ಫ್ಯಾಕ್ಟ್‌ಚೆಕ್: ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರ ಅಂತ್ಯಕ್ರಿಯೆಯನ್ನು ಇಸ್ಲಾಮಿಕ್ ವಿಧಾನದಲ್ಲಿ ಮಾಡಲಾಗಿದೆ ಎಂಬುದು ಸುಳ್ಳು

ಇಂದಿರಾ ಗಾಂಧಿ ಅವರ ಮೃತದೇಹದ ಮುಂದೆ ರಾಹುಲ್ ಮತ್ತು ರಾಜೀವ್ ಗಾಂಧಿ ಅವರು  (ಇಸ್ಲಾಮಿಕ್ ಪ್ರಾರ್ಥನೆಗಳು) ಮುಸ್ಲಿಂ ಧಾರ್ಮಿಕ ವಿಧಾನದಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಮಾಜಿ ಪ್ರಧಾನಿಗಳಾದ ದಿ. ರಾಜೀವ್ ಗಾಂಧಿ ಮತ್ತು ಪಿ.ವಿ ನರಸಿಂಹರಾವ್ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಾಹುಲ್ ಗಾಂಧಿ ಮತ್ತು ಇತರೆ ಕಾಂಗ್ರೆಸ್ ನಾಯಕರು ಕೂಡ ಇದ್ದಾರೆ. ರಾಹುಲ್ ಮತ್ತು ರಾಜೀವ್ ಗಾಂಧಿ ಚಿತ್ರಗಳನ್ನು ಮಾರ್ಕ್ ಮಾಡಲಾಗಿದೆ.

ಈ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಿ ವಾಸ್ತವ ಏನೆಂದು ತಿಳಿಸುವಂತೆ Ensuddi.com ವಾಟ್ಸಾಪ್ ಗೆ ವಿನಂತಿಗಳು ಬಂದಿದ್ದವು, ಹಾಗಾಗಿ ಈ  ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವಾಟ್ಸಾಪ್ ಮತ್ತು ಫೇಸ್‌ ಬುಕ್‌ನಲ್ಲಿ ಹಂಚಿಕೊಳ್ಳಲಾಗಿರುವ ಪೋಟೊವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ ಪೋಸ್ಟ್‌ಗೆ ಸಂಬಂಧಿಸಿದಂತೆ ಇಂಡಿಯಾ ಟುಡೆ  ಫ್ಯಾಕ್ಟ್‌ಚೆಕ್ ಮಾಡಿರುವ ವರದಿ ಲಭ್ಯವಾಗಿದೆ. ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆ ತಪ್ಪು ಎಂದು ಕಂಡುಹಿಡಿದಿದೆ. ವೈರಲ್ ಪೋಸ್ಟ್‌ನಲ್ಲಿರುವ ಫೋಟೋದಲ್ಲಿ ಇರುವ ಚಿತ್ರವು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಅಂತ್ಯಕ್ರಿಯೆಗೆ ಸಂಬಂಧಿಸಿದ್ದಲ್ಲ, ಅಫ್ಘಾನ್ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಖಾನ್ ಅಬ್ದುಲ್ ಗಫಾರ್ ಖಾನ್ ಅವರ ಅಂತ್ಯಕ್ರಿಯೆಗೆ ಸಂಬಂಧಿಸಿದ್ದು ಎಂದು ಹೇಳಿದೆ.

ಈ ವೈರಲ್ ಪೋಸ್ಟ್ ಈ ಹಿಂದೆಯೂ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿತ್ತು.  ಬೂಮ್ ಲೈವ್ ಈ ಪೋಸ್ಟ್‌ನ ಪ್ರತಿಪಾದನೆಯನ್ನು ನಿರಾಕರಿಸಿತ್ತು. ರಿವರ್ಸ್ ಇಮೇಜ್ ಹುಡುಕಾಟದ ಸಹಾಯದಿಂದ, ವೈರಲ್ ಚಿತ್ರವನ್ನು ಉತ್ತರ ವಜಿರಿಸ್ತಾನದ ರಾಜಕಾರಣಿ ಮೊಹ್ಸಿನ್ ದಾವರ್ ಅವರ ಟ್ವೀಟ್‌ನಲ್ಲಿ ಮತ್ತು skyscrapercity.com ನ ಆರ್ಕೈವ್ ಮಾಡಿದ ಫೋಟೋಗಳಲ್ಲಿ ಕಾಣಬಹುದು. ಇದು ಬಚ್ಚಾಖಾನ್ ಅವರ ಅಂತ್ಯಕ್ರಿಯೆಯ ಚಿತ್ರವಾಗಿದ್ದು, ಅಲ್ಲಿ ಗಾಂಧಿ ಗ್ಯಾಮಿಲಿ ಮತ್ತು ಇತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು ಎಂದು ಹೇಳಲಾಗಿದೆ.

ಗಫಾರ್ ಖಾನ್ ಜನವರಿ 20, 1988 ರಂದು ನಿಧನ ಹೊಂದಿದ್ದು,  ಭಾರತದ ಪ್ರಧಾನಿ ರಾಜೀವ್ ಗಾಂಧಿ ಅವರು ಖಾನ್‌ಗೆ ಗೌರವ ಸಲ್ಲಿಸಲು ಪೇಶಾವರಕ್ಕೆ ಭೇಟಿ ನೀಡಿದ್ದರು ಎಂದು ನಿಧನದ ಮರುದಿನ ಪ್ರಕಟವಾದ ನ್ಯೂಯಾರ್ಕ್ ಟೈಮ್ಸ್  ನ ವರದಿಯಲ್ಲಿ ಬರೆದಿದೆ.

OutLookನ ಇನ್ನೊಂದು ಲೇಖನದಲ್ಲಿ ರಾಜೀವ್ ಗಾಂಧಿಯವರ ಖಾನ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದುವುದನ್ನು ಉಲ್ಲೇಖಿಸಲಾಗಿದೆ. ಅಬ್ದುಲ್ ಗಫಾರ್ ಖಾನ್ ಅವರ ಅಂತ್ಯಕ್ರಿಯೆಯಲ್ಲಿ ಮಾಜಿ ಪ್ರಧಾನಿ ಉಪಸ್ಥಿತರಿದ್ದರು ಎಂದು ಉಲ್ಲೇಖಿಸಿರುವ ವರದಿಗಳನ್ನು ನಾವು ಗೂಗಲ್‌ನಲ್ಲಿ ಕಂಡುಕೊಂಡಿದ್ದೇವೆ.

ಇಂದಿರಾ ಗಾಂಧಿ ಮತ್ತು ಗಫಾರ್ ಖಾನ್ ಅವರ ಸಾವಿನ ಸಮಯದಲ್ಲಿ ರಾಹುಲ್ ಗಾಂಧಿಯವರ ವಯಸ್ಸನ್ನು ಹೋಲಿಸಲಾಗಿದ್ದು, ಇಂದಿರಾ ಗಾಂಧಿಯವರ ಮರಣದ ಸಮಯದಲ್ಲಿ, ರಾಹುಲ್ ಗಾಂಧಿಯ ವಯಸ್ಸು 14 ವರ್ಷ. ಅಬ್ದುಲ್ ಗಫಾರ್ ಖಾನ್ ನಿಧನರಾದಾಗ, ರಾಹುಲ್ ಗಾಂಧಿ ಅವರಿಗೆ 18 ವರ್ಷ. ಅವರ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ತೆಗೆದಿರುವ ಫೋಟೋಗಳಲ್ಲಿ ಇರುವ ವ್ಯತ್ಯಾಸವನ್ನು ಇಲ್ಲಿ ಕಾಣಬಹುದು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋ ಇಂದಿರಾ ಗಾಂಧಿಯವರ ಅಂತ್ಯಕ್ರಿಯೆಗೆ ಸಂಬಂಧಿಸಿದ್ದಲ್ಲಾ ಎಂದು ಇದು ಸೂಚಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋ ಇಂದಿರಾ ಗಾಂಧಿಯವರ ಅಂತ್ಯಕ್ರಿಯೆಗೆ ಸಂಬಂಧಿಸಿದ್ದಲ್ಲಾ ಎಂದು ಇದು ಸೂಚಿಸಿದೆ.

ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಅಕ್ಟೋಬರ್ 31, 1984 ರಂದು ನಿಧನರಾದರು ಮತ್ತು ಅವರ ಅಂತ್ಯಕ್ರಿಯೆಯಲ್ಲಿ ಕುಟುಂಬವು ಹಿಂದೂ ಸಂಪ್ರದಾಯಗಳನ್ನು ಅನುಸರಿಸಿತು. ನವೆಂಬರ್ 4, 1984 ರಂದು ಪ್ರಕಟವಾದ ವಾಷಿಂಗ್ಟನ್ ಪೋಸ್ಟ್ ವರದಿಯು ಅಂತ್ಯಕ್ರಿಯೆಯನ್ನು ನೆರೆವೇರಿಸಿದ ವಿಧಿ ವಿಧಾನಗಳನ್ನು ವಿವರಿಸುತ್ತದೆ. ಆ ಸಮಯದಲ್ಲಿ ಅಮೇರಿಕನ್ ಸ್ಟಾಕ್ ಫೋಟೋ ಏಜೆನ್ಸಿ ಗೆಟ್ಟಿ ಇಮೇಜಸ್ ಚಿತ್ರೀಕರಿಸಿದ ಛಾಯಾಚಿತ್ರಗಳು ರಾಜೀವ್, ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರು ಇಂದಿರಾ ಗಾಂಧಿಯವರ ಸುಡುವ ಚಿತೆಯ ಮುಂದೆ ನಿಂತು ಹಿಂದೂ ಧಾರ್ಮಿಕ ಕ್ರಿಯೆಗಳನ್ನು ನಡೆಸುತ್ತಿರುವುದನ್ನು ತೋರಿಸುತ್ತವೆ.

ಆದ್ದರಿಂದ ಇಂದಿರಾ ಗಾಂಧಿಯವರ ಅಂತ್ಯಸಂಸ್ಕಾರವನ್ನು ಹಿಂದೂ ಧಾರ್ಮಿಕ ವಿಧಿಗಳ ಪ್ರಕಾರ ನಡೆಸಲಾಯಿತು ಎಂಬುದು ಸ್ಪಷ್ಟವಾಗಿದೆ. ಆದರೆ ಈ ಸುಳ್ಳು ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಿ. ಇಂದಿರಾ ಗಾಂಧಿಯವರ ಅಂತ್ಯಸಂಸ್ಕಾರವನ್ನು ಹಿಂದೂ ಧಾರ್ಮಿಕ ವಿಧಿಗಳ ಪ್ರಕಾರ ನಡೆಸಲಾಯಿತು ಎಂಬುದು ಸ್ಪಷ್ಟವಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹೇಳಿಕೆ ವೈರಲ್ ಆಗಿದೆ.

 

ಒಟ್ಟಾರೆಯಾಗಿ ಹೇಳುವುದಾದರೆ ಖಾನ್ ಅಬ್ದುಲ್ ಗಫಾರ್ ಖಾನ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ಇಸ್ಲಾಂ ಧಾರ್ಮಿಕ ವಿಧಾನಗಳಲ್ಲಿ ಮಾಡಿದ ಪ್ರಾರ್ಥನೆಯನ್ನು, ಮಾಜಿ ಪ್ರಧಾನಿ ಇಂಧಿರಾ ಗಾಂಧಿಯವರ ಅಂತ್ಯಕ್ರಿಯೆಯ ವೇಳೆ ಇಸ್ಲಾಮಿಕ್ ವಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳುವುದರ ಮೂಲಕ ನೆಹರು ಕುಟುಂಬಕ್ಕೆ ಹಿಂದೂ ವಿರೋಧಿ ಹಣೆಪಟ್ಟಿ ಕಟ್ಟಲು ಪ್ರಯತ್ನಿಸಿರುವಂತೆ ಕಾಣುತ್ತಿದೆ. ಇದೊಂದು ರಾಜಕೀಯ ಕುತಂತ್ರವಾಗಿದ್ದು ಈ ಮೂಲಕ ಧರ್ಮರಾಜಕಾರಣ ಮಾಡುತ್ತಿರುವುದು ಖಂಡನೀಯ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ. ಇಂತಹ ಪೋಸ್ಟ್‌ಗಳನ್ನು ನಂಬಿ ಶೇರ್ ಮಾಡುವ ಮುನ್ನ ಪರಿಶೀಲಿಸಿ ಎಂಬುದು ಏನ್ ಸುದ್ದಿ.ಕಾಂ ನ ವಿನಂತಿ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಮಿತಿ ಮೀರುತ್ತಿದೆ ಎಂದು ತಪ್ಪಾಗಿ ಬಾಂಗ್ಲಾದೇಶದ ಫೋಟೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights