕೂಡ ಮಾಡಿತ್ತು. ಹಾಗಾಗಿ ವೈರಲ್ ಆಗಿರುವ ಬೈಕ್ ಕಳ್ಳತನ ಆರೋಪದ ಪೋಸ್ಟ್‌ನ ಫ್ಯಾಕ್ಟ್‌ ಚೆಕ್ ಮಾಡಿದಾಗ ಅಸಲೀಯತ್ತು ಏನೆಂದು ತಿಳಿದು ಬಂದಿದೆ.

ಪಂಜಾಬ್ ಸಿಎಂ ಭಗವಂತ್ ಮಾನ್
ಪಂಜಾಬ್ ಸಿಎಂ ಭಗವಂತ್ ಮಾನ್

ವೈರಲ್ ಫೋಟೋ ದ ಮದ್ಯದಲ್ಲಿ ಕುಳಿತರುವ ವ್ಯಕ್ತಿ ಭಗವಂತ್ ಮಾನ್

ವೈರಲ್ ಫೋಟೋದ ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಲಾಗಿದ್ದು,  ಪಂಜಾಬಿ ಗಾಯಕ ಮತ್ತು ನಟ ಕರಮ್‌ಜಿತ್ ಅನ್ಮೋಲ್ ಅವರ ಫೇಸ್‌ಬುಕ್ ಪೋಸ್ಟ್‌ಗೆ ನಲ್ಲಿ ಭಗವಂತ್ ಮಾನ್ ಅವರ ಅದೇ ಫೋಟೋವನ್ನು ಹಂಚಿಕೊಂಡಿರುವ ಪೋಸ್ಟ್ ಲಭ್ಯವಾಗಿದೆ. ಫೋಟೋದೊಂದಿಗೆ  ‘ಭಗವಂತ್ ಮಾನ್ ಮತ್ತು @ಮಂಜಿತ್ಸಿಧು ಅವರೊಂದಿಗೆ ಹೋಳಿ ನೆನಪುಗಳು’ ಎಂದು ಬರೆಯಲಾಗಿದೆ.  ಕರಮ್ಜಿತ್ ಅನ್ಮೋಲ್ ಭಗವಂತ್ ಮಾನ್ ಅವರ ಬಾಲ್ಯದ ಸ್ನೇಹಿತ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ಮೇಲೆ ತಿಳಿಸಿದ ಪೋಸ್ಟ್‌ನಲ್ಲಿ ಕರಮ್‌ಜಿತ್ ಅನ್ಮೋಲ್ ಉಲ್ಲೇಖಿಸುತ್ತಿದ್ದ ಮಂಜಿತ್ ಸಿಧು ಅವರನ್ನು ನ್ಯೂಸ್‌ ಚೆಕರ್ ಸಂದರ್ಶನ ಮಾಡಿದ್ದು ಅದರ ವಿಡಿಯೋ ಯೂಟ್ಯೂಬ್‌ನಲ್ಲಿ ಲಭ್ಯವಾಗಿದೆ. ಅವರ ಪತ್ರವ್ಯವಹಾರದಲ್ಲಿ, ಭಗವಂತ್ ಮಾನ್ ಪಕ್ಕದಲ್ಲಿ ಕಪ್ಪು ಟಿ-ಶರ್ಟ್‌ನಲ್ಲಿ ಕೂತಿರುವುದು  ಅವರೇ ಎಂದು ಸಿಧು ಖಚಿತಪಡಿಸಿದರು.

ಇದಲ್ಲದೆ, ಸಿಧು ಪ್ರಕಾರ, ನ್ಯೂಸ್‌ ಚೆಕರ್ ವರದಿ ಮಾಡಿದಂತೆ ‘ವೈರಲ್ ಫೋಟೋದೊಂದಿಗೆ ಮಾಡಲಾಗುತ್ತಿರುವ ಪ್ರತಿಪಾದನೆಯು ನಕಲಿಯಾಗಿದೆ. ಈ ಫೋಟೋವನ್ನು 1994 ಅಥವಾ 1995 ರಲ್ಲಿ ಪಟಿಯಾಲಾದಲ್ಲಿ ತೆಗೆಯಾಗಿದೆ ಭಗವಂತ್ ಮಾನ್ ನನ್ನ ಕಾಲೇಜು ಕಾಲದ ಗೆಳೆಯ ಎಂದು ಹೇಳಲಾಗಿದೆ. ಆ ವೇಳೆ ಕೆನಡಾದ ಗಾಯಕ ಹರ್ಭಜನ್ ಮಾನ್ ಭಾರತಕ್ಕೆ ಬಂದಿದ್ದರು. ಹೋಳಿ ಹಬ್ಬದಂದು ಅವರ ಮನೆಯ ಛಾವಣಿಯ ಮೇಲೆ ಚಿತ್ರ ತೆಗೆಯಲಾಗಿದ್ದು. ಈ ಸಂದರ್ಭದಲ್ಲಿ, ಭಗವಂತ್ ಮಾನ್, ಕರಮ್‌ಜಿತ್ ಅನ್ಮೋಲ್ ಮತ್ತು ಹರ್ಭಜನ್ ಮಾನ್ ಜೊತೆಯಲ್ಲಿ ಇದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಭಗವಂತ್ ಮಾನ್ ಮತ್ತು ಸ್ನೇಹಿತರು ಹೋಳಿಯನ್ನು ಆಚರಿಸುತ್ತಿರುವ ಹಳೆಯ ಫೋಟೊವನ್ನು ಭಗವಂತ್ ಮಾನ್ ಅವರು ಬೈಕ್ ಕಳ್ಳತನ ಮಾಡಿದ್ದಾರೆ ಎಂಬ ಸುಳ್ಳು ಹೇಳೀಕೆಯೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ ಭಗವಂತ್‌ ಮಾನ್‌ ಅವರಿಗೂ ಬೈಕ್‌ ಕಳ್ಳತನವಾಗಿರುವ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ. ಇದರಿಂದ ವೈರಲ್‌ ಆಗಿರುವ ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಶಾರೂಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಬಹಿಷ್ಕರಿಸಿ ಎಂದು ಯೋಗಿ ಆದಿತ್ಯನಾಥ್ ಹೇಳಿಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights