ಉತ್ತರ ಕನ್ನಡ: ಮಹಿಳೆಯ ಖಾಸಗಿ ವಿಡಿಯೋ ಹರಿಬಿಟ್ಟ ಆರೋಪ; ಬಿಜೆಪಿ ಮುಖಂಡನ ವಿರುದ್ದ ಪ್ರಕರಣ ದಾಖಲು!

ಮಹಿಳೆಯೊಬ್ಬರ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದ ಮೇಲೆ ಉತ್ತರ ಕನ್ನಡದ ಜಿಲ್ಲೆಯ ಹೊನ್ನಾವರ ನಗರ ಬಿಜೆಪಿ ಘಟಕದ ಅಧ್ಯಕ್ಷನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತನ್ನ ಖಾಸಗಿ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ತಮ್ಮ ಮಾನಹಾನಿ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಉಮೇಶ್‌ ಸಾರಂಗ್‌ ವಿರುದ್ದ ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಆಟೋ ಚಾಲಕನಾಗಿರುವ ಉಮೇಶ್ ಸಾರಂಗ್ ಒಮ್ಮೆ ಈ ಮಹಿಳೆ ಆಟೋದಲ್ಲಿ ಪ್ರಯಾಣಿಸುವಾಗ ಸಲುಗೆಯಿಂದ ಮಾತನಾಡಿ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ನಂತರ ಚಾಟಿಂಗ್ ಮೂಲಕ ಸ್ನೇಹವನ್ನು ದುರುಪಯೋಗಪಡಿಸಿಕೊಳ್ಳಲು ಆರಂಭಿಸಿದ ಆತ, ಆಕೆಯ ಸ್ನಾನದ ವಿಡಿಯೋವನ್ನು ಕಳುಹಿಸುವಂತೆ ಬೇಡಿಕೆ ಇಟ್ಟಿದ್ದ. ಕಳಿಸದಿದ್ದರೆ, ಆಕೆಯ ಗಂಡನಿಗೆ ಹೇಳಿ ಮರ್ಯಾದೆ ತೆಗೆಯುವುದಾಗಿ ಬೆದರಿಸಿದ್ದ.

ಆತನ ಒತ್ತಡಕ್ಕೆ ಮಣಿದ ಮಹಿಳೆ ವಾಟ್ಸಪ್‍ನಲ್ಲಿ ವಿಡಿಯೋ ಕಳುಹಿಸಿದ್ದಾರೆ. ಆ ವಿಡಿಯೋವನ್ನು ಆತ ಇತರರೊಂದಿಗೆ ಹಂಚಿಕೊಂಡಿದ್ಉದ, ವಿಡಿಯೋ ವೈರಲ್‌ ಆಗಿದೆ. ಆತ ಮಾನಹಾನಿಗೆ ಕಾರಣನಾಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: ಕೆಆರ್‌ ಪೇಟೆ: ದಲಿತರ ಮೇಲೆ ಮಾರಣಾಂತಿಕ ಹಲ್ಲೆ; 27 ಮಂದಿ ಸವರ್ಣೀಯರ ವಿರುದ್ದ FIR

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights