ಫ್ಯಾಕ್ಟ್‌ಚೆಕ್: ಬಿಕ್ಕಿ ಬಿಕ್ಕಿ ಅಳುತ್ತಿರುವ ಮಹಿಳೆ ಯಾಸಿನ್ ಮಲಿಕ್ ಪತ್ನಿ ಎಂಬುದು ನಿಜವೇ?

ಭಯೋತ್ಪಾದನಾ ಕೃತ್ಯದಲ್ಲಿ ಭಾಗಿಯಾಗಿದ್ದ ಯಾಸಿನ್ ಮಲಿಕ್ ಅವರ ಪತ್ನಿ ಕ್ಯಾಮರಾ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಿರುವುದು ಕಂಡುಬಂದಿದೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್ ಮೂಲಕ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. 2016-17 ರಲ್ಲಿ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಎನ್‌ಐಎ ನ್ಯಾಯಾಲಯ ಇತ್ತೀಚೆಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಹಾಗಿದ್ದರೆ ಈ ವಿಡಿಯೋದ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.


ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್ :

ವೀಡಿಯೊದ ಸ್ಕ್ರೀನ್‌ಶಾಟ್‌ಅನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅದೇ ವೀಡಿಯೊ YouTube ನಲ್ಲಿ ಕಂಡುಬಂದಿದೆ. ಯೂಟ್ಯೂಬ್ ವೀಡಿಯೋವನ್ನು ಪಾಕಿಸ್ತಾನಿ ಸುದ್ದಿ ವಾಹಿನಿ ‘ಜಿಎನ್‌ಎನ್’ ಅಪ್‌ಲೋಡ್ ಮಾಡಿದೆ. ಮಹಿಳೆಯೊಬ್ಬರು ಅಳುತ್ತಿರುವ ದೃಶ್ಯಗಳು ಪಾಕಿಸ್ತಾನದಲ್ಲಿ ನಡೆದ ‘ಆಜಾದಿ ಮಾರ್ಚ್’ ಸಂದರ್ಭದ ಘಟನೆ ಎಂದು ಹೇಳಲಾಗಿದ್ದು. ಅವರು ಯಾಸಿನ್ ಮಲಿಕ್ ರವರ ಪತ್ನಿ ಎಂದು ವೀಡಿಯೊದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ.

ಸಂಬಂಧಿತ ಕೀವರ್ಡ್‌ಗಳೊಂದಿಗೆ Google ನಲ್ಲಿ ಸರ್ಚ್ ಮಾಡಿದಾಗ, ಇಮ್ರಾನ್ ಖಾನ್ ಅವರ ರಾಜಕೀಯ ಪಕ್ಷದ ಅಧಿಕೃತ ಹ್ಯಾಂಡಲ್‌ಗಳು ಹಂಚಿಕೊಂಡಿರುವ ಅದೇ ವೀಡಿಯೊ ಕಂಡುಬಂದಿದೆ ವಿಡಿಯೊವನ್ನುಇಲ್ಲಿ ಮತ್ತು ಇಲ್ಲಿ ನೋಡಬಹುದು. ಅಸೆಂಬ್ಲಿಯನ್ನು ವಿಸರ್ಜಿಸಲು ಮತ್ತು ಚುನಾವಣೆಯನ್ನು ಘೋಷಿಸಲು ಒತ್ತಾಯಿಸಿ ಪಾಕಿಸ್ತಾನದ ಪಿಎಂಎಲ್-ಎನ್ ಸರ್ಕಾರದ ವಿರುದ್ಧ ಇಮ್ರಾನ್ ಖಾನ್ ಆಯೋಜಿಸಿದ ‘ಆಜಾದಿ ಮಾರ್ಚ್’ ಮೆರವಣಿಗೆಯ ಸಂದರ್ಭದಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು ಈ ಸಂದರ್ಭದಲ್ಲಿ ಮಕ್ಕಳು ಮತ್ತು ಮಹಿಳೆಯರಿಗೆ ಅಪಾರ ಹಾನಿಯುಂಟಾಗಿತ್ತು ಆಗ ಮಹಿಳೆಯೊಬ್ಬರು ಅಳುತ್ತಿರುವ ಮಹಿಳೆಯ ವಿಡಿಯೋವನ್ನು ಯಾಸಿನ್ ಮಲ್ಲಿಕ್ ಪತ್ನಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಅವರ ಪತ್ನಿ ಪಾಕಿಸ್ತಾನಿ ಕಲಾವಿದ ಮುಶಾಲ್ ಹುಸೇನ್ ಮುಲ್ಲಿಕ್. ಎನ್‌ಐಎ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಯಾಸಿನ್ ಮಲಿಕ್ ಅವರನ್ನು ಬಿಡುಗಡೆ ಮಾಡಲು ಸಹಾಯ ಮಾಡುವಂತೆ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಪಾಕಿಸ್ತಾನದ ಸಂಸತ್ತಿಗೆ ಮನವಿಯನ್ನೂ ಸಲ್ಲಿಸಿದ್ದರು.

2019 ರಲ್ಲಿ ಯಾಸಿನ್ ಮಲಿಕ್ ಅವರ ಪತ್ನಿ ಅವರ ಆರೋಗ್ಯದ ಕಾರಣಕ್ಕೆ ಬಿಡುಗಡೆ ಮಾಡಿ ಎಂದು ಮನವಿ ಮಾಡುತ್ತ ಅಳುವ ವೀಡಿಯೊ ಇತ್ತೀಚಿನದು ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಈ ವಿಡಿಯೋದಲ್ಲಿ ಅಳುತ್ತಿರುವ ಮಹಿಳೆ ಯಾಸಿನ್ ಮಲಿಕ್ ಅವರ ಪತ್ನಿ ಮುಶಾಲ್ ಹುಸೇನ್ ಮುಲ್ಲಿಕ್ ಅಲ್ಲ, ಪಾಕಿಸ್ತಾನದಲ್ಲಿ ನಡೆದ ‘ಆಜಾದಿ ಮಾರ್ಚ್’ ಸಂದರ್ಭದ ಘಟನೆ ಎಂದು ಹೇಳಲಾಗಿದ್ದು. ಅವರು ಯಾಸಿನ್ ಮಲಿಕ್ ರವರ ಪತ್ನಿ ಎಂದು ವೀಡಿಯೊದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ :  ಫ್ಯಾಕ್ಟ್‌ಚೆಕ್: ಸಾಧುವಿನ ಮೇಲೆ ಹಲ್ಲೆ ನಡೆಸಿ, ಜುಟ್ಟು ಕತ್ತರಿಸಿದ್ದು ಮುಸ್ಲಿಂ ವ್ಯಕ್ತಿ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights