ಫ್ಯಾಕ್ಟ್‌ಚೆಕ್: ಹಳೆಯ ಸಂಬಂಧವಿಲ್ಲದ ಶವದ ಫೋಟೋವನ್ನು ‘ಲವ್ ಜಿಹಾದ್’ ಎಂದು ಹಂಚಿಕೆ

ಫ್ರೀಜರ್‌ನಲ್ಲಿ  ಹುಡುಗಿಯೊಬ್ಬಳ ಶವವೊಂದು ಪತ್ತೆಯಾಗಿದೆ ಎಂದು ಕೊಲಾಜ್ ಮಾಡಲಾದ ಫೋಟೋವನ್ನು  ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅಸ್ಸಾಂನಲ್ಲಿ ‘ಗಫಾರ್’ ಎಂಬ ವ್ಯಕ್ತಿಯಿಂದ ಕೊಂದ ಮಹಿಳೆಯ ಚಿತ್ರಗಳು ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಗಳಲ್ಲಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ಘಟನೆಗೆ ಕೋಮು ಬಣ್ಣ ನೀಡಿ ಹಂಚಿಕೊಳ್ಳಲಾಗಿದೆ.

ಅಸ್ಸಾಂನಲ್ಲಿ ಮತ್ತೋರ್ವ ಶ್ರದ್ಧಾ, ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಜೀವನ ಸಾಗಿಸುತ್ತಿದ್ದ ಕಾಜಲ್ ಮೇಲೆ ಮೊದಲು 7 ಮುಸ್ಲಿಂ ಹುಡುಗರು ಅತ್ಯಾಚಾರ ಎಸಗಿ, ನಂತರ ಚಳಿಯಿಂದ ಸಾವನ್ನಪ್ಪಿದ್ದರು. ಗಫಾರ್ ಮತ್ತು ಅವನ ಸಹಚರರು ಹುಡುಗಿಯ ಶವವನ್ನು ಫ್ರೀಜ್‌ನಿಂದ ಹೊರತೆಗೆದು 8 ದಿನಗಳ ಕಾಲ ಮೃತದೇಹದೊಂದಿಗೆ ಅತ್ಯಾಚಾರವೆಸಗುತ್ತಿದ್ದರು ಮತ್ತು ನಂತರ ಅದನ್ನು ಮತ್ತೆ ಫ್ರೀಜ್‌ನಲ್ಲಿ ಪ್ಯಾಕ್ ಮಾಡುತ್ತಿದ್ದರು. ಮಾನವೀಯತೆಯನ್ನು ಉಳಿಸಲು ದುಷ್ಟ ರಾಕ್ಷಸನನ್ನು ನಾಶಪಡಿಸಬೇಕು ಎಂಬ ಕೋಮು ಹಿನ್ನಲೆಯ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರವನ್ನು ಏನ್‌ಸುದ್ದಿ.ಕಾಂ ಓದುಗರು ನಮ್ಮ ವಾಟ್ಸಾಪ್‌ ಗುಂಪಿಗೆ ಹಂಚಿಕೊಳ್ಳುವ ಮೂಲಕ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ವಿನಂತಿಸಿದ್ದಾರೆ. ಹಾಗಿದ್ದರೆ ಈ ಘಟನೆಗೆ ಮುಸ್ಲಿಂ ಸಮುದಾಯದ ವ್ಯಕ್ತಿಗಳು ಕಾರಣರೆ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ ಅಸ್ಸಾಂನಲ್ಲಿ ಇತ್ತೀಚೆಗೆ ಇಂತಹ ಭಯಾನಕ ಘಟನೆ ನಡೆದಿದೆಯೇ ಎಂದು ಪರಿಶೀಲಿಸಿದಾಗ ಅಂತಹ ಯಾವುದೇ ಸುದ್ದಿಗಳು ವರದಿಯಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ನಂತರ ವೈರಲ್ ಫೋಟೋಗಳನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, 2010 ರಲ್ಲಿ ಪ್ರಕಟವಾದ ಬ್ಲಾಗ್‌ನಲ್ಲಿ ಈ ಫೋಟೊಗಳು ಕಂಡುಬಂದಿವೆ. ಈ ಬ್ಲಾಗ್ ವೈರಲ್ ಕೊಲಾಜ್‌ನಲ್ಲಿರುವ ಎಲ್ಲಾ ಚಿತ್ರಗಳನ್ನು ಒಳಗೊಂಡಿದೆ. ಆದರೆ, ಘಟನೆಯ ಸ್ಥಳ ಮತ್ತು ದಿನಾಂಕವನ್ನು ಈ ಬ್ಲಾಗ್‌ನಲ್ಲಿ ನಮೂದಿಸಿಲ್ಲ.

ವೈರಲ್ ಚಿತ್ರವನ್ನು ಹೊಂದಿರುವ ಪೋರ್ಚುಗೀಸ್ ಭಾಷೆಯಲ್ಲಿ 2010 ರಲ್ಲಿ ಪ್ರಕಟವಾದ ಮತ್ತೊಂದು ಬ್ಲಾಗ್ ಕಂಡುಬಂದಿದೆ. ಈ ಬ್ಲಾಗ್‌ನಲ್ಲಿ ಘಟನೆಯ ಸ್ಥಳವನ್ನು ಬ್ರೆಜಿಲ್‌ನ ಉಸಾಸ್ಕೋ ಎಂದು ಉಲ್ಲೇಖಿಸಲಾಗಿದೆ. ಕಾಲಕಾಲಕ್ಕೆ, ಈ ಚಿತ್ರವನ್ನು ವಿಭಿನ್ನ ಘಟನೆಗಳಿಗೆ ಸಂಬಂಧಿಸಿದಂತೆ ಬಳಸಲಾಗಿದೆ.

2021 ರಲ್ಲಿ, ಯಾಹೂ ನ್ಯೂಸ್ ವೆನೆಜುವೆಲಾದಲ್ಲಿ ಇದೇ ರೀತಿಯ ಘಟನೆಗೆ ಚಿತ್ರವನ್ನು ಲಿಂಕ್ ಮಾಡಿದೆ. ಆದರೆ, ಈ ಫೋಟೋವನ್ನು ಯಾವಾಗ ಮತ್ತು ಎಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಖಚಿತಪಡಿಸುವುದಿಲ್ಲ ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ವರದಿ ಮಾಡಿದೆ. ಆದರೆ ಈ ಚಿತ್ರವು ಕನಿಷ್ಠ 12 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಅಸ್ಸಾಂನಿಂದ ಅಲ್ಲ ಎಂಬುದು ಸ್ಪಷ್ಟವಾಗಿದೆ.

ಅಸ್ಸಾಂ ಪೊಲೀಸರು ಬ್ಲಾಗ್‌ಗೆ ಲಿಂಕ್ ಅನ್ನು ಟ್ವೀಟ್ ಮಾಡಿದ್ದಾರೆ ಮತ್ತು ಈ ಚಿತ್ರವು 2010 ರ ಪೋರ್ಚುಗೀಸ್ ಬ್ಲಾಗ್‌ನಿಂದ ಬಂದಿದೆ ಎಂದು ಹೇಳಿದರು. ಇದನ್ನು ತಪ್ಪು ಸಂದರ್ಭದೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಇದರೊಂದಿಗೆ ಇಂತಹ ತಪ್ಪು ಸಂದೇಶಗಳನ್ನು ಶೇರ್ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಒಟ್ಟಾರೆಯಾಗಿ ಹೇಳುವುದಾದರೆ, 2010ರ ಹಳೆಯ ಪೋಟೋಗಳನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ದೆಹಲಿಯ ಶ್ರದ್ಧಾ ಹತ್ಯೆ ಪ್ರಕರಣದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಹುಡುಗಿ ಹಾಗೂ ಮುಸ್ಲಿಂ ಹುಡುಗನ ಹೆಸರು ಹೇಳಿ ‘ಲವ್ ಜಿಹಾದ್’ ಎಂಬ ಕೋಮು ದ್ವೇಷದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ; ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮೋದಿ ಗುಜರಾತ್ ಭೇಟಿ ವೇಳೆ ಪತ್ನಿ ಜಶೋದಾಬೆನ್‌ ಅವರನ್ನು ಭೇಟಿಯಾಗಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights