ಫ್ಯಾಕ್ಟ್‌ಚೆಕ್: ಫುಟ್ಬಾಲ್ ದಂತಕಥೆ ಪೀಲೆ ನಿಧನ ಎಂದು ಸುಳ್ಳು ಸುದ್ದಿ ಹಂಚಿಕೆ

ಫುಟ್ಬಾಲ್ ದಂತಕಥೆ, ಬ್ರೆಜಿಲ್‌ ದೇಶದ ಪೀಲೆ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಕೋವಿಡ್ -19 ಉಲ್ಬಣಗೊಂಡ ಪರಿಣಾಮ 82 ವರ್ಷದ ಪೀಲೆ ಅವರನ್ನು ಒಂದು ವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾಮಾಜಿಕ ಮಾಧ್ಯಮ ಬಳಕೆದಾರರು ಬ್ರೆಜಿಲ್ ಫುಟ್ಬಾಲ್ ದಂತಕಥೆ ನಿಧನರಾಗಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಫೇಸ್‌ಬುಕ್ ಬಳಕೆದಾರರು ಪೀಲೆಯ ಫೋಟೋವನ್ನು ಪೋಸ್ಟ್ ಮಾಡಿದ್ದು “ಬ್ರೆಜಿಲಿಯನ್ ದಂತಕಥೆ ಪೀಲೆ ಇನ್ನಿಲ್ಲ. RIP” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ “ಬ್ರೆಜಿಲಿಯನ್ ದಂತಕಥೆ ಪೀಲೆ” ನಿಧನ ಎಂಬ ಸುದ್ದಿಯು ನಿಜವೇ ಎಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ ಅವರು ನಿಧನ ಆಗಿದ್ದಾರೆ ಎಂಬ ಯಾವುದೇ ಅಧಿಕೃತ ಸುದ್ದಿ ವರದಿಗಳು ಲಭ್ಯವಾಗಿಲ್ಲ. 7 ಡಿಸೆಂಬರ್ 2022 ರ ಝೀ ನ್ಯೂಸ್ ನ ಇತ್ತೀಚಿನ ವರದಿಯ ಪ್ರಕಾರ, “ಬ್ರೆಜಿಲ್ ಫುಟ್‌ಬಾಲ್ ದಂತಕಥೆ ಪೀಲೆ ಅವರ ಆರೋಗ್ಯ ಸುಧಾರಿಸುತ್ತಿದೆ ಮತ್ತು ಅವರಿಗೆ “ಯಾವುದೇ ಹೊಸ ತೊಂದರೆಗಳಿಲ್ಲ” ಎಂದು ವೈದ್ಯರು ಮಂಗಳವಾರ ಹೇಳಿದ್ದಾರೆ ಎಂಬ ವರದಿಗಳು ಲಭ್ಯವಾಗಿದೆ.

ಪೀಲೆ ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಮಿಂಟ್ ವರದಿ ಮಾಡಿದೆ. ಡಿಸೆಂಬರ್ 6 ರಂದು ವೈದ್ಯರು ನೀಡಿರುವ ಹೇಳಿಕೆಯ ಪ್ರಕಾರ “ಕ್ಯಾನ್ಸರ್ ನಿಂದ ಬಳಲುತ್ತಿರುವ ಪೀಲೆ ಅವರನ್ನು ಕಿಮೊಥೆರಪಿ ಸಂಬಂಧಿತ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಿಗೆ ಶ್ವಾಸಕೋಶದ ಸೋಂಕು ಕೂಡ ಇತ್ತು. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಅವರ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ” ಎಂದು ವೈದ್ಯಕೀಯ ವೈದ್ಯಕೀಯ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.

4 ಡಿಸೆಂಬರ್ 2022 ರಂದು ಪೀಲೆ ಅವರ ಆರೋಗ್ಯದ ಕುರಿತು ಇಸ್ರೇಲ್‌ನ ಆಲ್ಬರ್ಟ್ ಐನ್‌ಸ್ಟೈನ್ ಆಸ್ಪತ್ರೆಯಿಂದ ತಮ್ಮ ಅಧಿಕೃತ  Instagram ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು “ನನಗೆ ದೇವರಲ್ಲಿ ಬಹಳಷ್ಟು ನಂಬಿಕೆ ಇದೆ. ಪ್ರಪಂಚದಾದ್ಯಂತ ನಾನು ನಿಮ್ಮಿಂದ ಸ್ವೀಕರಿಸುವ ಪ್ರೀತಿಯ ಪ್ರತಿ ಸಂದೇಶವೂ ನನ್ನಲ್ಲಿ ಶಕ್ತಿ ತುಂಬಿಸುತ್ತಿದೆ. ನನಗೆ ಆರೈಕೆ ಮಾಡುತ್ತಿರುವ ವೈದ್ಯಕೀಯ ಮತ್ತು ಶುಶ್ರೂಷ ತಂಡಕ್ಕೆ ಧನ್ಯವಾದ ಹೇಳುತ್ತೇನೆ. ವಿಶ್ವಕಪ್‌ನಲ್ಲಿ ಬ್ರೆಜಿಲ್ ತಂಡವನ್ನು ಬೆಂಬಲಿಸಿ’ ಎಂದು ಪೀಲೆ ಇನ್​ಸ್ಟಾಗ್ರಾಮ್​ ಪೋಸ್ಟ್​ ಮಾಡಿದ್ದಾರೆ.

ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಸಂದರ್ಭದಲ್ಲಿ ಪೀಲೆ ಆರೋಗ್ಯಕ್ಕಾಗಿ ಫುಟ್ಬಾಲ್​ ಪ್ರೇಮಿಗಳು ಪ್ರಾರ್ಥಿಸುತ್ತಿದ್ದಾರೆ. ಪೀಲೆ ಭಾವಚಿತ್ರವಿರುವ ಬ್ಯಾನರ್‌ಗಳನ್ನು​ ಹಿಡಿದು ಅಭಿಮಾನಿಗಳು ಪ್ರೀತಿ ತೋರಿಸುತ್ತಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ಫುಟ್ಬಾಲ್ ದಂತಕಥೆ ಪೀಲೆ ಅವರು ನಿಧನ ಹೊಂದಿದ್ದಾರೆ ಎಂದು ಸುಳ್ಳು ಸುದ್ದಿ ಹರಡಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ನ್ಯೂಸ್‌ಮೀಟರ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಕಾಂಗ್ರೆಸ್ ವಕ್ತಾರೆ ರಾಹುಲ್ ಗಾಂಧಿಯನ್ನು ‘ಡೋಂಗಿ ಹಿಂದೂ’ ಎಂದು ಹೇಳಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights