ಫ್ಯಾಕ್ಟ್‌ಚೆಕ್: ಇಸ್ಲಾಂ ಧರ್ಮವನ್ನು ರಷ್ಯಾದ 2ನೇ ರಾಜ್ಯ ಧರ್ಮ ಎಂದು ಅಧ್ಯಕ್ಷ ಪುಟಿನ್ ಘೋಷಿಸಿದ್ದು ನಿಜವೇ?

ಇತ್ತೀಚೆಗೆ ಉಕ್ರೇನ್ ಮತ್ತು ರಷ್ಯಾ ನಡುವೆ ಭೀಕರ ಯುದ್ದ ನಡೆದು ಅಪಾರ ಪ್ರಮಾಣದ ಜೀವ ಹಾನಿಯಾಗಿದ್ದನ್ನು ನಾವೆಲ್ಲಾ ನೋಡಿದ್ದೇವೆ, ಸದ್ಯಕ್ಕೆ ಯುದ್ದ ವಿರಾಮ ಘೋಷಣೆಯಾಗಿದ್ದು ಉಭಯ ದೇಶಗಳ ಜನರಲ್ಲಿ ಭಯದ ವಾತಾವರಣ ಮನೆಮಾಡಿದೆ. ಇದೆಲ್ಲ ಹಸಿ ಹಸಿಯಾಗಿರುವಾಗಲೇ ರಷ್ಯಾದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿದ್ದು, ರಷ್ಯಾದ ಅಧ್ಯಕ್ಷ ಪುಟಿನ್ ಇಸ್ಲಾಂ ಧರ್ಮವನ್ನು ರಷ್ಯಾದ ಎರಡನೇ ರಾಜ್ಯ ಧರ್ಮವೆಂದು ಘೋಷಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ನ ಹಿಂದಿರುವ ಸತ್ಯಾಸತ್ಯತೆ ಏನೆಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಅಧ್ಯಕ್ಷ ಪುಟಿನ್ ಅವರು ಇಸ್ಲಾಂ ಅನ್ನು ರಷ್ಯಾದ ಎರಡನೇ ರಾಜ್ಯ ಧರ್ಮವೆಂದು ಘೋಷಿಸಿದ್ದಾರೆಯೇ ಎಂದು  ಅಂತರ್ಜಾಲದಲ್ಲಿ ಸರ್ಚ್ ಮಾಡಿದಾಗ, ಅದರ ಕುರಿತು ಯಾವುದೇ ಸಂಬಂಧಿತ ವರದಿಗಳು ಕಂಡುಬಂದಿಲ್ಲ. ಅವರು ನಿಜವಾಗಿಯೂ ಅಂತಹ ಘೋಷಣೆ ಮಾಡಿದ್ದರೆ, ಅನೇಕ ಪ್ರತಿಷ್ಠಿತ ಸುದ್ದಿ ಸಂಸ್ಥೆಗಳು ಅದರ ಬಗ್ಗೆ ವರದಿ ಮಾಡಿರುತ್ತಿದ್ದವು. ಆದರೆ ಅಧ್ಯಕ್ಷ ಪುಟಿನ್ ಅವರ ಯಾವುದೇ ಪ್ರಕಟಣೆಯನ್ನು ಯಾವುದೇ ಸುದ್ದಿ ಸಂಸ್ಥೆಗಳು ವರದಿ ಮಾಡಿಲ್ಲ. ‘ಪುಟಿನ್ ಇಸ್ಲಾಮಿಕ್’ ವಿಷಯಗಳ ಕುರಿತು ಮಾತನಾಡಿರುವುದನ್ನು ರಷ್ಯಾದ ಸುದ್ದಿ ಸಂಸ್ಥೆ ಇತ್ತೀಚೆಗೆ ವರದಿ ಮಾಡಿದ ಕೆಲವು ಲೇಖನಗಳನ್ನು ಇಲ್ಲಿ ನೋಡಬಹುದು.


‘2021 ರ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ವರದಿಯಲ್ಲಿ ಉಲ್ಲೇಖಿಸುವ ಅಂಶಗಳೆಂದರೆ – “ಸಂವಿಧಾನದ ಪ್ರಕಾರ  ರಾಜ್ಯವು ಜಾತ್ಯತೀತವಾಗಿದೆ ಮತ್ತು ಧಾರ್ಮಿಕ ಸ್ವಾತಂತ್ರ್ಯ, ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಧಾರ್ಮಿಕ ಆರಾಧನೆಯ ಸ್ವಾತಂತ್ರ್ಯವನ್ನು ಒದಗಿಸುತ್ತದೆ, ಇದರಲ್ಲಿ ” ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ಇತರರೊಂದಿಗೆ, ಯಾವುದೇ ಧರ್ಮ, ಅಥವಾ ಯಾವುದೇ ಧರ್ಮವನ್ನು ಪ್ರತಿಪಾದಿಸಲು ಅವಕಾಶವಿದ್ದು” . ಇದು ಎಲ್ಲಾ ಧಾರ್ಮಿಕ ಸಂಘಗಳು ಸಮಾನ ಮತ್ತು ರಾಜ್ಯದಿಂದ ಪ್ರತ್ಯೇಕವಾಗಿದೆ ಎಂದು ಹೇಳುತ್ತದೆ. ಕಾನೂನು ಕ್ರಿಶ್ಚಿಯನ್ ಧರ್ಮ, ಇಸ್ಲಾಂ, ಜುದಾಯಿಸಂ ಮತ್ತು ಬೌದ್ಧಧರ್ಮವನ್ನು ದೇಶದ ನಾಲ್ಕು ಸಾಂಪ್ರದಾಯಿ ಧರ್ಮಗಳೆಂದು ಅಂಗೀಕರಿಸುತ್ತದೆ, ಇದು ದೇಶದ ಐತಿಹಾಸಿಕ ಪರಂಪರೆಯ ಬೇರ್ಪಡಿಸಲಾಗದ ಭಾಗವಾಗಿದೆ. ದೇಶದ “ಇತಿಹಾಸ ಮತ್ತು ಅದರ ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯ ರಚನೆ ಮತ್ತು ಅಭಿವೃದ್ಧಿ” ಯಲ್ಲಿ ರಷ್ಯಾದ ಆರ್ಥೊಡಾಕ್ಸ್ ಕ್ರಿಶ್ಚಿಯನ್ ಧರ್ಮದ ವಿಶೇಷ ಪಾತ್ರವನ್ನು ಕಾನೂನು ಗುರುತಿಸುತ್ತದೆ. ಇದೇ ರೀತಿಯ ಹೇಳಿಕೆಗಳನ್ನು ರಷ್ಯಾದ ಸಂವಿಧಾನದಲ್ಲಿಯೂ ಕಾಣಬಹುದು.

ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ ‘ರಷ್ಯಾ’ 2021 ರ ವರದಿಯ ಪ್ರಕಾರ, “ಸ್ವತಂತ್ರ ಲೆವಾಡಾ ಸೆಂಟರ್ 2020 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಜನಸಂಖ್ಯೆಯ 63 ಪ್ರತಿಶತದಷ್ಟು ಆರ್ಥೊಡಾಕ್ಸ್ ಕ್ರಿಶ್ಚಿಯನ್ ಮತ್ತು 7 ಪ್ರತಿಶತ ಮುಸ್ಲಿಂ ಎಂದು ಗುರುತಿಸಲಾಗಿದೆ, ಆದರೆ 26 ಪ್ರತಿಶತದಷ್ಟು ಜನರು ಯಾವುದೇ ಧಾರ್ಮಿಕ ನಂಬಿಕೆಯನ್ನು ಹೊಂದಿಲ್ಲ ಎಂದು ವರದಿ ಮಾಡಿದ್ದಾರೆ.. ರಷ್ಯನ್ ಒಕ್ಕೂಟದ ಮುಸ್ಲಿಮರ ಧಾರ್ಮಿಕ ಮಂಡಳಿಯ ಅಧ್ಯಕ್ಷರಾದ ಮುಫ್ತಿ ರವಿಲ್ ಗೇನುದ್ದೀನ್ ಅವರ ಪ್ರಕಾರ, 2018 ರಲ್ಲಿ 25 ಮಿಲಿಯನ್ ಮುಸ್ಲಿಮರು, ಜನಸಂಖ್ಯೆಯ ಸರಿಸುಮಾರು 18 ಪ್ರತಿಶತ. ತಜ್ಞರು ಆರರಿಂದ ಏಳು ಮಿಲಿಯನ್ ಎಂದು ಅಂದಾಜಿಸಿರುವ ಮಧ್ಯ ಏಷ್ಯಾದ ವಲಸಿಗರು ಮತ್ತು ವಲಸೆ ಕಾರ್ಮಿಕರು ಹೆಚ್ಚಾಗಿ ಮುಸ್ಲಿಮರು ಎಂದು ಹೇಳಿದ್ದಾರೆ.

ಪೋಸ್ಟ್ ಮಾಡಿರುವ ಫೋಟೋ ಕೂಡ ಹಳೆಯದು. ಫೋಟೋ ತೆಗೆದದ್ದು 2012. ಅದೇ ಫೋಟೋವನ್ನು ಪ್ರಕಟಿಸಿದ ಕೆಲವು ಹಳೆಯ ಲೇಖನಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ರಷ್ಯಾದ ಅಧ್ಯಕ್ಷ ಪುಟಿನ್ ಇಸ್ಲಾಂ ಧರ್ಮವನ್ನು ರಷ್ಯಾದ ಎರಡನೇ ರಾಜ್ಯ ಧರ್ಮವೆಂದು ಘೋಷಿಸಿದ್ದಾರೆ ಎಂಬುದು ಸುಳ್ಳು. ರಷ್ಯಾದಲ್ಲಿ ಎಲ್ಲಾ ಧರ್ಮವನ್ನು ಸಮಾನವಾಗಿ ಪರಿಗಣಿಸಬೇಕೆಂದು ಹೇಳಲಾಗಿದೆ, ಆದರೆ ಇಸ್ಲಾಂ ಧರ್ಮವನ್ನು ರಷ್ಯಾದ ಎರಡನೇ ರಾಜ್ಯ ಧರ್ಮವೆಂದು ಘೋಷಿಸಲಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಬಿಕ್ಕಿ ಬಿಕ್ಕಿ ಅಳುತ್ತಿರುವ ಮಹಿಳೆ ಯಾಸಿನ್ ಮಲಿಕ್ ಪತ್ನಿ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights