ಬೆಂಗಳೂರಿಗೆ ಬಂತು ಆಕ್ಸಿಜನ್ : ಸುಧಾರಿಸಲಿದೆ ರಾಜ್ಯದ ಉಸಿರುಗಟ್ಟೋ ಪರಿಸ್ಥಿತಿ!
ರಾಜ್ಯದಲ್ಲಿ ಕೊರೊನಾ ಅಬ್ಬರದ ನಡುವೆ ಜೀವ ಕಳೆ ಬಂದಂತಾಗಿದೆ. ಇಂದು ಬೆಂಗಳೂರಿಗೆ ಆಕ್ಸಿಜನ್ ಬಂದಿದ್ದು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಕೊರೊನಾದಿಂದ ಪಾರಾಗಲು ಅವಶ್ಯಕ ಆಕ್ಸಿಜನ್ ಕೊರತೆ ಬಗೆಹರಿದು ಸದ್ಯ ಕೊರೊನಾ ಹಾಟ್ ಸ್ಪಾಟ್ ಆದ ಬೆಂಗಳೂರಿಗೆ ಆಕ್ಸಿಜನ್ ಬಂದಿದೆ. 6 ಕಂಟೈನರ್ ನಲ್ಲಿ 120 ಟನ್ ಲಿಕ್ವಿಡ್ ಆಕ್ಸಿಜನ್ ತರಲಾಗಿದೆ. ಎಕ್ಸಪ್ರೆಸ್ ಟ್ರೈನ್ ಮೂಲಕ ವೈಟ್ ಫೀಲ್ಡ್ ಗೆ ಆಕ್ಸಿಜನ್ ಬಂದಿದೆ.
ಇನ್ನೂ ಆಕ್ಸಿಜನ್ ನನ್ನು ಯಾವೆಲ್ಲಾ ಆಸ್ಪತ್ರೆಗಳಿಗೆ ವರ್ಗಾಯಿಸಬೇಕು..? ಎಷ್ಟು ಪ್ರಮಾಣದಲ್ಲಿ ಕಳುಹಿಸಬೇಕು..? ಎಲ್ಲೆಲ್ಲಿ ಎಷ್ಟೆಷ್ಟು ಅವಶ್ಯಕತೆ ಇದೆ ಎನ್ನುವ ಬಗ್ಗೆ ಉನ್ನತ ಮಟ್ಟದ ಸಭೆಯಾಗಬೇಕಿದೆ. ಇಂದು ಸಭೆ ನಡೆಸುವ ಸಾಧ್ಯತೆ ಇದ್ದು, ಚರ್ಚೆ ಬಳಿಕ ಆಸ್ಪತ್ರೆಗಳಿಗೆ ವರ್ಗಾಯಿಸಲಾಗುತ್ತದೆ ಎನ್ನಲಾಗುತ್ತಿದೆ.