ಫ್ಯಾಕ್ಟ್‌ಚೆಕ್: ಗುಜರಾತ್‌ನಲ್ಲಿ ತಂದೆ – ಮಗಳು ಮದುವೆ ಆಗಿದ್ದಾರೆ ಎಂಬುದು ಸುಳ್ಳು ಸುದ್ದಿ

ಇತ್ತೀಚೆಗೆ ಗುಜರಾತ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಮಗಳನ್ನು ಪ್ರೀತಿಸಿ  ಮದುವೆಯಾಗಿದ್ದಾನೆ ಎಂದು ಹೇಳುವ ಕೊಲಾಜ್‌ ಮಾಡಿರುವ ಫೋಟೋಗಳೊಂದಿಗೆ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಧ್ಯವಯಸ್ಸಿನ ಪುರುಷನೊಬ್ಬ ಯುವತಿಯನ್ನು ಮದುವೆಯಾಗುತ್ತಿರುವ ಚಿತ್ರ ಮತ್ತು ಮದುವೆ ನೋಂದಣಿ ಪ್ರಮಾಣಪತ್ರದ ಚಿತ್ರವನ್ನು ಸಹ ಹಂಚಿಕೊಂಡಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಧು ಮತ್ತು ವರನ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು ಕೆಲವು ಸ್ಥಳೀಯ ಗುಜರಾತಿ ಸುದ್ದಿ ವೆಬ್‌ಸೈಟ್‌ಗಳು ಇತ್ತೀಚೆಗೆ ಪ್ರಕಟಿಸಿದ  ಹಲವು ಲೇಖನಗಳು ಲಭ್ಯವಾಗಿವೆ. ಮದುವೆ ಆಗಿರುವ ದಂಪತಿಗಳ ಇದೇ ರೀತಿಯ ಚಿತ್ರಗಳು ಕಂಡುಬಂದಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಯುವತಿಯೊಬ್ಬಳು ತಂದೆಯ ವಯಸ್ಸಿನ ವ್ಯಕ್ತಿಯನ್ನು ಪ್ರೀತಿಯ ಹೆಸರಿನಲ್ಲಿ ಮದುವೆಯಾಗಿದ್ದಾಳೆ ಎಂದು ಈ ಲೇಖನಗಳು ವರದಿ ಮಾಡಿದೆ. ಈ ಲೇಖನಗಳ ಪ್ರಕಾರ, ಗುಜರಾತ್‌ನ ಭಾವನಗರ ಜಿಲ್ಲೆಯ ನಿವಾಸಿ ದಿನೇಶ್ ಕುಮಾರ್ ಅದೇ ರಾಜ್ಯದ ಸುರೇಂದ್ರ ನಗರ ಜಿಲ್ಲೆಯ ಜಪಾಡಿಯಾ ಶಿತಾಲ್ಬೆನ್ ಅವರನ್ನು ವಿವಾಹವಾಗಿದ್ದಾರೆ. ಗುಜರಾತ್‌ನ ಬೊಟಾದ್ ನಗರದಲ್ಲಿ ಈ ಮದುವೆ ನಡೆದಿದೆ ಎನ್ನಲಾಗಿದೆ.

ಈ ಘಟನೆಯ ಸಂಪೂರ್ಣ ವಿವರಗಳನ್ನು ವರದಿ ಮಾಡಿ, ಕೆಲವು ಸುದ್ದಿ ಲೇಖನಗಳು ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಅದೇ ಮದುವೆ ನೋಂದಣಿ ಪ್ರಮಾಣ ಪತ್ರದ ಚಿತ್ರವನ್ನು ಪ್ರಕಟಿಸಿವೆ. ಮದುವೆ ನೋಂದಣಿ ಪ್ರಮಾಣ ಪತ್ರವನ್ನು ಕೂಲಂಕುಷವಾಗಿ ಗಮನಿಸಿದಾಗ ಮದುವೆ ಪ್ರಮಾಣ ಪತ್ರದಲ್ಲಿ ನಮೂದಿಸಿರುವ ವರನ ಹೆಸರು ಮತ್ತು ವಧುವಿನ ತಂದೆಯ ಹೆಸರು ಬೇರೆ ಬೇರೆಯಾಗಿರುವುದನ್ನು ಕಾಣಬಹುದು. ಮದುವೆ ನೋಂದಣಿ ಪ್ರಮಾಣಪತ್ರದಲ್ಲಿ ನಮೂದಿಸಲಾದ ಕುಟುಂಬದ ವಿವರಗಳ ಪ್ರಕಾರ, ಚಿತ್ರದಲ್ಲಿರುವ ವಧು-ವರರು ಎರಡು ಬೇರೆ ಬೇರೆ ಕುಟುಂಬಗಳಿಗೆ ಸೇರಿದವರು ಎಂದು ಖಚಿತಪಡಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಈ ಫೋಟೋದಲ್ಲಿ ಮದುವೆ ಆಗಿರುವ  ವಿವಾಹಿತ ದಂಪತಿಗಳು ತಂದೆ ಮತ್ತು ಮಗಳಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಮೆಕ್ಕಾದಲ್ಲಿ 1480ರಲ್ಲಿ ಶಿವಲಿಂಗ ಇತ್ತು ಎಂಬುದು ನಿಜವಲ್ಲ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights