ಫ್ಯಾಕ್ಟ್‌ಚೆಕ್: ಇದು ಭಾರತ್ ಜೋಡೋ ಯಾತ್ರೆಗೆ ಸೇರಿದ ಜನರ ಚಿತ್ರವೆ?

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ಮಧ್ಯಪ್ರದೇಶದಿಂದ ರಾಜಸ್ಥಾನಕ್ಕೆ ಪ್ರವೇಶಿಸಿದೆ. ಜೋಡೋ ಯಾತ್ರೆಗೆ ರಾಜಸ್ಥಾನದಲ್ಲಿ ಭವ್ಯ ಸ್ವಾಗತ ದೊರೆತಿದ್ದು, ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ರಾಜಸ್ಥಾನದ ಝವಾಡ್ ಜಿಲ್ಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು ಎಂದು ಪ್ರತಿಪಾದಿಸಿ, ಯುವ ನೇತಾರರನ್ನು ನೋಡಲು ಜನ ಸಾಗರ ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ.

ರಾಜಸ್ಥಾನದ ಅಲೋಟೆಯ INC ಶಾಸಕ ಮನೋಜ್ ಚಾವ್ಲಾ ಕೂಡ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

 

ಇದನ್ನು ಐಎನ್‌ಸಿ ನಾಯಕಿ ರಿತು ಚೌಧರಿ ಅವರು ಟ್ವಿಟರ್‌ನಲ್ಲಿ ‘ಚಿತ್ರಗಳು ಮಾತನಾಡುತ್ತವೆ’ ಎಂದು ಅನುವಾದಿಸುವ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಟ್ವೀಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಟೊಗಳನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ಡಿಸೆಂಬರ್ 3ರಂದು ಮಥುರಾದ ಜೈ ಗುರುದೇವ್ ಆಶ್ರಮದಲ್ಲಿ ಸೆರೆ ಹಿಡಿದ ಚಿತ್ರ ಎಂದು ಬೂಮ್ ವರದಿ ಮಾಡಿದೆ.

ಆಶ್ರಮದ ಪ್ರಧಾನ ಕಾರ್ಯದರ್ಶಿ ಬಾಬುರಾಮ್ ಯಾದವ್ ಅವರು ಬೂಮ್‌ಗೆ ಈ ಮಾಹಿತಿಯನ್ನು ದೃಢಪಡಿಸಿದ್ದು, ಚಿತ್ರವನ್ನು ಡಿಸೆಂಬರ್ 3 ರಂದು ಮಥುರಾದ ಜೈ ಗುರುದೇವ್ ಆಶ್ರಮದಲ್ಲಿ ಆಯೋಜಿಸಲಾದ ದೊಡ್ಡ ಧಾರ್ಮಿಕ ಔತಣವನ್ನು ತೋರಿಸುತ್ತದೆ ಎಂದು ಯಾದವ್ BOOM ಗೆ ತಿಳಿಸಿದ್ದಾರೆ.

https://twitter.com/WaitReborn/status/1600510672042876928?ref_src=twsrc%5Etfw%7Ctwcamp%5Etweetembed%7Ctwterm%5E1600510672042876928%7Ctwgr%5E5310af4e2311f87bcd483577a339895c1e9c2d8a%7Ctwcon%5Es1_&ref_url=https%3A%2F%2Fwww.boomlive.in%2Ffact-check%2Ffact-check-viral-photo-rahul-gandhi-congress-bharat-jodo-yatra-rajasthan-mathura-jai-gurudev-ashram-20352

ಒಬ್ಬರು ಅಥವಾ ಹೆಚ್ಚಿನ ಜನರು, ನಿಂತಿರುವ ಜನರು, ಜನಸಂದಣಿ ಮತ್ತು ಹೊರಾಂಗಣಗಳು ನ ಚಿತ್ರವಾಗಿರಬಹುದು

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಪಂಕಜ ಮಹಾರಾಜರು ಮಾತನಾಡಿದ್ದಾರೆ. ನಾವು ನಂತರ ಪಂಕಜ್ ಮಹಾರಾಜ್ ಅವರ ಫೇಸ್‌ಬುಕ್ ಪುಟವನ್ನು ನೋಡಿದ್ದೇವೆ ಮತ್ತು ಡಿಸೆಂಬರ್ 3 ರಂದು ಅವರ ಪ್ರೊಫೈಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಅದೇ ಫೋಟೋ ಕಂಡುಬಂದಿದೆ.

ಮಥುರಾದ ಜೈ ಗುರುದೇವ್ ಆಶ್ರಮದಲ್ಲಿ ಆಯೋಜಿಸಲಾದ ಧಾರ್ಮಿಕ ಔತಣ ಕೂಟ ಮತ್ತು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಪೋಟೋಗಳು ಎಂದು ಹಂಚಿಕೊಂಡಿರುವ ಎರಡನ್ನು ಹೋಲಿಕೆ ಮಾಡಿದಾಗ ಒಂದೆ ರೀತಿಯ ಪೋಟೋಗಳು ಎಂದು ಸ್ಪಷ್ಟವಾಗಿದೆ.

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ರಾಜಸ್ಥಾನವನ್ನು ತಲುಪುವ ಮೊದಲೇ ಡಿಸೆಂಬರ್ 3 ರಂದು ಈ ಫೋಟೋವನ್ನು ಸೆರೆಹಿಡಿಯಲಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದ ಬೃಹತ್ ಸಮಾವೇಶದ ಫೋಟೋವನ್ನು ರಾಜಸ್ಥಾನದಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಗಿಡದಲ್ಲಿ ದುಡ್ಡು ಬಿಟ್ಟಿರುವಂತೆ ಫೇಕ್ ವಿಡಿಯೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights