ದೇಶದಲ್ಲಿ ಕೊರೊನಾ ಕೇಸ್ ಕೊಂಚ ಇಳಿಕೆ: ಏಕದಿನ ಪ್ರಕರಣಗಳಲ್ಲಿ ಮಹಾರಾಷ್ಟ್ರ ಮೀರಿಸಿದ ಕರ್ನಾಟಕ!

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಎಂದಿಗಿಂತ ಕೊಂಚ ಕಡಿಮೆಯಾಗಿದ್ದು ಕಳೆದ 24 ಗಂಟೆಯಲ್ಲಿ 3.29 ಲಕ್ಷ ಹೊಸ ಕೇಸ್ ದಾಖಲಾಗಿವೆ.

ಭಾರತದಲ್ಲಿ ಎಂದಿಗಿಂತ ಪ್ರಕರಣಗಳ ಸಂಖ್ಯೆ ಕುಸಿದಿದ್ದು, ಕರ್ನಾಟಕ ಏಕದಿನ ಪ್ರಕರಣಗಳಲ್ಲಿ ಮಹಾರಾಷ್ಟ್ರವನ್ನು ಮೀರಿಸಿದೆ. ಭಾರತವು ಒಂದು ದಿನದಲ್ಲಿ 3,29,942 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ಈ ಮೂಲಕ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 2,29,92,517 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

3,876 ದೈನಂದಿನ ಸಾವುಗಳೊಂದಿಗೆ ದೇಶದಲ್ಲಿ ಒಟ್ಟು ಕೊರೊನಾ ಸಾವಿನ ಸಂಖ್ಯೆ 2,49,992 ಕ್ಕೆ ಏರಿಕೆಯಾಗಿದೆ.

ಸಕ್ರಿಯ ಪ್ರಕರಣಗಳು 37,15,221 ಕ್ಕೆರಿಕೆಯಾಗಿದ್ದು, ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 1,90,27,304 ರಷ್ಟಿದೆ. ಒಂದು ದಿನದಲ್ಲಿ 3,56,082 ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಕಳೆದ 24 ಗಂಟೆಯಲ್ಲಿ ದಾಖಲಾದ  ದೇಶದ  3,29,942 ಪ್ರಕರಣಗಳಲ್ಲಿ 39,305 ಪ್ರಕರಣಗಳು ಕರ್ನಾಟಕದಲ್ಲಿ, 37,236 ಪ್ರಕರಣಗಳು ಮಹಾರಾಷ್ಟ್ರದಲ್ಲಿ, 28,978 ಪ್ರಕರಣಗಳು ತಮಿಳುನಾಡಿನಲ್ಲಿ, ಕೇರಳದಲ್ಲಿ 27,487 ಪ್ರಕರಣಗಳು ಮತ್ತು ಉತ್ತರ ಪ್ರದೇಶದಲ್ಲಿ 21,277 ಪ್ರಕರಣಗಳು ದಾಖಲಾಗಿವೆ.

ಭಾರತದ ಕೋವಿಡ್ -19 ಪ್ರಕರಣಗಳು ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ ದಾಟಿದೆ. ಇದು ಸೆಪ್ಟೆಂಬರ್ 28 ರಂದು 60 ಲಕ್ಷ ದಾಟಿದ್ದು, ಅಕ್ಟೋಬರ್ 11 ರಂದು 70 ಲಕ್ಷ ದಾಟಿದೆ. ಅಕ್ಟೋಬರ್ 29 ರಂದು 80 ಲಕ್ಷ, ನವೆಂಬರ್ 20 ರಂದು 90 ಲಕ್ಷ ಮತ್ತು ಡಿಸೆಂಬರ್ 19 ರಂದು 1 ಕೋಟಿ ಗಡಿ ದಾಟಿದೆ. ಭಾರತ ಮೇ 4 ರಂದು 2 ಕೋಟಿಯ ಭೀಕರ ಮೈಲಿಗಲ್ಲು ದಾಟಿದೆ.

ಸೋಮವಾರ, ಭಾರತ 24 ಗಂಟೆಗಳ ಅವಧಿಯಲ್ಲಿ 3,66,161 ಹೊಸ ಕೋವಿಡ್ -19 ಪ್ರಕರಣಗಳನ್ನು ಮತ್ತು 3,754 ಸಾವುಗಳನ್ನು ಕಂಡಿದೆ. ಒಂದು ದಿನದಲ್ಲಿ ದಾಖಲಾದ 3,66,161 ಹೊಸ ಕೋವಿಡ್ -19 ಪ್ರಕರಣಗಳಲ್ಲಿ ಶೇಕಡಾ 73.91 ರಷ್ಟು ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿ ಸೇರಿವೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಉತ್ತರ ಪ್ರದೇಶ, ರಾಜಸ್ಥಾನ, ಆಂಧ್ರಪ್ರದೇಶ, ಗುಜರಾತ್,ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಹರಿಯಾಣ, ಬಿಹಾರ ಮತ್ತು ಮಧ್ಯಪ್ರದೇಶವು ಭಾರತದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇಕಡಾ 82.89 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights