ಫ್ಯಾಕ್ಟ್‌ಚೆಕ್: ವ್ಯಕ್ತಿಯ ಮೃತ ದೇಹವನ್ನು ಎಳೆದೊಯ್ಯುತ್ತಿರುವ ಮೊಸಳೆಯ ವಿಡಿಯೊ ಬಿಹಾರದ್ದಲ್ಲ

ಮನುಷ್ಯನ ಮೃತ ದೇಹವನ್ನು ಮೊಸಳೆಯೊಂದು ಎಳೆದೊಯ್ಯುತ್ತಿರುವ ವೀಡಿಯೊ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ಬಿಹಾರದ ಭಾಗಲ್ಪುರದಲ್ಲಿ ನಡೆದಿರುವ ಘಟನೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೀಡಿಯೊದ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ನಲ್ಲಿ ಸರ್ಚ್ ಮಾಡಿದಾಗ, ‘ಎಲ್ ಇಂಪಾರ್ಷಿಯಲ್’ ಎಂಬ ವೆಬ್‌ಸೈಟ್ ಪ್ರಕಟಿಸಿದ ವರದಿಯು ವೈರಲ್ ವೀಡಿಯೊದಲ್ಲಿ ಇರುವಂತೆಯೆ ಮನುಷ್ಯ ಮತ್ತು ಮೊಸಳೆಯ ಚಿತ್ರವನ್ನು ಒಳಗೊಂಡಿದೆ.

ಈ ಘಟನೆಯು 18 ಆಗಸ್ಟ್ 2022 ರಂದು ಮೆಕ್ಸಿಕೋದ ತಮೌಲಿಪಾಸ್‌ನ ಟ್ಯಾಂಪಿಕೊ ನಗರದಲ್ಲಿ ಸಂಭವಿಸಿದೆ. ವರದಿಯ ಪ್ರಕಾರ, ಮೊಸಳೆಯು 25 ವರ್ಷದ ವ್ಯಕ್ತಿಯೊಬ್ಬ ನಿಷೇದಿತ ಸ್ಥಳದಲ್ಲಿ ಈಜಲು ಇಳಿದಾಗ ಈ ಅವಘಡ ನಡೆದಿದೆ. ಈ ಘಟನೆಯ ಕೆಲವು ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು. ತುರ್ತು ಸೇವಾ ಸಿಬ್ಬಂದಿ ವ್ಯಕ್ತಿಯ ಮೃತದೇಹವನ್ನು ಹೊರತೆಗೆದಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಹಾಗಾಗಿ ಈ ಘಟನೆ ಬಿಹಾರದ ಭಾಗಲ್ಪುರದಲ್ಲಿ ನಡೆದಲ್ಲಿ ನಡೆದ ಘಟನೆ ಅಲ್ಲ ಎಂದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ,  ಘಟನೆಯು 18 ಆಗಸ್ಟ್ 2022 ರಂದು ಮೆಕ್ಸಿಕೋದ ಟ್ಯಾಂಪಿಕೋ ನಗರದಲ್ಲಿ ನಡೆದಿದೆ. ಸುದ್ದಿ ವರದಿಗಳ ಪ್ರಕಾರ, ತಮೌಲಿಪಾಸ್‌ನಲ್ಲಿ 25 ವರ್ಷದ ವ್ಯಕ್ತಿಯೊಬ್ಬರು ಅಪಾಯದ ಪ್ರದೇಶದಲ್ಲಿ ಈಜುತ್ತಿದ್ದಾಗ ಮೊಸಳೆ ಈ ವ್ಯಕ್ತಿಯನ್ನು ಕೊಂದು ಎಳೆದುಕೊಂಡು ಹೋಗಿದೆ.  ಈ ಘಟನೆಯನ್ನು ಬಿಹಾರದ್ದು ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಸಮುದ್ರ ಮಧ್ಯದಲ್ಲಿ ದೈತ್ಯಾಕಾರದ ಹಾವು ಹೆಡೆ ಎತ್ತಿರುವುದು ನಿಜವಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights