ಫ್ಯಾಕ್ಟ್‌ಚೆಕ್: ತಮಿಳುನಾಡಿನಲ್ಲಿ ಕಮಲ ಅರಳುತ್ತಿದೆ ಎಂದು ಎಡಿಟ್ ಮಾಡಿದ ಪೋಟೊ ಹಂಚಿಕೊಂಡ ಬಿಜೆಪಿಗರು

ಭಾರತೀಯ ಜನತಾ ಪಕ್ಷದ (BJP) ತಮಿಳುನಾಡು ಘಟಕವು ಜೂನ್ 2 ರಂದು ಇಂಧನ ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆಗೆ ಕರೆ ನೀಡಿತ್ತು. ಚೆನ್ನೈನಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು ಎಂದು ವರದಿಯಾಗಿದೆ. ಈ ಬೆಳವಣಿಗೆಗಳ ನಡುವೆ ತಮಿಳುನಾಡಿನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ತಮಿಳುನಾಡಿನಲ್ಲಿ ಕಮಲ ಅರಳುತ್ತಿದೆ” ಎಂದು ಹಲವು ಟ್ವಿಟರ್ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಒಬ್ಬರ ಮೆಲೆ ಒಬ್ಬರು ನಿಂತು BJP ಧ್ವಜವನ್ನು ಹಾರಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.

 

ಹಿಮಾಚಲ ಪ್ರದೇಶದ ಬಿಜೆಪಿ ವಕ್ತಾರೆ ಪ್ರಜ್ವಲ್ ಬುಸ್ತಾ ಮತ್ತು ಉತ್ತರ ದೆಹಲಿಯ ಮಾಜಿ ಮೇಯರ್ ರವೀಂದರ್ ಗುಪ್ತಾ ಸೇರಿದಂತೆ ಅನೇಕ ಪರಿಶೀಲಿಸಿದ ಹ್ಯಾಂಡಲ್‌ಗಳು ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ಫ್ಯಾಕ್ಟ್‌ಚೆಕ್:

ವೈರಲ್ ಪೋಸ್ಟ್‌ನ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಮೂಲ ಪೋಟೋದ ಮಾಹಿತಿ ಲಭ್ಯವಾಗಿದ್ದು ಬಿಎಸ್‌ಪಿಯ ತೆಲಂಗಾಣ ಘಟಕದ ವಕ್ತಾರರಾದ ಶಿರಿಶಾ ಸ್ವೇರೊ ಅಕಿನಪಲ್ಲಿ ಅವರ ಖಾತೆಯಿಂದ ಮೇ 31 ರಂದು ಮಾಡಿದ ಟ್ವೀಟ್ ಕಂಡುಬಂದಿದೆ. ಈ ಫೋಟೋದಲ್ಲಿ, ಯುವಕರು ಬಿಎಸ್ಪಿ ಧ್ವಜವನ್ನು ಹಾರಿಸುತ್ತಿರುವುದು ಕಂಡುಬಂದಿದೆ.

ಟ್ವೀಟ್ ಮಾಡಲಾಗಿರುವ ಪೋಸ್ಟ್‌ನಲ್ಲಿ ಇಚ್ಛೆಯು ಉತ್ತಮವಾದಾಗ ಸಾಧನಗಳೊಂದಿಗೆ ಕೆಲಸ ಮಾಡಬೇಡಿ. ನಮ್ಮ ಬಂಧು-ಬಳಗದವರು ಏಣಿಯನ್ನು ಹತ್ತಿ ನೀಲಿ ಬಾವುಟವನ್ನು ಜನಸಾಮಾನ್ಯರ ಎದೆಬಡಿತದಲ್ಲಿ ಹಾರಿಸಿದರು. ಅಂತಹ ಲಕ್ಷಾಂತರ ಯುವಕರು ಅವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ. ಹಾಗೆಯೇ “ಅಂಬೇಡ್ಕರ್ ಸ್ಟೇಟಸ್‌” ಎಂಬ Pinterest ಪುಟದಲ್ಲಿ ಅಪ್‌ಲೋಡ್ ಮಾಡಲಾದ ಫೋಟೋದಲ್ಲಿ BSP ಧ್ವಜ ಕಂಡುಬಂದಿದೆ.

ಎರಡು ಫೋಟೋಗಳನ್ನು ವಿಶ್ಲೇಷಣೆ ( image error analysis platforms ) ವೇದಿಕೆಗಳಲ್ಲಿ ಫೋರೆನ್ಸಿಕಲಿ ಮತ್ತು ಫೋಟೊಫೋರೆನ್ಸಿಕ್ಸ್‌ನಲ್ಲಿ ರನ್ ಮಾಡಿದಾಗ. ಈ ವೆಬ್‌ಸೈಟ್‌ಗಳಲ್ಲಿ ಚಿತ್ರವನ್ನು ಪರೀಕ್ಷಿಸಿದಾಗ, ಬದಲಾದ ಅಥವಾ ಲಗತ್ತಿಸಲಾದ ಭಾಗಗಳು ಉಳಿದ ಚಿತ್ರಕ್ಕಿಂತ ಬಣ್ಣದ ದರ್ಜೆಯಲ್ಲಿ ಎದ್ದು ಕಾಣುತ್ತವೆ.ಬಿಎಸ್ಪಿ ಚಿತ್ರದಲ್ಲಿ ಯಾವುದೇ ಸ್ಪಷ್ಟವಾದ ಹೊಂದಾಣಿಕೆಗಳಿಲ್ಲದಿದ್ದರೂ, ಫೋಟೊಫೋರೆನ್ಸಿಕ್ಸ್ ಪರೀಕ್ಷೆಯಲ್ಲಿ ಬಿಜೆಪಿ ಧ್ವಜದ ಕಿತ್ತಳೆ ಭಾಗವು ಎದ್ದು ಕಾಣುತ್ತದೆ.

ಅದೇ ರೀತಿ, ಫೋರೆನ್ಸಿಕಲ್‌ನಲ್ಲಿಯೂ ಚಿತ್ರದ ಉಳಿದ ಮಾಪಕಗಳಿಗೆ ಹೋಲಿಸಿದರೆ ಬಿಜೆಪಿ ಧ್ವಜವು ಎದ್ದು ಕಾಣುತ್ತಿದೆ. ಇದನ್ನು ಕೆಳಗೆ ನೋಡಬಹುದು. ಹೀಗಾಗಿ ಬಿಜೆಪಿ ಧ್ವಜ ಬಳಸಿರುವ ಫೋಟೋ ಎಡಿಟ್ ಮಾಡಲಾಗಿದೆ ಎಂದು ಇಂಡಿಯಾ ಟುಡೆ ಫ್ಯಾಕ್ಟ್‌ಚೆಕ್ ಮಾಡಿದೆ. ಮೂಲ ಫೋಟೋ BSP ಧ್ವಜವನ್ನು ಹೊಂದಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ತೆಲಂಗಾಣದಲ್ಲಿ ಕಂಬವೊಂದಕ್ಕೆ BSP ಸದಸ್ಯರು ವಿಭಿನ್ನವಾಗಿ ಧ್ವಜವನ್ನು ಹಾರಿಸಿರುವ ಫೋಟೋವನ್ನು ಕೆಲವು BJP ಯ ಪ್ರಮುಖರು ತಮಿಳುನಾಡಿನಲ್ಲಿ BJP ಯ ಕಮಲ ಹರಳುತ್ತಿದೆ ಎಂದು ಎಡಿಟ್‌ ಮಾಡಿದ ಫೋಟೋವನ್ನು ಪೋಸ್ಟ್‌ ಮಾಡುವ ಮೂಲಕ ಸುಳ್ಳು ಹೇಳಿದೆ. ಹಾಗಾಗಿ ಮೂಲ ಫೋಟೋದಲ್ಲಿ ಇರುವುದು BSP ಧ್ವಜ ಎಂದು ಖಚಿತವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ರಾಜಸ್ಥಾನದ ಝಲಾವರ್ ವಾಟರ್ ಪಾರ್ಕ್‌ನಲ್ಲಿ ತಲೆಗೆ ಪೆಟ್ಟಾದ ಯುವಕ ಸತ್ತಿಲ್ಲ!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights