ಫ್ಯಾಕ್ಟ್‌ಚೆಕ್: ನಿವೃತ್ತ ಕರ್ನಲ್, ಅವರ ಪತ್ನಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಎಂಬುದು ನಿಜವಲ್ಲ

ಚಿತೆಯ ಮೇಲೆ ಇರಿಸಲಾಗಿರುವ ವೃದ್ಧ ದಂಪತಿಯ ಮೃತದೇಹಗಳ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಆ ವ್ಯಕ್ತಿ ನಿವೃತ್ತ ಕರ್ನಲ್ ಆಗಿದ್ದು, ಲಕ್ನೋದಲ್ಲಿ ನೆಲೆಸಿದ್ದರು. ತನ್ನ ಮಕ್ಕಳು ವೃದ್ದಾಪ್ಯದ ಸಂದರ್ಭದಲ್ಲಿ ತಮ್ಮನ್ನು ಆರೈಕೆ ಮಾಡುತ್ತಿಲ್ಲವೆಂದು ನೊಂದ ದಂಪತಿಗಳು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಈ ಘಟನೆ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

5 ಜನರು ನ ಚಿತ್ರವಾಗಿರಬಹುದು

ಫ್ಯಾಕ್ಟ್‌ಚೆಕ್ :

ನಿವೃತ್ತ ಕರ್ನಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿಜವೇ ಆಗಿದ್ದರೆ ಅದನ್ನು ಮುಖ್ಯವಾಹಿನಿ ಮಾಧ್ಯಮಗಳು  ವ್ಯಾಪಕವಾಗಿ ಪ್ರಸಾರ ಮಾಡುತ್ತಿದ್ದವು. ಆದರೆ ಅಂತಹ ಯಾವುದೇ ವರದಿಗಳು ಲಭ್ಯವಾಗಿಲ್ಲ.  ನಂತರ ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ , ಅದೇ ಫೋಟೋವನ್ನು 2018 ರಲ್ಲಿ ವಿಭಿನ್ನ ಕಥೆಗಳೊಂದಿಗೆ ವೈರಲ್ ಆಗಿರುವುದು ಕಂಡುಬಂದಿದೆ. 2018 ರ ಅಂತಹ ಒಂದು ಪೋಸ್ಟ್ ಅನ್ನು ಇಲ್ಲಿ ನೋಡಬಹುದು.

“ಪೋರ್ಸಾದ ಪಂಡಿತ್‌ಜಿ ನಿನ್ನೆ ಸಂಜೆ ನಿಧನರಾದರು. ಇಂದು ಬೆಳಗ್ಗೆ ಶವಸಂಸ್ಕಾರಕ್ಕೆ ಕರೆದೊಯ್ಯುತ್ತಿದ್ದಾಗ ಅವರ ಪತ್ನಿಯೂ ಪ್ರಾಣ ಬಿಟ್ಟಿದ್ದಾರೆ”. ಅವರಿಬ್ಬರೂ ಸಾವಿನಲ್ಲೂ ಜೊತೆಯಾಗಿದ್ದಾರೆ ಎನ್ನುವ ಅರ್ಥದಲ್ಲಿ ಹಂಚಿಕೊಂಡಿದ್ದಾರೆ.  ಅಲ್ಲದೆ, ವೈರಲ್ ಪೋಸ್ಟ್‌ನಲ್ಲಿರುವ ಅದೇ ಕಥೆಯನ್ನು ಕನಿಷ್ಠ 2019 ರಿಂದ ಹಲವಾರು ಇತರ ಚಿತ್ರಗಳೊಂದಿಗೆ ಹಂಚಿಕೊಳ್ಳಲಾಗಿದೆ. ಅವುಗಳನ್ನು  ಇಲ್ಲಿ ಮತ್ತು ಇಲ್ಲಿ ಕಾಣಬಹುದು.


ವೈರಲ್ ಫೋಟೋದಲ್ಲಿ ತೋರಿಸಿರುವ ಮೃತ ವೃದ್ದ ದಂಪತಿಗಳ ಗುರುತನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದಿದ್ದರೂ, ವೈರಲ್ ಚಿತ್ರದಲ್ಲಿ ಕಂಡುಬರುವ ದಂಪತಿಗಳು ಮಧ್ಯಪ್ರದೇಶದ ಪುರಾಣಖೇಡಿಯ ಛೋಟೆಲಾಲ್ ಶರ್ಮಾ (90) ಮತ್ತು ಅವರ ಪತ್ನಿ ಗಂಗಾದೇವಿ (87) ಎಂದು ಆಜ್‌ತಕ್ ವರದಿ ಹೇಳಿದೆ. ಛೋಟೇಲಾಲ್ ಒಬ್ಬ ರೈತನಾಗಿದ್ದು, ಕರ್ನಲ್ ಅಲ್ಲ ಎಂದು ತಿಳಿದು ಬಂದಿದೆ. ದಂಪತಿಗೆ 4 ಗಂಡು ಮತ್ತು 6 ಹೆಣ್ಣು ಮಕ್ಕಳಿದ್ದರು. 03 ಸೆಪ್ಟೆಂಬರ್ 2018 ರಂದು ಮುಂಜಾನೆ 4 ಗಂಟೆಗೆ ಛೋಟೇಲಾಲ್ ನಿಧನರಾದಾಗ, ಸುದ್ದಿ ತಿಳಿದ ಅವರ ಪತ್ನಿಯೂ ಹೃದತಾಘಾತದಿಂದ ನಿಧನರಾಗಿದ್ದರು. ಇಬ್ಬರನ್ನೂ ಒಂದೇ ಚಿತೆಯ ಮೇಲೆ ಸಂಸ್ಕಾರ ಮಾಡಲಾಯಿತು ಎಂದು ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಹಳೆಯ ಸಂಬಂಧವಿಲ್ಲದ ಫೋಟೋದೊಂದಿಗೆ ಕಾಲ್ಪನಿಕ ಕಥೆಯನ್ನು ಜೋಡಿಸಿ 2018ರಿಂದ ಬೇರೆ ಬೇರೆ ಕಥೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈಗ ಇದನ್ನು ಲಕ್ನೋದಲ್ಲಿ ನಿವೃತ್ತ ಕರ್ನಲ್ ಆತ್ಮಹತ್ಯೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಚಿನ್ನದ ಮಳೆ ಸುರಿದಿದೆ ಎಂಬುದೇ ಶುದ್ದ ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights